Advertisement

ಭತ್ತದಲ್ಲಿ ಕ್ಯಾನ್ಸರ್‌ ನಿಗ್ರಹ ಅಂಶ

07:30 AM Feb 19, 2018 | Team Udayavani |

ರಾಯಿಪುರ: ಮೂರು ಸಾಂಪ್ರದಾಯಿಕ ಭತ್ತದ ತಳಿಗಳಲ್ಲಿ ಕ್ಯಾನ್ಸರ್‌ ವಿರೋಧಿ ಅಂಶಗಳು ಇರುವುದನ್ನು ವಿಜ್ಞಾನಿಗಳು ಪತ್ತೆ ಮಾಡಿದ್ದಾರೆ. ಛತ್ತೀಸ್‌ಗಢದಲ್ಲಿ ಈ ತಳಿಗಳು ಲಭ್ಯವಿದ್ದು, ಗಥಾÌನ್‌, ಮಹರಾಜಿ ಮತ್ತು ಲೈಚಾ ಭತ್ತದಲ್ಲಿ ಕ್ಯಾನ್ಸರ್‌ ವಿರುದ್ಧ ಹೋರಾಡುವ ಲಕ್ಷಣಗಳಿವೆ ಎಂಬುದನ್ನು ವಿಜ್ಞಾನಿಗಳು ಕಂಡುಕೊಂಡಿದ್ದಾರೆ.

Advertisement

ರಾಯು³ರದ ಇಂದಿರಾ ಗಾಂಧಿ ಕೃಷಿ ವಿಶ್ವವಿದ್ಯಾಲಯ ಮತ್ತು ಮುಂಬಯಿನ ಬಾಭಾ ಅಟೊಮಿಕ್‌ ರಿಸರ್ಚ್‌ ಸೆಂಟರ್‌ನ ಸಂಶೋಧಕರು ಈ ಮಹತ್ವದ ಅನ್ವೇಷಣೆ ಮಾಡಿದ್ದಾರೆ. ಕೃಷಿ ವಿವಿಯಲ್ಲಿ ಸಂಗ್ರಹಿಸಲಾಗಿದ್ದ ಮಾದರಿ ಬೀಜದ ಅಧ್ಯಯನ ಮಾಡಲಾಗಿದ್ದು, ಶ್ವಾಸಕೋಶ ಹಾಗೂ ಸ್ತನ ಕ್ಯಾನ್ಸರ್‌ ಅನ್ನು ಪರಿಹಾರ ಮಾಡುವ ಗುಣವಿದೆ. ಇವು ಮೂಲ ವಂಶವಾಹಿಗಳಿಗೆ ಯಾವುದೇ ಬಾಧೆ ಉಂಟು ಮಾಡದೇ ಕ್ಯಾನ್ಸರ್‌ಕಾರಕ ಅಂಶಗಳನ್ನು ನಿವಾರಿಸುತ್ತವೆ. ಅದರಲ್ಲೂ ಲೈಚಾ ಭತ್ತವು ಈ ನಿಟ್ಟಿನಲ್ಲಿ ಅತ್ಯಂತ ಪರಿಣಾಮಕಾರಿಯಾಗಿದ್ದು, ಕ್ಯಾನ್ಸರ್‌ ಕಾರಕ ಕೋಶಗಳನ್ನು ಸಂಪೂರ್ಣ ನಿರ್ಮೂಲನೆಗೊಳಿಸುವ ಅಂಶವನ್ನು ಹೊಂದಿವೆ.

ಗಥಾÌನ್‌ ಅನ್ನು ಸದ್ಯ ಅಥೆùìಟಿಸ್‌ ಚಿಕಿತ್ಸೆಗೆ ಗ್ರಾಮೀಣ ಪ್ರದೇಶದ ಜನರು ಬಳಸುತ್ತಾರೆ. ಲೈಚಾವನ್ನು ಚರ್ಮ ಸಂಬಂಧಿ ಸಮಸ್ಯೆಗಳ ಪರಿಹಾರಕ್ಕೆ ಬಳಸುತ್ತಿದ್ದಾರೆ. ಕೆಲವು ತಳಿಗಳು ಕ್ಯಾನ್ಸರ್‌ ಕೋಶಗಳು ವೃದ್ಧಿಯಾಗುವುದನ್ನು ತಡೆದರೆ, ಇನ್ನು ಕೆಲವು ತಳಿಗಳು ಕ್ಯಾನ್ಸರ್‌ ಕೋಶಗಳನ್ನು ನಾಶ ಮಾಡುತ್ತವೆ. ಒಬ್ಬ ವ್ಯಕ್ತಿ 200 ಗ್ರಾಂ ಅಕ್ಕಿಯನ್ನು ನಿತ್ಯ ಬಳಸಿದರೆ ಕ್ಯಾನ್ಸರ್‌ ನಿವಾರಣೆ ಮಾಡಬಹುದು ಎಂದು ವಿಜ್ಞಾನಿಗಳು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next