ಕಲಬುರಗಿ: ಪಿಎಸ್ಐ ನೇಮಕಾತಿಯ ಪರೀಕ್ಷೆಯಲ್ಲಿ ನ ಅಕ್ರಮ ಬಯಲು ಮಾಡಿದ ಅಭ್ಯರ್ಥಿಯನ್ನು ಪೊಲೀಸ ರು ಬಂಧಿಸಿದ್ದಾರೆ.
ಬಂಧಿತ ಶ್ರೀಧರ ಪವಾರ ಎಂಬಾತನಾಗಿದ್ದು, ಈತ ಪಿಎಸ್ಐ ಪರೀಕ್ಷೆ ಬರೆದು ಆಯ್ಕೆಯಾಗಿದ್ದ. ಆದರೆ ತನ್ನ ಗೆಳೆಯ ವಿರೇಶ ನಿಡಗುಂದಾ ಸಹ ಪಿಎಸ್ಐ ಆಗಿ ಆಯ್ಕೆಯಾಗಿದ್ದ. ವಿರೇಶನನ್ನು, ನೀರಾವರಿ ಇಲಾಖೆಯ ಸಹಾಯಕ ಇಂಜನಿಯರ್ ಮಂಜುನಾಥ ಮೇಳಕುಂದಿಯನ್ನು ಭೇಟಿಯಾಗಿ ವ್ಯವಹಾರ ಕುದುರಿಸಿದ್ದ. ಮೇಳಕುಂದಿಯ ಸಹಾಯ ಅಂದರೆ, ಬ್ಲೂಟೂತ್ ಮೂಲಕ ಪರೀಕ್ಷೆಯಲ್ಲಿ ನೂರಕ್ಕೆ ನೂರು ಅಂಕ ಪಡೆದಿದ್ದ. ನೌಕರಿಯಾಗಲು ಕಾರಣ ನಾನೇ ಆಗಿದ್ದೇನೆ. ಹೀಗಾಗಿ ಈಗ 40 ಲಕ್ಷ ರೂ.ಗಿಂತ ಅಧಿಕ ಹಣ ನೀಡಿದ್ದಿ, ಆದರೆ ನನಗೂ 5 ಲಕ್ಷ ರೂ.ನೀಡುವಂತೆ ವಿನಂತಿಸಿದ್ದಾನೆ. ಆದರೆ ಹಣ ನೀಡಲು ವಿರೇಶ ನಿರಾಕರಿಸಿದ್ದಾನೆ.
ಕೊನೆಗೆ ಒಎಂಆರ್ ಶೀಟ್ ನಲ್ಲಿ ಕೇವಲ 21 ಪ್ರಶ್ನೆಗಳಿಗೆ ಉತ್ತರಿಸಿದ್ದ . ಒಎಂಆರ್ ಶೀಟ್ ನಲ್ಲಿ ಇದು ಸ್ಪಷ್ಟವಾಗಿ ನಮೂದನೆಯಾಗಿತ್ತು. ಇದನ್ನು ಶ್ರೀಧರ ಫೋಟೋ ತೆಗದಿದ್ದಾನೆ. ತನ್ನ ಹೆಸರು ಬರೆಯಲಿಕ್ಕೆ ಬಾರದ ವಿರೇಶ ರ್‍ಯಾಂಕ್ ಬಂದಿದ್ದು, ಈ ಕುರಿತು ತನಿಖೆ ನಡೆಸುವಂತೆ ದಾಖಲೆ ಸಮೇತ ಪ್ರಕರಣ ಹೊರ ತಂದು ದೂರು ನೀಡಿದ್ದಾನೆ. ಇದೇ ದೂರು ಅಕ್ರಮ ಬಯಲಾಗಲು ಸಾಕ್ಷಿಯಾಯಿತು.
ಇದೇ ಕಾರಣದ ಹಿನ್ನೆಲೆಯಲ್ಲಿ ಸರ್ಕಾರ ಪ್ರಕರಣ ಸಿಒಡಿಗೆ ವಹಿಸಲಾಯಿತು. ಕಳೆದ ಏ. 9ರಂದು ಕಲಬುರಗಿಯ ಚೌಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ವಿರೇಶನನ್ನು ಮೊದಲನೆಯದಾಗಿ ಬಂಧಿಸಲಾಯಿತು.
ಪ್ರಮಾಣಿಕವಾಗಿ ಪರೀಕ್ಷೆ ಬರೆದು ಪಿಎಸ್ಐ ಯಾಗಿ ಆಯ್ಕೆ ಯಾಗಿದ್ದ ಶ್ರೀಧರ ಪವಾರ ಗೆಳೆಯನ ಅಕ್ರಮ ಬಯಲಿಗೆ ಎಳೆದು ತಂದಿದ್ದ. ಆದರೆ ಶ್ರೀ ಧರ ಇಂಜಿನಿಯರ್ ಮಂಜುನಾಥಗೆ ಮಧ್ಯ ವರ್ತಿಯಾಗಿ 36 ಲಕ್ಷ ರೂ.ಗೆ ವ್ಯವಹಾರ ಕುದುರಿಸಿದ್ದ. ಎಲ್ಲರಿಗೆ 50 ಲಕ್ಷ ರೂ ವ್ಯವಹಾರ ಕುದುರಿಸಿದರೆ ನಿನಗೆ 36 ಲಕ್ಷ ರೂ.ಗೆ ಮುಗಿಸಲಾಗಿದೆ. ಹೀಗಾಗಿ 10-15 ಲಕ್ಷ ರೂ ಉಳಿಸಲಾಗಿದೆ. ಹೀಗಾಗಿ 5 ಲಕ್ಷ ರೂ ನೀಡು ಎಂದು ಒತ್ತಾಯಿಸಿ, ಕೊನೆಗೆ ಪ್ರಕರಣ ಬಯಲಿಗೆ ತಂದು ಈಗ ಪೊಲೀಸ್ ಅತಿಥಿಯಾಗುವಂತಾಗಿದೆ. ಒಟ್ಟಾರೆ ಶ್ರೀಧರ ಪವಾರ ಬಂಧನದ ಮೂಲಕ ಬಂಧಿತರ ಸಂಖ್ಯೆ 25 ಕ್ಕೆ ಏರಿಕೆಯಾಗಿದೆ.