Advertisement

ಶಬರಿಮಲೆ ವಿಮಾನ ನಿಲ್ದಾಣ ಯೋಜನೆಗೆ ಕೇರಳ ಸರಕಾರ ಅಸ್ತು

03:00 PM Feb 15, 2017 | udayavani editorial |

ತಿರುವನಂತಪುರ : ವರ್ಷಂಪ್ರತಿ ಅಯ್ಯಪ್ಪ ಸ್ವಾಮಿ ದೇವರನ್ನು ಭೇಟಿಯಾಗಲು ಬರುವ ಲಕ್ಷಾಂತರ ಯಾತ್ರಿಕರ ಅನುಕೂಲಕ್ಕಾಗಿ ಶಬರಿಮಲೆಯಲ್ಲಿ ಹಸಿರು ವಿಮಾನ ನಿಲ್ದಾಣವನ್ನು ನಿರ್ಮಿಸುವ ಪ್ರಸ್ತಾವಕ್ಕೆ ಕೇರಳ ಸಚಿವ ಸಂಪುಟ ತಾತ್ವಿಕ ಅನುಮತಿ ನೀಡಿದೆ.

Advertisement

ಈ ಪ್ರಸ್ತಾವಿತ ವಿಮಾನ ನಿಲ್ದಾಣದ ನಿರ್ಮಾಣ ಕುರಿತಾದ ಅಧ್ಯಯನವನ್ನು ಕೈಗೊಳ್ಳಲು ಕೇರಳ ಸರಕಾರ ಕೈಗಾರಿಕಾಭಿವೃದ್ಧಿ ನಿಗಮವನ್ನು ಸಚಿವ ಸಂಪುಟ ಕೋರಿದೆ.

ಪ್ರಕೃತ ಯಾತ್ರಿಕರು ರಸ್ತೆ ಮಾರ್ಗವಾಗಿ ಮಾತ್ರವೇ ಶಬರಿಮಲೆಗೆ ಹೋಗಬಹುದಾಗಿದೆ. ಈಚಿನ ವರ್ಷಗಳಲ್ಲಿ ಶಬರಿಮಲೆಗೆ ಹೋಗುವ ಯಾತ್ರಿಕರ ಸಂಖ್ಯೆ ಗಮನಾರ್ಹವಾಗಿ ಏರಿದೆ. 

ಸಿಪಿಎಂ ನೇತೃತ್ವದ ಎಲ್‌ಡಿಎಫ್ ಸರಕಾರ ಈ ಹಿಂದೆ ಎರುಮಲೆ ಸಮೀಪದ ತಾಣವನ್ನು ಪ್ರಸ್ತಾವಿತ ವಿಮಾನ ನಿಲ್ದಾಣ ನಿರ್ಮಾಣಕ್ಕಾಗಿ ಗುರುತಿಸಿತ್ತು. ಎರುಮಲೆ ತಾಣವು ಕೇರಳದ ಪಟ್ಟಣಂತಿಟ್ಟ ಜಿಲ್ಲೆಯಲ್ಲಿನ ಶಬರಿಮಲೆ ದೇವಳದಿಂದ 45 ಕಿ.ಮೀ. ದೂರದಲ್ಲಿದೆ. 

Advertisement

Udayavani is now on Telegram. Click here to join our channel and stay updated with the latest news.

Next