Advertisement

ಕ್ಯಾಲಿಫೋರ್ನಿಯಾ ಆಲ್ಮಂಡ್‌ ಮೂಲಕ ಅಕ್ರಮ ವಹಿವಾಟು!

12:19 AM Apr 20, 2019 | Team Udayavani |

ಹೊಸದಿಲ್ಲಿ: ಪಾಕಿಸ್ಥಾನದಿಂದ ಭಾರತಕ್ಕೆ ಆಗಮಿಸುತ್ತಿದ್ದ ಕ್ಯಾಲಿಫೋರ್ನಿಯಾ ಆಲ್ಮಂಡ್ಸ್‌ ಉಗ್ರರಿಗೆ ಹಣ ಒದಗಿಸುವ ಮೂಲ ದಾರಿಯಾಗಿತ್ತು ಎಂಬುದು ತಿಳಿದುಬಂದಿದೆ. ಗುರುವಾರವಷ್ಟೇ ಕೇಂದ್ರ ಸರಕಾರವು ಭಾರತ ಮತ್ತು ಪಾಕಿಸ್ಥಾನದ ಮಧ್ಯದ ಎಲ್ಲ ವಹಿವಾಟುಗಳನ್ನೂ ರದ್ದುಗೊಳಿಸಿದ್ದು, ಅಕ್ರಮ ವಹಿವಾಟು, ಮಾದಕ ದ್ರವ್ಯ ಸಾಗಣೆ ಮತ್ತು ಉಗ್ರರಿಗೆ ಹಣಕಾಸು ನೆರವು ನೀಡುವುದನ್ನು ತಡೆಯುವ ನಿಟ್ಟಿನಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.

Advertisement

ಮೂಲಗಳ ಪ್ರಕಾರ, ಅಮೆರಿಕದಲ್ಲಿ ಬೆಳೆಯಲಾಗುವ ಕ್ಯಾಲಿಫೋರ್ನಿಯಾ ಆಲ್ಮಂಡ್ಸ್‌ ಅನ್ನು ಕಡಿಮೆ ದರದಲ್ಲಿ ಭಾರತಕ್ಕೆ ರವಾನಿಸುತ್ತಿದ್ದರು. ಇದನ್ನು ಭಾರತೀಯ ವ್ಯಾಪಾರಿಗಳು ಖರೀದಿಸಿ ಮಾರುಕಟ್ಟೆ ಬೆಲೆಗೆ ಮಾರಾಟ ಮಾಡುತ್ತಿದ್ದರು. ಇದರಿಂದ ಬಂದ ಲಾಭವನ್ನು ಕಾಶ್ಮೀರ ಕಣಿವೆಯಲ್ಲಿನ ಉಗ್ರ ಚಟುವಟಿಕೆಗಳಿಗೆ ನೀಡಲಾಗುತ್ತಿತ್ತು ಎನ್ನಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next