Advertisement

ರಾಜ್ಯ ಸಹಕಾರ ಸಂಘಗಳ ಚುನಾವಣೆ ಇನ್ನು ಪಾರದರ್ಶಕ

01:27 AM Oct 13, 2022 | Team Udayavani |

ಹೊಸದಿಲ್ಲಿ: ಬಹುರಾಜ್ಯ ಸಹಕಾರ ಸಂಘಗಳ ಕಾಯ್ದೆಯ ತಿದ್ದುಪಡಿಗೆ ಮುಂದಾಗಿರುವ ಕೇಂದ್ರ ಸರಕಾರ, ಚುನಾ ವಣ ವ್ಯವಸ್ಥೆಯಲ್ಲಿ ಸುಧಾರಣೆ, ಆಡಳಿತದಲ್ಲಿ ಪಾರದರ್ಶಕತೆ ಮತ್ತು ಹೊಣೆದಾಯಿತ್ವ ತರಲು ನಿರ್ಧರಿಸಿದೆ.

Advertisement

ಬುಧವಾರ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಈ ತೀರ್ಮಾನ ತೆಗೆದುಕೊಳ್ಳಲಾಗಿದೆ.

97ನೇ ಸಾಂವಿಧಾನಿಕ ತಿದ್ದುಪಡಿ ಮೂಲಕ ಬಹುರಾಜ್ಯ ಸಹಕಾರ ಸಂಘಗಳ(ತಿದ್ದುಪಡಿ) ಕಾಯ್ದೆ, 2022ಯನ್ನು ಜಾರಿಗೆ ತರುವುದಾಗಿ ಕೇಂದ್ರ ಪ್ರಸಾರ ಖಾತೆ ಸಚಿವ ಅನುರಾಗ್‌ ಠಾಕೂರ್‌ ಹೇಳಿದ್ದಾರೆ.

ಸರಾಗ ವ್ಯಾಪಾರ, ವಹಿವಾಟು, ಹೆಚ್ಚಿನ ಪಾರದರ್ಶಕತೆ ಮತ್ತು ಸಹಕಾರ ಸಂಘಗಳ ಆಡಳಿತವನ್ನು ಉತ್ತಮಗೊಳಿಸಲು ಈ ತಿದ್ದುಪಡಿ ನೆರವಾಗಲಿದೆ. ಸಹಕಾರ ಸಂಘಗಳಲ್ಲಿ ನಡೆಯು ತ್ತಿರುವ ಹಣಕಾಸು ವಂಚನೆ, ಚುನಾವಣೆ ನಡೆಸುವಲ್ಲಿ ವಿಳಂಬ ಮತ್ತು ಒಬ್ಬನೇ ವ್ಯಕ್ತಿ ದೀರ್ಘಾವಧಿಯವರೆಗೆ ಅಧಿಕಾರ ನಡೆಸುವುದನ್ನು ಇದು ತಪ್ಪಿಸಲಿದೆ ಎಂದರು.

ಸದ್ಯ ದೇಶದಲ್ಲಿ 1500 ಬಹು-ರಾಜ್ಯ ಸಹಕಾರ ಸಂಘಗಳಿವೆ. ಸಂಘದ ಸದಸ್ಯರ ಆರ್ಥಿಕ ಮತ್ತು ಸಾಮಾಜಿಕ ಜೀವನವನ್ನು ಉತ್ತಮಗೊಳಿಸುವ ಮೂಲಕ ದೇಶದ ಆರ್ಥಿಕ ಪ್ರಗತಿಗೂ ಉತ್ತೇಜನ ನೀಡುತ್ತಿವೆ. ಈ ಬಹುರಾಜ್ಯ ಸಹಕಾರ ಸಂಘಗಳು ಕೇಂದ್ರ ಸರಕಾರದ ಅಧೀನದಲ್ಲೇ ಇರುವುದರಿಂದ ತಿದ್ದುಪಡಿ ಮಾಡುತ್ತಿದ್ದೇವೆ ಎಂದು ತಿಳಿಸಿದ್ದಾರೆ.

