ಕೆನಡಾ(ಸರ್ರೆ): ಕೆನಡಾದ ಕಬಡ್ಡಿ ಫೆಡರೇಶನ್ ಅಧ್ಯಕ್ಷ ಕಮಲಜಿತ್ ಸಿಂಗ್ ಕಾಂಗ್ ಅಲಿಯಾಸ್ ನೀತು ಕಾಂಗ್ ಅವರ ಮೇಲೆ ದುಷ್ಕರ್ಮಿಗಳು ಗುಂಡಿನ ದಾಳಿ ಮಾಡಿರುವ ಆಘಾತಕಾರಿ ಘಟನೆ ಸರ್ರೆಯ ಬೇರ್ ಕ್ರೀಕ್ ಪ್ರದೇಶದಲ್ಲಿ ನಡೆದಿದೆ.
ದುಷ್ಕರ್ಮಿಗಳು ಮೊದಲು ಕಮಲಜಿತ್ ಕಾಂಗ್‌ಗಾಗಿ ಅವರ ನಿವಾಸದ ಹೊರಗೆ ಕಾಯುತ್ತಿದ್ದರು. ಕಾಂಗ್ ಮನೆಯಿಂದ ಹೊರಬಂದ ತಕ್ಷಣ ದುಷ್ಕರ್ಮಿಗಳು ಅವರ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ.
ಪೊಲೀಸರು ಬರುವ ಮುನ್ನವೇ ದುಷ್ಕರ್ಮಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ.
ಕಮಲಜಿತ್ ಕಾಂಗ್‌ಗೆ 2 ಗುಂಡುಗಳು ತಗುಲಿವೆ ಎನ್ನಲಾಗಿದೆ. ಒಂದು ಹೊಟ್ಟೆ ಭಾಗಕ್ಕೆ ತಗುಲಿದರೆ, ಮತ್ತೊಂದು ಕಾಲಿಗೆ ತಗುಲಿದೆ ಎಂದು ತಿಳಿದು ಬಂದಿದೆ.
Related Articles
ಸದ್ಯ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಮೂಲತಃ ಜಲಂಧರ್‌ನ ಉಗ್ಗಿ ಗ್ರಾಮದವರಾದ ಕಾಂಗ್ ಕಳೆದ 20 ವರ್ಷಗಳಿಂದ ಕೆನಡಾದಲ್ಲಿ ನೆಲೆಸಿದ್ದಾರೆ. ಅವರು ಉತ್ತರ ಭಾರತ ಸರ್ಕಲ್ ಸ್ಟೈಲ್ ಕಬಡ್ಡಿ ಅಸೋಸಿಯೇಷನ್‌ನ ಸದಸ್ಯರಾಗಿದ್ದರು.