Advertisement

India- Canada: ಭಾರತದ ಮೇಲೆ ನಿರ್ಬಂಧ ವಿಧಿಸಿದರೆ ಕೆನಡಾಕ್ಕೆ ನಷ್ಟ!

10:00 AM Oct 17, 2024 | Team Udayavani |

ಹೊಸದಿಲ್ಲಿ: ರಾಜತಾಂತ್ರಿಕ ಸಂಬಂಧ ಹದಗೆಟ್ಟಿರುವ ಬೆನ್ನಲ್ಲೇ ಭಾರತದ ಮೇಲೆ ನಿರ್ಬಂಧ ವಿಧಿಸುವ ಮಾತುಗಳನ್ನು ಕೆನಡಾದ ನಾಯಕರು ಆಡುತ್ತಿದ್ದಾರೆ. ಹೀಗಾದಲ್ಲಿ ಭಾರತಕ್ಕಿಂತ ಕೆನಡಾಕ್ಕೆ ಹೆಚ್ಚಿನ ಸಮಸ್ಯೆ ಉಂಟಾಗುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ.

Advertisement

ಭಾರತ ಮತ್ತು ಕೆನಡಾ ನಡುವೆ ಹೆಚ್ಚಿನ ಪ್ರಮಾಣದಲ್ಲಿ ಬೇಳೆ ಕಾಳುಗಳು ವಿನಿಮಯವಾಗುತ್ತವೆ. ಬೇಳೆ ಕಾಳುಗಳನ್ನು ಪಡೆಯಲು ಕೆನಡಾ ಭಾರತವನ್ನು ಅವಲಂಬಿಸಿದ್ದರೆ, ಭಾರತ ಕೆನಡಾ ಸೇರಿ ಇತರ ದೇಶಗಳಿಂದಲೂ ಆಮದು ಮಾಡಿಕೊಳ್ಳುತ್ತಿದೆ. ಒಂದು ವೇಳೆ ಕೆನಡಾ ನಿರ್ಬಂಧ ವಿಧಿಸಿದರೆ ಕೆನಡಾದಲ್ಲಿ ಬೇಳೆ-ಕಾಳುಗಳ ಬೆಲೆ ಗಗನಕ್ಕೇÃ‌ಬಹುದು ಎಂದು ಮಾಧ್ಯಮವೊಂದು ವರದಿ ಮಾಡಿದೆ.

ಅಲ್ಲದೇ ಭಾರತದ ರಫ್ತು ಪ್ರಮಾಣ 44.5 ಸಾವಿರ ಕೋಟಿ ರೂ.ನಷ್ಟಿದ್ದರೆ, ಆಮದು 35 ಸಾವಿರ ಕೋಟಿ ರೂ.ನಷ್ಟಿದೆ. ಭಾರತ ರಫ್ತು ಮಾಡುವ ವಸ್ತುಗಳಲ್ಲಿ ಪ್ಯಾಕ್‌ ಮಾಡಲಾದ ಔಷಧಗಳು ಮೊದಲ ಸ್ಥಾನದಲ್ಲಿವೆ. ಹೀಗಾಗಿ ಭಾರತದ ಮೇಲೆ ನಿರ್ಬಂಧ ವಿಧಿಸುವುದು ಕೆನಡಾಗೆ ಕಷ್ಟಸಾಧ್ಯವಾದುದು ಎಂದು ವಿಶ್ಲೇಷಣೆಗಳು ತಿಳಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next