Advertisement

ಕಮಲ ಕೋಟೆಯಲ್ಲಿ ಕೈ ಲಗ್ಗೆ ಸಾಧ್ಯವೇ?

11:43 AM Mar 27, 2019 | Team Udayavani |

ಕ್ಷೇತ್ರದ ವಸ್ತುಸ್ಥಿತಿ: ಒಕ್ಕಲಿಗ ಮತ್ತು ಬ್ರಾಹ್ಮಣ ಸಮುದಾಯ ಅಧಿಕ ಸಂಖ್ಯೆಯಲ್ಲಿರುವ ಪದ್ಮನಾಭನಗರ ವಿಧಾನ ಸಭಾಕ್ಷೇತ್ರ ಬಿಜೆಪಿಯ ಭದ್ರಕೋಟೆ ಎನಿಸಿದೆ. ಪಾಲಿಕೆ ಚುನಾವಣೆಯೇ ಇರಲಿ, ವಿಧಾನಸಭಾ ಅಥವಾ ಲೋಕಸಭಾ ಚುನಾವಣೆಯೇ ಇರಲಿ ಈ ಕ್ಷೇತ್ರದಲ್ಲಿ ಕಮಲ ಅಭ್ಯರ್ಥಿಗೆ ಬಹುಮತ.

Advertisement

ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರಕ್ಕೆ ಸೇರುವ ಈ ಕ್ಷೇತ್ರದಲ್ಲಿ ಕಳೆದ ಬಾರಿ 60.6% ರಷ್ಟು ಮತದಾತರು ಬಿಜೆಪಿಯತ್ತ ಒಲವು ತೋರಿದ್ದರು. ಒಟ್ಟಾರೆ 1,44,963 ಮತಗಳು ಇಲ್ಲಿ ಚಲಾವಣೆಯಾಗಿದ್ದು,ಆ ಪೈಕಿ 48,333 ಮತಗಳು ಕಮಲ ಪಕ್ಷದ ಅಭ್ಯರ್ಥಿಯಾಗಿದ್ದ ಕೇಂದ್ರ ಸಚಿವ ಅನಂತಕುಮಾರ್‌ ಅವರ ಪಾಲಾಗಿದ್ದವು.

ಇವರ ಪ್ರತಿ ಸ್ಪರ್ಧಿಯಾಗಿ ಕಾಂಗ್ರೆಸ್‌ ಪಕ್ಷದಿಂದ ಕಣಕ್ಕಿಳಿದಿದ್ದ ನಂದನ್‌ ನಿಲೇಕಣಿ 30,585 ಮತ್ತು ಜೆಡಿಎಸ್‌ನಿಂದ ಕಣಕ್ಕಿಳಿದಿದ್ದ ಡಾ.ರುತ್‌ಮನೋರಮಾ 3,725 ಮತಗಳನ್ನು ಪಡೆದಿದ್ದರು.ಆದರೆ, ಈ ಬಾರಿ ಕ್ಷೇತ್ರದಲ್ಲಿ ಕಳೆದ ಬಾರಿಯ ಪರಿಸ್ಥಿತಿಯಿಲ್ಲ.

ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿಕೂಟದ ಅಭ್ಯರ್ಥಿಯಾಗಿ ಕಾಂಗ್ರೆಸ್‌ ಪಕ್ಷದ ಹಿರಿಯ ಮುಖಂಡ ಬಿ.ಕೆ.ಹರಿಪ್ರಸಾದ್‌ ಕಣಕ್ಕಿಳಿದಿದ್ದಾರೆ.ಅವರಿಗೆ ಎದುರಾಳಿಯಾಗಿ ತೇಜಸ್ವಿ ಸೂರ್ಯ ಅವರನ್ನು ಬಿಜೆಪಿ ಅದೃಷ್ಟ ಪರೀಕ್ಷೆಗೆ ಇಳಿಸಿದೆ. ಹೀಗಾಗಿ ಕೈ ಮತ್ತು ಬಿಜೆಪಿ ಅಭ್ಯರ್ಥಿಗಳ ನಡುವೆ ಪೈಪೋಟಿ ಏರ್ಪಟ್ಟಿದೆ.

