Advertisement

ಅಭ್ಯರ್ಥಿ ಆಯ್ಕೆ: ಸಂಸದೀಯ ಮಂಡಳಿ ನಿರ್ಧಾರ ಅಂತಿಮ

01:50 AM Mar 13, 2019 | Team Udayavani |

ಬೆಂಗಳೂರು: ಅಪರಾಧ ಹಿನ್ನೆಲೆ ಇಲ್ಲದ ಯಾರೂ ಬೇಕಾದರೂ ಬಿಜೆಪಿ ಸೇರಬಹುದು. ಆದರೆ ರಾಜ್ಯದ 28 ಲೋಕಸಭಾ ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಅಂತಿಮಗೊಳಿಸುವ ಅಧಿಕಾರ ವಿರುವುದು ಪಕ್ಷದ ಸಂಸದೀಯ ಮಂಡಳಿಗೆ ಮಾತ್ರ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದರು.

Advertisement

ಹಾಸನ ಲೋಕಸಭಾ ಕ್ಷೇತ್ರಕ್ಕೆ ಬಿಜೆಪಿ ಅಭ್ಯರ್ಥಿಯಾಗಿ ಕಾಂಗ್ರೆಸ್‌ನ ಮಾಜಿ ಸಚಿವ ಎ.ಮಂಜು ಕಣಕ್ಕಿಳಿಯಲಿದ್ದಾರೆ ಎಂಬ ಮಾತುಗಳ ಬಗ್ಗೆ ಪ್ರತಿಕ್ರಿಯಿಸಿದ ಅವರು, ರಾಷ್ಟ್ರ ಹಾಗೂ ಪಕ್ಷದ ಹಿತವನ್ನು ಗಮದಲ್ಲಿಟ್ಟುಕೊಂಡು ವರಿಷ್ಠರು ಸೂಕ್ತ ತೀರ್ಮಾನ ಕೈಗೊಳ್ಳಲಿದ್ದಾರೆ. ಈ ಬಗ್ಗೆ ಯಾರೇ ಮಾತನಾಡಿದರೂ ಅದು ಅವರ ಅಭಿಪ್ರಾಯವಷ್ಟೇ. ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಸುಮಲತಾ ಅಂಬರೀಷ್‌ ಅವರನ್ನು ಬೆಂಬಲಿಸುವ ವಿಚಾರದ ಬಗ್ಗೆ ಈಗಲೇ ಮಾತನಾಡುವುದು ಸೂಕ್ತವಲ್ಲ. ಉಡುಪಿ- ಚಿಕ್ಕಮಗಳೂರು ಕ್ಷೇತ್ರದಲ್ಲಿ ಯಾರೇ ಅಭ್ಯರ್ಥಿಯಾದರೂ ನಾವು ಬಿಜೆಪಿಯನ್ನು ಗೆಲ್ಲಿಸುತ್ತೇವೆ. ಕಲಬುರಗಿಯಲ್ಲೂ ಈ ಬಾರಿ ಕಮಲ ಅರಳಿಸುತ್ತೇವೆ ಎಂದರು.

ಅಭ್ಯರ್ಥಿಗಳ ಆಯ್ಕೆ ಬಗ್ಗೆ ಈವರೆಗೆ ರಾಜ್ಯ ಬಿಜೆಪಿ ಕೋರ್‌ ಕಮಿಟಿಯಲ್ಲಿ ಯಾವುದೇ ಚರ್ಚೆಯಾಗಿಲ್ಲ. ಅಲ್ಲದೇ ಬಿಜೆಪಿ ಸಂಸದೀಯ ಮಂಡಳಿಯಲ್ಲೂ ಚರ್ಚೆಯಾಗಿಲ್ಲ. ಎಲ್ಲರೂ ತಮ್ಮ ಅಭಿಪ್ರಾಯಗಳನ್ನು ಹೇಳಬಹುದು. ಆದರೆ ಅಂತಿಮವಾಗಿ ಕೋರ್‌ ಕಮಿಟಿಯಲ್ಲಿ ಚರ್ಚೆಯಾದರೂ ಶಿಫಾರಸು ಮಾತ್ರ ಮಾಡಲಾಗುತ್ತದೆ ಎಂದು ಹೇಳಿದರು

ಒಳಿತು- ಕೆಡಕಿಗೆ ಅವರ ತಂದೆಯೇ ಕಾರಣ

ಸಮಾಜ ಕಲ್ಯಾಣ ಸಚಿವ ಪ್ರಿಯಾಂಕ್‌ ಖರ್ಗೆ ಅವರು “ನಮೋ ಎಂದರೆ ನಮಗೆ ಮೋಸ’ ಎಂದು ನೀಡಿರುವ ಹೇಳಿಕೆಗೆ ತಿರುಗೇಟು ನೀಡಿದ ಸಿ.ಟಿ.ರವಿ, “ಕಾಂಗ್ರೆಸ್‌ ನಾಯಕರ ಹೇಳಿಕೆಗಳು ಹತಾಶೆಯನ್ನು ತೋರಿಸುತ್ತಿದೆ. 50 ವರ್ಷ ಅವರ ತಂದೆಯವರು ಅಧಿಕಾರದಲ್ಲಿದ್ದರೇ ಹೊರತು ನರೇಂದ್ರ ಮೋದಿಯವರಲ್ಲ. ಹಾಗಾಗಿ ಆ ಜಿಲ್ಲೆಗಾದ ಒಳಿತು- ಕೆಡಕಿಗೂ ಅವರ ತಂದೆಯವರೇ ಕಾರಣ. ಅವರ ಜಿಲ್ಲೆಗೆ ಮೋಸವಾಗಿದ್ದರೆ ಅದಕ್ಕೆ ಅವರ ತಂದೆ ಮಲ್ಲಿಕಾರ್ಜುನ ಖರ್ಗೆಯವರೇ ಕಾರಣ. ಕಾಂಗ್ರೆಸ್‌ನವರು ಹತಾಶೆಯ ಹೇಳಿಕೆ ನೀಡುತ್ತಿದ್ದಾರೆ. ಇದು ಚುನಾವಣೆಗೂ ಮುನ್ನಾ ಸೋಲು ಒಪ್ಪಿಕೊಂಡಂತೆ ಕಾಣುತ್ತಿದೆ ಎಂದು ಹೇಳಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next