ನಾನು ಯಾವತ್ತು ಪಾರ್ಕ್‌ಗೆ ಹೋಗಲ್ವೊ ಆ ದಿನ ನೀವ್ ಕೂಡ ಹೋಗ್ತಿರ್ಲಿಲ್ಲ. ಅಲ್ಲಾರೀ, ಈ ಹುಡುಗ ಪಾರ್ಕ್‌ಗೆ ಬರ್ತಾನೋ ಇಲ್ವೋ ಅಂತ ಕನ್ಫರ್ಮ್ ಮಾಡ್ಕೊಳ್ಳೋಕೆ ಕಿಟಕಿಯಲ್ಲಿ ಕದ್ದು ನೋಡ್ತಾ ಇದ್ರಾ ಹೇಗೆ?
ರೀ ಇವ್ರೇ,
ಯಾವುದನ್ನ ಮರೆಯಬೇಕು ಅಂತ ಸ್ವಲ್ಪ ಹೇಳಿಕೊಡ್ತೀರ? ನನಗಂತೂ ನಿಮ್ಮ ಜೊತೆ ಕಳೆದ ಕ್ಷಣಗಳು ಅಚ್ಚಳಿಯದೆ ನೆನಪಲ್ಲಿ ಉಳಿದುಬಿಟ್ಟಿವೆ ಕಣ್ರಿ ಫಸ್ಟ್ ಟೈಂ ನಿಮ್ಮನ್ನು ನೋಡಿದಾಗ ನೀವು 7ನೇ ತರಗತಿಯಲ್ಲಿ ಇದ್ರಿ ಅನ್ಸುತ್ತೆ. ಅಲ್ಲವೇನ್ರಿ? ನಿಮಗಿಂತ 2 ಕ್ಲಾಸು ಮುಂದಿದ್ದೆ ಅಷ್ಟೇನಪ್ಪ…ಆಗ ತಾನೆ ಮೀಸೆ ಚಿಗುರುತಿದ್ದ ವಯಸ್ಸು ಅಲ್ಲವ? ಎಲ್ಲಾ ಹುಡುಗರ ಥರಾನೇ ನಿಮಗೆ ರೇಗಿಸ್ತಿದ್ದೆ ನೀವು ಭಾಳಾ ಚೆನ್ನಾಗಿದ್ರಿ. ಅದಕ್ಕೇ ರೇಗಿಸ್ತಿದ್ದೆ. ಅಷ್ಟಕ್ಕೇ ಭೂಮಿ ಆಕಾಶಾನೇ ಒಂದಾಗೋ ಹಾಗೆ ಬೈದು ಜಗಳ ಮಾಡಿಬಿಟ್ರಿ ನೀವು..ಅವತ್ತೇ ಕೊನೆ ಅಲ್ಲವ? ಆಮೇಲೆ ಯಾವತ್ತಾದ್ರೂ ನಿಮ್ಮ ಮುಂದೆ ತಲೆಯೆತ್ತಿ ಮಾತಾಡಿದ್ನ? ನಮ್ಮ ಮನೆಯಿಂದ ಕೂಗಳತೆ ದೂರದಲ್ಲೇ ನಿಮ್ಮ ಮನೆ ಇದ್ರೂ, ಒಂದು ದಿನ ಆದ್ರೂ ನಿಮ್ಮ ಮನೆ ಮುಂದೆ ಬಂದು ಹಲ್ಕಿರಿದಿದ್ನ?
ಆದ್ರೆ ಇದ್ದಕ್ಕಿದ್ದಂತೆ ನಿಮ್ಮಲ್ಲಿ ಬದಲಾವಣೆ ಆಗೋಯ್ತು! ನಾನು ಹೋಗೊ ಪಾರ್ಕ್‌ಗೆ ನೀವ್ ಕೂಡ ಬರೋಕೆ ಶುರುಮಾಡಿದ್ರಿ. ಜೊತೆಗೆ, ಯಾವ ರೌಡಿಗೂ ಕಮ್ಮಿ ಇಲ್ಲದಂಥ ಆ ನಾಯಿ ಮರಿ ಬೇರೆ. ಯಾಕೆ? ಈ ಕರಡಿ ಮರಿ ಭಯ ಇತ್ತೇನ್ರಿ ನಿಮಗೆ? ಆಮೇಲೆ ಏನೇನ್ ನಡೀತು ಅಂತಾನೂ ಹೇಳೆ¤àನೆ ಕೇಳಿ- ನಾನು ಯಾವತ್ತು ಪಾರ್ಕ್‌ಗೆ ಹೋಗಲ್ವೊ ಆ ದಿನ ನೀವ್ ಕೂಡ ಹೋಗ್ತಿರ್ಲಿಲ್ಲ. ಅಲ್ಲಾರೀ, ಈ ಹುಡುಗ ಪಾರ್ಕ್‌ಗೆ ಬರ್ತಾನೋ ಇಲ್ವೋ ಅಂತ ಕನ್ಫರ್ಮ್ ಮಾಡ್ಕೊಳ್ಳೋಕೆ ಕಿಟಕಿನಲ್ಲಿ ಕದ್ದು ನೋಡ್ತಾ ಇದ್ರ ಹೇಗೆ? ಮನೆ ಹತ್ರ ಹಿಂಗಾದ್ರೆ ಸ್ಕೂಲ…ನಲ್ಲಿ ಕೂಡ ಬಿಡಲಿಲ್ಲ ನೀವು! ಎದುರಾದಾಗೆಲ್ಲ ಸ್ಮೈಲ್ ಕೊಡೋಕೆ ಶುರು ಮಾಡಿದ್ರಿ, ಇಷ್ಟು ಸಾಕಲ್ಲವೇನ್ರಿ ಈ ಹುಡುಗನಿಗೆ? ಅವತ್ತೂಂದ್ ದಿನ, ಬೆಳಗ್ಗೆ ಎದ್ದೋನೆ, ರಂಗೋಲಿ ಪೌಡರ್ ತಗೊಂಡು ನಾವು ವಾಕಿಂಗ್‌ಗೆ ಹೋಗ್ತಾ ಇದ್ವಲ್ಲ, ಅದೇ ರಸ್ತೆ ಮೇಲೆ “ಪವಿತ್ರಾ, ಐ ಲವ್ ಯೂ’ ಅಂತ ಬರೆದೇ ಬಿಟ್ಟಿದ್ದೆ, ನೆನಪಿದೆಯ? ಆದರೆ ಆ ಅಕ್ಷರಗಳ ಮೇಲೆ (x) ಮಾರ್ಕ್ ಹಾಕಿ ಹೋದ್ರಲ್ಲ? ಅವತ್ತೇ ಕೊನೆ ಅನ್ನಿಸುತ್ತೆ ನಿಮ್ಮ ಮುಖ ನೋಡಿದ್ದು. ಅದಾದ ಸರಿಯಾಗಿ ಒಂದು ವರ್ಷದ ನಂತರ, ಅದೊಂದು ಸಂಜೆ ನೀವೇ ಅಕಸ್ಮಾತ್ ಆಗಿ ಎದುರು ನಿಂತು -“ನಿನ್ನ ಪ್ರೀತಿಸ್ತಿದ್ದೀನಿ’ ಅಂದ್ರಲ್ಲ ..
ಅಮೇಲಿನ ಕತೆ ಕೇಳೊದೇ ಬೇಡಪ್ಪ.. ನಾವು ನೋಡದ ಸಿನಿಮಾಗಳಿಲ್ಲ, ಸುತ್ತದ ಪಾರ್ಕುಗಳಿಲ್ಲ, ಬೆಂಗಳೂರಿನ ಪಾನಿಪೂರಿ ಅಂಗಡಿಯವರೆಲ್ಲ ನಮ್ಮಿಂದಾನೇ ಉದ್ಧಾರ ಆದ್ರು ಅನ್ಸುತ್ತೆ. ನಿಜ ಹೇಳ್ರಿ, ಅಷ್ಟು ದಿನಗಳಲ್ಲಿ ಒಂದು ದಿನ ಆದ್ರೂ ನಿಮ್ಮನ್ನ ಅದೇನೊ ಅಂತಾರಲ್ಲ; ಆ ದೃಷ್ಟಿಯಲ್ಲಿ ನೋಡಿದ್ದೀನೇನ್ರಿ? ನೀವು ಹೇಳೊ ಮಾತಿಗೆಲ್ಲ ತಲೆಯಾಡಿಸ್ತಿದ್ದೆ ಹೊರತು ಒಂದೇ ಒಂದು ಮಾತಾಡ್ತ ಇರ್ಲಿಲ್ಲ.. “ನೀನಿಲ್ದೆ ನಾನು ಬದ್ಕಿರೋದು ಡೌಟು ಕಣೋ’ ಅಂದಾಗ ಮಾತ್ರ I too ಅಂತಿದ್ದೆ ಅಷ್ಟೆ..
ವಿಪರ್ಯಾಸ ಅಂದ್ರೆ, ನೀವು ಇದ್ದಕ್ಕಿದ್ದ ಹಾಗೆ ಮತ್ತೆ ಬದಲಾಗಿ ಹೋದ್ರಿ. ನಿಮ್ಮ ಎಸ್ಸೆಮ್ಮೆಸ್ಸುಗಳು ಖಾಯಿಲೆಗೆ ಬಿದುÌ, ಮೊಬೈಲಂತೂ ಸತ್ತೇ ಹೋಯಿತು. ಕಾರಣ ಕೇಳಿದ್ರೆ -ತಾತ ನನ್ ಹತ್ರ ಭಾಷೆ ತಗೊಂಡ್ರು. ಅವರು ಹೇಳಿದ ಹುಡುಗನನ್ನೇ ಮದ್ವೆ ಆಗಬೇಕಂತೆ ಅಂದ್ರಿ. ಜೊತೆಗೆ, ನನ್ನ ಮರೆತು ಬಿಡು ಪ್ಲೀಸ್ ಅನ್ನೊ ಇನ್ನೊಂದು ಮಾತನ್ನ ಕೂಡ ಸೇರಿಸಿದ್ರಿ, ಆದರೆ ಈ ಸಲ ಮಾತ್ರ I too ಅಂತ ಹೇಳ್ಳೋಕೆ ಆಗ್ಲೆ ಇಲ್ಲ ಕಣ್ರಿ. ನಿಮಗೆಷ್ಟು ಕಲ್ಲು ಮನಸ್ಸಪ್ಪ..ನಮಗೂ ಸ್ವಲ್ಪ ಕೊಡ್ತೀರ? ಕಲ್ಲು ಮನಸು ಕೊಡಿ ಅಂತ ಕೇಳಿದ್ದು ಬೇರೆ ಹುಡುಗಿಯರಿಗೆ ಮೋಸ ಮಾಡೋಕೆ ಅಲ್ಲಾರೀ, ಕೆಲವು ನೆನಪುಗಳನ್ನ ಹೂಳಬೇಕು ಅಂತಿದ್ದೀನಿ, ಅದಕ್ಕೆ…
ಪಾಪದ ಹುಡುಗ