Advertisement

ನೋಟು ರದ್ದತಿ ವೈಫಲ್ಯ: ಇಂದು ಪ್ರತಿಭಟನೆ

04:05 PM Mar 07, 2017 | Team Udayavani |

ಕಲಬುರಗಿ: ನೋಟು ರದ್ದತಿ ವೈಫಲ್ಯವಾಗಿರುವುದನ್ನು ಖಂಡಿಸಿ ಕಲಬುರಗಿ ಉತ್ತರ ಮತಕ್ಷೇತ್ರದ ಶಾಸಕ ಖಮರುಲ್‌ ಇಸ್ಲಾಂ ನೇತೃತ್ವದಲ್ಲಿ ಮಾ. 7ರಂದು ಬೆಳಗ್ಗೆ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.

Advertisement

ಎಐಸಿಐ ಹಾಗೂ ಕೆಪಿಸಿಸಿ ನಿರ್ದೇಶನ ಮೇರೆಗೆ ಉತ್ತರ ಬ್ಲಾಕ್‌ ವತಿಯಿಂದ ಶಹಾಬಜಾರ ಬ್ಲಾಕ್‌  ಕಾಂಗ್ರೆಸ್‌ ಘಟಕದಲ್ಲಿ ನಡೆದ ಸಭೆಯಲ್ಲಿ ಪ್ರತಿಭಟನೆ ಕುರಿತುನಿರ್ಧರಿಸಲಾಯಿತು. ನೋಟು ರದ್ದತಿ ಪರಿಸ್ಥಿತಿ ಸುಧಾರಣೆಗೆ ಪ್ರಧಾನ ಮಂತ್ರಿಗಳು 50 ದಿನ ಕೇಳಿದ್ದರು.

500  ಹಾಗೂ ಸಾವಿರ ನೋಟು ಬ್ಯಾನ್‌ ಮಾಡಿನೂರು ದಿನಗಳಾದರೂ ಪರಿಸ್ಥಿತಿ ಸುಧಾರಣೆಯಾಗಿಲ್ಲ. ಬ್ಯಾನ್‌ ಸಂಪೂರ್ಣ ವಿಫಲವಾಗಿದೆ. ಹೀಗಾಗಿ ಪ್ರತಿಭಟನೆ ಸೂಕ್ತವಾಗಿದೆ ಎಂದು ಶಾಸಕ ಖಮರುಲ್‌ ಇಸ್ಲಾಂ ಹೇಳಿದರು. 

ಕಲಬುರಗಿ ಉತ್ತರ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಮಹಮ್ಮದ್‌ ಅಸಗರ ಚುಲ್‌ಬುಲ್‌, ಮಹಾಪೌರ ಸೈಯ್ಯದ್‌  ಅಹ್ಮದ್‌, ಮಾಜಿ ಮಹಾಪೌರ ಭೀಮರೆಡ್ಡಿ ಪಾಟೀಲ,ಪಾಲಿಕೆ ಸದಸ್ಯ ಶರಣು ಮೋದಿ, ಶೇಖ ಬಾಬಾ, ಮಲ್ಲಿಕಾರ್ಜುನ ಟೆಂಗಳಿ, ಅಬ್ದುಲ್‌ ರಹಿಮಾನ ಮುಲ್ಲಾ, ರವಿ ರಾಠೊಡ, ಇಜಾಜ್‌ ಅಲಿ ಇನಾಂದಾರ, ಆದಿಲ್‌ ಸುಲೇಮಾನ್‌ ಶೇs…, ಅಫ್ಜಲ ಮಹಿಮೂದ ಸೇರಿದಂತೆ ಮುಂತಾದವರಿದ್ದರು.   

Advertisement

Udayavani is now on Telegram. Click here to join our channel and stay updated with the latest news.

Next