Advertisement

ರೈಲ್ವೇ ಸಿಬಂದಿಗೆ ಹಬ್ಬದ ಬೋನಸ್‌: ರೈಲ್ವೇ ಸಿಬಂದಿಗೂ ಸಂತಸದ ಸುದ್ದಿ ನೀಡಲಾಗಿದೆ. 2021-22ರ ವರ್ಷದಲ್ಲಿ ಉತ್ಪಾದನಾ ಸಂಪರ್ಕಿತ ಬೋನಸ್‌ ರೂಪದಲ್ಲಿ 78 ದಿನಗಳ ವೇತನ ಅಥವಾ 17,951 ರೂ.ಗಳಷ್ಟು ಬೋನಸನ್ನು ದಸರೆ ಅಥವಾ ಪೂಜಾ ರಜೆ ವೇಳೆಯಲ್ಲಿ ನೀಡಲು ನಿರ್ಧರಿಸಲಾಗಿದೆ. ಈ ವರ್ಷವೂ 11.27 ಲಕ್ಷ ಸಿಬಂದಿಗೆ ಬೋನಸ್‌ ನೀಡಲಾಗುತ್ತಿದೆ. ಇದರಿಂದ ಕೇಂದ್ರದ ಬೊಕ್ಕಸಕ್ಕೆ 1,832 ಕೋಟಿ ರೂ. ಹೊರೆ ಬೀಳಲಿದೆ ಎಂದು ವಿವರಿಸಿದ್ದಾರೆ.

ತಿದ್ದುಪಡಿ ಮಸೂದೆಯ ಮುಖ್ಯಾಂಶಗಳು
01. ಮಹಿಳೆಯರಿಗೆ ಪ್ರಾತಿನಿಧ್ಯ, ಎಸ್‌ಸಿ/ಎಸ್‌ಟಿ ಸದಸ್ಯರಿಗೆ ಮಂಡಳಿಯಲ್ಲಿ ಅವಕಾಶ.
02. ಚುನಾವಣ ವ್ಯವಸ್ಥೆ ಹಾಗೂ ಸಂಘದ ಕಾರ್ಯ ನಿರ್ವಹಣೆ ಮೇಲೆ ನಿಗಾ ವಹಿಸಿ ಹೊಣೆ ಹೆಚ್ಚಿಸುವುದು.
03. ಸಹಕಾರ ಚುನಾವಣ ಪ್ರಾಧಿಕಾರ, ಮಾಹಿತಿ ಅಧಿಕಾರಿ ಮತ್ತು ಒಂಬುಡ್ಸನ್‌ ನೇಮಕಕ್ಕೆ ಅವಕಾಶ
04. ಸಂಘದ ಮೂರು ಸರ್ವ ಸದಸ್ಯರ ಸಭೆಯಲ್ಲಿ ಹಾಜರಾದವರಿಗೆ ಮಾತ್ರ ಮತದಾನ ಮತ್ತು ಇತರ ಸೌಲಭ್ಯಗಳನ್ನು ಪಡೆಯಲು ಅವಕಾಶ.
05. ಚುನಾವಣೆ ವೇಳೆಯಲ್ಲಿ ಅಕ್ರಮ ಎಸಗಿದರೆ3 ವರ್ಷ ಅವರನ್ನು ಡಿಬಾರ್‌ ಮಾಡುವುದು.
06. ಆಡಳಿತ ಮಂಡಳಿಯಲ್ಲಿ ಇಬ್ಬರು ಮಹಿಳೆ ಯರು, ಎಸ್‌ಸಿ/ಎಸ್‌ಟಿಯವರಿಗೆ 1 ಮೀಸಲು ಸ್ಥಾನ.
07. 500 ಕೋಟಿ ರೂ.ಗಳಿಗಿಂತ ಹೆಚ್ಚಿನ ವಹಿವಾಟು ಇರುವ ಸೊಸೈಟಿಗಳು ಕೇಂದ್ರದಿಂದ ಮಾನ್ಯತೆ ಪಡೆ ದ ಸಿಎಗಳ ಬಳಿಯಲ್ಲೇ ಆಡಿಟ್‌ ಮಾಡಿಸಬೇಕು.

Advertisement

Udayavani is now on Telegram. Click here to join our channel and stay updated with the latest news.

Next