Advertisement

ರಾಜ್ಯ ಬಜೆಟ್ ಬಳಿಕ ಸಚಿವ ಸಂಪುಟ ವಿಸ್ತರಣೆ: ಬಸನಗೌಡ ಪಾಟೀಲ ಯತ್ನಾಳ

04:05 PM Feb 07, 2022 | Team Udayavani |

ವಿಜಯಪುರ: ರಾಜ್ಯದ ಬಜೆಟ್ ಮಂಡನೆ ಬಳಿಕ ಸಂಪುಟ ವಿಸ್ತರಣೆ ಆಗಲಿದೆ. ಸಿಎಂ ಬಸವರಾಜ ಬೊಮ್ಮಾಯಿ-ನಾನು ಇಬ್ಬರೇ ಕುಳಿತು ಅರ್ಧ ಗಂಟೆಗೂ ಹೆಚ್ಚು ಸಮಯ ಮಾತನಾಡಿದ್ದರೂ ಸಚಿವ ಸ್ಥಾನ ನೀಡಿ ಎಂದು ಬೇಡಿಕೆ ಇರಿಸಿಲ್ಲ. ಮಂತ್ರಿ ಸ್ಥಾನಕ್ಕಾಗಿ ಲಾಬಿ ಮಾಡುವುದಿಲ್ಲ ಎಂದು ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.

Advertisement

ಸೋಮವಾರ ನಗರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಸಂಪುಟ ವಿಸ್ತರಣೆ ಮುಖ್ಯಮಂತ್ರಿ ಪರಮಾಧಿಕಾರ ಹಾಗೂ ಹೈಕಮಾಂಡ್ ನಿರ್ಧಾರವಾಗಿರುತ್ತದೆ. ರಾಜ್ಯದ ಸಂಪುಟ ವಿಸ್ತರಣೆ ಯಾವಾಗಲಾದರೂ ಮಾಡಲಿ ನಮ್ಮ ಗಡಿಬಿಡಿ ಮಾಡುವಂಥದೇನೂ ಇಲ್ಲ. ತುರ್ತಾಗಿ ಸಂಪುಟ ವಿಸ್ತರಿಸಿ ಎಂದು ನಾನೇನು ದೆಹಲಿಗೆ ಓಡಾಡಿಲ್ಲ ಎಂದರು.

ವಿಜಯಪುರ ನಗರದ ಅಭಿವೃದ್ಧಿ ವಿಷಯವಾಗಿ ಅರ್ಧ ಗಂಟೆಗೂ ಹೆಚ್ಚು ಸಮಯ ಇಬ್ಬರೇ ಕುಳಿತು ಚರ್ಚಿಸಿದರೂ ಸಚಿವ ಸ್ಥಾನಕ್ಕೆ ಬೇಡಿಕೆ ಇರಿಸಿಲ್ಲ. ನನ್ನನ್ನು ಸಚಿವನನ್ನಾಗಿ ಮಾಡಿ ಎಂದು ಅಂಗಲಾಚಿಲ್ಲಾ. ಮುಂದೆಯೂ ಇದಕ್ಕಾಗಿ ಯಾರ ಕೈಕಾಲು ಬೀಳುವುದಿಲ್ಲ ಎಂದರು.

ಸ್ವಾಮೀಜಿಗಳಿಗೆ ಹಣಕೊಟ್ಟು ಕೆಲಸ: ರಾಜ್ಯದಲ್ಲಿ ಪಂಚಮಸಾಲಿ ಸಮಾಜವನ್ನು ಒಡೆಯಲು ಸಚಿವ ಮುರುಗೇಶ ನಿರಾಣಿ ಮೂರನೇ ಪೀಠ ಸ್ಥಾಪಿಸಲು ಸ್ವಾಮಿಗಳಿಗೆ ಹಣಕೊಟ್ಟು ಹೇಳಿಕೆ ಕೊಡಿಸುವ ಕೆಲಸ ನಡೆಸಿದ್ದಾರೆ. ಪೀಠ ಸ್ಥಾಪನೆಗೆ ಅಯೋಗ್ಯರೊಂದಿಗೆ ಹೋಗುವುದಿಲ್ಲ ಸಚಿವ ಮುರುಗೇಶ ನಿರಾಣಿ ವಿರುದ್ಧ ಗುಡುಗಿದ್ದಾರೆ.

ಇದನ್ನೂ ಓದಿ:ಇಬ್ರಾಹಿಂ ಮನವೊಲಿಕೆಗೆ ಸಿದ್ದರಾಮಯ್ಯ ಯತ್ನ: ಎಚ್.ಸಿ.ಮಹದೇವಪ್ಪ ಸಂಧಾನ ಮಾತುಕತೆ

Advertisement

ಪಂಚಮಸಾಲಿ ಮೂರನೇ ಪೀಠ ಸ್ಥಾಪನೆ ಹಿಂದೆ ಸಚಿವ ನಿರಾಣಿ ಇಲ್ಲ ಎಂದು ಕೆಲ ಸ್ವಾಮೀಜಿಗಳು ಹೇಳಿದ್ದಾರೆ ಎಂಬುದು ನನಗೆ ಗೊತ್ತಿಲ್ಲ. ಆದರೆ ಯಾವ ಸ್ವಾಮಿ ಏನು ಮಾತನಾಡಿದ್ದಾರೆ ಎಂದು ಗೊತ್ತಿದೆ. ಸಚಿವ ನಿರಾಣಿ ಯಾರ್ಯಾರಿಗೆ ಎಷ್ಟೆಷ್ಟು ಹಣ ಕಳುಹಿಸಿದ್ದಾನೆ ಎಂಬುದು ಗೊತ್ತಿದೆ. 2023 ರ ವಿಧಾನಸಭೆ ಚುನಾವಣೆಯಲ್ಲಿ ವಿಜಯಪುರ ನಗರ ಕ್ಷೇತ್ರದಿಂದ ಬಿಜೆಪಿ ಕೆಲ ಮುಖಂಡರು ಟಿಕೆಟ್ ಕೇಳುತ್ತಿರುವುದರ ಹಿಂದೆಯೂ ನಿರಾಣಿ ಹಣ ಕೆಲಸ ಮಾಡುತ್ತಿದೆ. ನಗರ ಕ್ಷೇತ್ರದ ಟಿಕೆಟ್ ಎಲ್ಲಾರೂ ಬೇಡುತ್ತಾರೆ. ಆದರೆ ಬಿಜೆಪಿ ಪಕ್ಷದಲ್ಲಿ ಟಿಕೆಟ್ ಬೇಡಲು ಅರ್ಜಿ ಕೊಡುವ ಪದ್ದತಿ ಇಲ್ಲ ಎಂದು ಕುಟುಕಿದರು.

ಫ್ಯಾಕ್ಟರಿಯ ಸಕ್ಕರೆ ತಂದು ಮಾಧ್ಯಮದವರಿಗೆ ಚಹಾ ಮಾಡಿ ಕೊಡುತ್ತಿದ್ದಾರೆ. ನೀವು ಕೂಡಾ ಸಚಿವ ನಿರಾಣಿ ಅವರನ್ನು ಗೌರವದಿಂದಲೇ ಕಾಣಬೇಕು ಎಂದು ವ್ಯಂಗ್ಯವಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next