Advertisement

Canada vs India: ಖಲಿಸ್ಥಾನಿಗಳಿಗೆ ಪಾಕ್‌ ಗುಪ್ತಚರ ಸಂಸ್ಥೆ ನೆರವು: ಕೆನಡಾ ಮಾಹಿತಿ!

03:50 AM Oct 17, 2024 | Team Udayavani |

ಹೊಸದಿಲ್ಲಿ: ಕೆನಡಾ ರಾಜಕೀಯದಲ್ಲಿ ಪಾಕಿಸ್ಥಾನ ತನ್ನ ಗುಪ್ತಚರ ಸಂಸ್ಥೆಯ ಮೂಲಕ ಪ್ರಭಾವ ಬೀರುತ್ತಿದೆ. ಪ್ರಮುಖವಾಗಿ ಖಲಿಸ್ಥಾನಿ ಬೆಂಬಲಿಗರಿಗೆ ನೆರವು ನೀಡುತ್ತಿದೆ ಎಂಬ ಆಘಾತಕಾರಿ ವಿಷಯ ಇದೀಗ ಬಹಿರಂಗಗೊಂಡಿದೆ.

Advertisement

ಕೆನಡಾದಲ್ಲಿ ವಿದೇಶಿ ಶಕ್ತಿಗಳ ಕೈವಾಡದ ಬಗ್ಗೆ ಸೆ. 27ರಂದು ನಡೆದ ಸಭೆಯಲ್ಲಿ ಅಲ್ಲಿನ ಗುಪ್ತಚರ ಸಂಸ್ಥೆಯ ಮುಖ್ಯಸ್ಥೆ ವೆನೆಸಾ ಲಾಯ್ಡ ಸ್ವತಃ ಈ ವಿಷಯದ ಬಗ್ಗೆ ಮಾತನಾಡಿದ್ದಾರೆ. ಕೆನಡಾದಲ್ಲಿ ಭಾರತದ ಪ್ರಭಾವವನ್ನು ತಗ್ಗಿಸಲು ಪಾಕಿಸ್ಥಾನವು ಸಂಪೂರ್ಣವಾಗಿ ಖಲಿ ಸ್ಥಾನಿ ಉಗ್ರವಾದವನ್ನು ಬೆಂಬಲಿಸುತ್ತಿದೆ ಎಂದು ಹೇಳಿದ್ದರು.

ಅಲ್ಲದೇ ಕೆನಡಾದಲ್ಲಿ ಪಾಕ್‌ ಗುಪ್ತಚರ ಕಾರ್ಯಾ ಚರಣೆಗಳನ್ನು ಸಹ ನಡೆಸಿರುವ ಬಗ್ಗೆ ಅವರು ಅನುಮಾನ ವ್ಯಕ್ತಪಡಿಸಿದ್ದರು. ಇದೀಗ ಭಾರತ ಮತ್ತು ಕೆನಡಾದ ನಡುವಿನ ರಾಜತಾಂತ್ರಿಕ ಸಂಬಂಧ ನಿಜ್ಜರ್‌ ಹತ್ಯೆ ವಿಚಾರವಾಗಿ ಹದಗೆಟ್ಟಿರುವ ಬೆನ್ನಲ್ಲೇ ಈ ವೀಡಿಯೋ ಮತ್ತೆ ವೈರಲ್‌ ಆಗಿದೆ.

ಭಾರತ ಸಹಕರಿಸಲಿ: ಅಮೆರಿಕ, ಬ್ರಿಟನ್‌
ನಿಜ್ಜರ್‌ ಹತ್ಯೆಗೆ ಸಂಬಂಧಿಸಿದಂತೆ ಕೆನಡಾ ನಡೆಸುತ್ತಿರುವ ತನಿಖೆಗೆ ಭಾರತ ಸಹಕಾರ ನೀಡಬೇಕು ಎಂದು ಅಮೆರಿಕ ಹಾಗೂ ಬ್ರಿಟನ್‌ ಬುಧವಾರ ಹೇಳಿವೆ. ಈ ಪ್ರಕರಣದ ತನಿಖೆಯ ಬಗ್ಗೆ ಮಿತ್ರರಾಷ್ಟ್ರಗಳಿಗೆ ಮಾಹಿತಿ ನೀಡಿದ್ದೇವೆ ಎಂದು ಕೆನಡಾ ಪ್ರಧಾನಿ ಜಸ್ಟಿನ್‌ ಟ್ರೂಡೋ ಹೇಳಿದ ಒಂದು ದಿನದ ಬಳಿಕ 2 ದೇಶಗಳು ಈ ಹೇಳಿಕೆ ಬಿಡುಗಡೆ ಮಾಡಿವೆ.

ಆರೆಸ್ಸೆಸ್‌ ನಿಷೇಧಿಸಿ: ಸಿಕ್ಖ್ ನಾಯಕ
ಕೆನಡಾದಲ್ಲಿ ಆರೆಸ್ಸೆಸ್‌ ಸಂಘಟನೆಯನ್ನು ನಿಷೇಧಿಸಬೇಕು ಮತ್ತು ಭಾರತದ ಮೇಲೆ ಕಠಿನ ನಿರ್ಬಂಧಗಳನ್ನು ವಿಧಿಸಬೇಕು ಎಂದು ಕೆನಡಾದ ಸಿಕ್ಖ್ ನಾಯಕ ಜಗಮೀತ್‌ ಸಿಂಗ್‌ ಹೇಳಿದ್ದಾರೆ. ಆರೆಸ್ಸೆಸ್‌ ಭಾರತದ ಉಗ್ರ ಸಂಘಟನೆ ಎಂದೂ ಕರೆದಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next