Advertisement

Delhi: ಕೇಂದ್ರ ಸಚಿವರ ಮನೆಯ ಕಾಂಪೌಂಡ್ ಗೆ ಡಿಕ್ಕಿ ಹೊಡೆದ ಕಾರು… ಚಾಲಕನ ವಿಚಾರಣೆ

03:07 PM Aug 24, 2023 | Team Udayavani |

ನವದೆಹಲಿ: ಕೇಂದ್ರ ಭೂ ವಿಜ್ಞಾನ ಸಚಿವ ಕಿರಣ್ ರಿಜಿಜು ಅವರ ದೆಹಲಿಯ ಅಧಿಕೃತ ನಿವಾಸದ ಕಾಂಪೌಂಡ್ ಗೆ ಕಾರೊಂದು ಡಿಕ್ಕಿ ಹೊಡೆಡಿರುವ ಘಟನೆ ನಡೆದಿದೆ.

Advertisement

ಬುಧವಾರ ಘಟನೆ ನಡೆದಿದ್ದು ಡಿಕ್ಕಿಯ ರಭಸಕ್ಕೆ ಗೋಡೆಯ ಒಂದು ಭಾಗ ಮುರಿದು ಬಿದ್ದಿದೆ, ಕೂಡಲೇ ಕಾರ್ಯಪೃತ್ತರದ ಭದ್ರತಾ ಸಿಬ್ಬಂದಿ ಕಾರಿನ ಚಾಲಕನನ್ನು ವಶಕ್ಕೆ ಪಡೆದು ಪೊಲೀಸರಿಗೆ ಒಪ್ಪಿಸಿದ್ದಾರೆ. ಕ್ಯಾಬ್ ಚಾಲಕನನ್ನು ಹರಿಯಾಣದ ನುಹ್ ನಿವಾಸಿ ರಹೀಮ್ ಖಾನ್ ಎಂದು ಗುರುತಿಸಲಾಗಿದೆ.

ಸದ್ಯ ಗುಪ್ತಚರ ಸಂಸ್ಥೆಗಳು ಕ್ಯಾಬ್ ಚಾಲಕನನ್ನು ವಿಚಾರಣೆಗೆ ಒಳಪಡಿಸಿದ್ದು. ಅಪಘಾತದ ಹಿಂದೆ ಯಾವುದೇ ದುರುದ್ದೇಶ ಇರಲಿಲ್ಲ ಎನ್ನಲಾಗಿದ್ದು ಎದುರಿನಿಂದ ಬರುತ್ತಿದ್ದ ಬಸ್ಸಿಗೆ ಡಿಕ್ಕಿ ಹೊಡೆದ ಕಾರು ನಿಯಂತ್ರಣ ತಪ್ಪಿ ಗೋಡೆಗೆ ಡಿಕ್ಕಿ ಹೊಡೆದಿರುವುದು ವಿಚಾರಣೆ ವೇಳೆ ಗೊತ್ತಾಗಿದ್ದು ಸುದೀರ್ಘ ವಿಚಾರಣೆಯ ನಂತರ ಚಾಲಕನನ್ನು ಬಿಡುಗಡೆ ಮಾಡಿದ್ದಾರೆ.

ಕೇಂದ್ರ ಸಚಿವ ಕಿರಣ್ ರಿಜಿಜು ಅವರ ಅಧಿಕೃತ ನಿವಾಸವು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಅಧಿಕೃತ ನಿವಾಸದ ಎದುರು ಭಾಗವಾದ ಕೃಷ್ಣ ಮೆನನ್ ಮಾರ್ಗದಲ್ಲಿದೆ.

2017 ರಲ್ಲೂ ನಡೆದಿತ್ತು:
ಈ ಹಿಂದೆ 2017 ರಲ್ಲಿ, ಕಾರು ಚಾಲಕನೋರ್ವ ರಿಜಿಜು ಅವರ ಅಧಿಕೃತ ನಿವಾಸದ ಗೋಡೆಗೆ ಡಿಕ್ಕಿ ಹೊಡೆದಿರುವ ಘಟನೆ ನಡೆದಿತ್ತು ಈ ಘಟನೆಯಲ್ಲಿ ರಿಜಿಜು ಅವರ ಮನೆಯ ಸಿಐಎಸ್ಎಫ್ ಸಿಬ್ಬಂದಿ ಗಾಯಗೊಂಡಿದ್ದರು ಚಾಲಕನನ್ನು ಬಂಧಿಸಲಾಗಿತ್ತು. ಅಲ್ಲದೆ ವಿಚಾರಣೆಯ ನಂತರ, ನೋಯ್ಡಾ ನಿವಾಸಿಯಾದ ಚಾಲಕ ಕುಡಿದಿರುವುದು ಗೊತ್ತಾಗಿದೆ.

Advertisement

ಇದನ್ನೂ ಓದಿ: Humnabad: ಹೆಚ್ಚಿನ ಹಣ ಪಡೆಯುತ್ತಿರುವ ಇಲಾಖೆಗಳಿಗೆ ಕಡಿವಾಣ : ಸಚಿವ ಕೃಷ್ಣಭೈರೆಗೌಡ

Advertisement

Udayavani is now on Telegram. Click here to join our channel and stay updated with the latest news.

Next