ಇನ್ನೂ, ಪಾಲಿಕೆ ವಿಚಾರಕ್ಕೆ ಬಂದಾಗ ಇಲ್ಲಿ ಕೂಡ ಬಿಜೆಪಿ ಬಿಗಿಹಿಡಿತ ಸಾಧಿಸಿದೆ. 8 ವಾರ್ಡ್‌ಗಳ ಪೈಕಿ ಏಳು ವಾರ್ಡ್‌ಗಳಲ್ಲಿ ಬಿಜೆಪಿ ಪ್ರಾಬಲ್ಯ ಮೆರೆದಿದೆ. ಕಾಂಗ್ರೆಸ್‌ ಪಕ್ಷ ಒಂದು ಸ್ಥಾನ ಪಡೆದಿದ್ದರೆ, ಜೆಡಿಎಸ್‌ ಇಲ್ಲಿ ಖಾತೆ ತೆರೆದಿಲ್ಲ. ಒಕ್ಕಲಿಗರು, ಬ್ರಾಹ್ಮಣರು, ನಾಯ್ಡು ಸಮುದಾಯದವರು ಅಭ್ಯರ್ಥಿ ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸಲಿದ್ದಾರೆ.

Advertisement

ಸಂಸದರಿಂದ ಬಂದ ಪ್ರಮುಖ ಕೊಡುಗೆಗಳು
-ಪದ್ಮನಾಭನಗರ ವಾರ್ಡ್‌ ವ್ಯಾಪ್ತಿಯಲ್ಲಿ ಶಾಲಾ ಕಟ್ಟಡಗಳ ಅಭಿವೃದ್ಧಿಗೆ ಅನುದಾನ
-ರಸ್ತೆ ಮತ್ತು ಮೇಲ್ಸೇತುವೆಗಳ ಅಭಿವೃದ್ಧಿಗೆ ಅನುದಾನ
-ಹುಣಸೆ ಮರ ವಾರ್ಡ್‌ನಲ್ಲಿ ಸಂಸದರ ಅನುದಾನದಲ್ಲಿ ಬಸ್‌ನಿಲ್ದಾಣ ನಿರ್ಮಾಣ

ನೀರಿಕ್ಷೆ
-ರಾಜೀವ್‌ಗಾಂಧಿ ಮಾದರಿಯ ಆಸ್ಪತ್ರೆ
-ಬಾಕಿ ಉಳಿದಿರುವ ಯೋಜನೆ ಅಭಿವೃದ್ಧಿ

-ವಾರ್ಡ್‌ಗಳು- 8
-ಬಿಜೆಪಿ -7
-ಕಾಂಗ್ರೆಸ್‌ – 1
-ಜೆಡಿಎಸ್‌ -0

-ಜನಸಂಖ್ಯೆ -4,37,602
-ಮತದಾರರ ಸಂಖ್ಯೆ -2,68,457
-ಪುರುಷರು -1,37,622
-ಮಹಿಳೆಯರು-1,30,835

2014ರ ಲೋಕಸಭಾ ಚುನಾವಣೆಯಲ್ಲಿ ಈ ಕ್ಷೇತ್ರದಲ್ಲಿ ಚಲಾವಣೆಯಾದ ಮತಗಳು-1,44,963 (59.58%)
-ಬಿಜೆಪಿ ಪಡೆದ ಮತಗಳು -87,810 ಮತಗಳು (60.6%)
-ಕಾಂಗ್ರೆಸ್‌ ಪಡೆದ ಮತಗಳು -48,333 ಮತಗಳು (33.3%)
-ಜೆಡಿಎಸ್‌ ಪಡೆದ ಮತಗಳು -3,602 ಮತಗಳು (2.5%)

2014ರ ಲೋಕಸಭೆ ಚುನಾವಣೆ ವೇಳೆ ಕ್ಷೇತ್ರದ ಚಿತ್ರಣ
-ಆರ್‌.ಅಶೋಕ ಬಿಜೆಪಿ ಶಾಸಕ
-ಪಾಲಿಕೆಯಲ್ಲಿ ಒಟ್ಟು 8
-ಬಿಜೆಪಿ ಸದಸ್ಯರು-5
-ಕಾಂಗ್ರೆಸ್‌ ಸದಸ್ಯರು-2
-ಜೆಡಿಎಸ್‌-1

ಮಾಹಿತಿ: ದೇವೇಶ ಸೂರಗುಪ್ಪ

Advertisement

Udayavani is now on Telegram. Click here to join our channel and stay updated with the latest news.

Next