Advertisement

ಕಾಫಿರ್ ರನ್ನು ಕೊಂದರೆ ಸ್ವರ್ಗ ಪ್ರಾಪ್ತಿ?: ಮುಸ್ಲಿಂ ವಿದ್ವಾಂಸರಿಗೆ ಸಿ.ಟಿ.ರವಿ ಪ್ರಶ್ನೆ

07:20 PM Feb 28, 2022 | Team Udayavani |

ಶಿವಮೊಗ್ಗ : ಹತ್ಯೆಗೀಡಾದ ಬಜರಂಗದಳ ಕಾರ್ಯಕರ್ತ ಹರ್ಷ ಮನೆಗೆ ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಸಿ.ಟಿ.ರವಿ ಸೋಮವಾರ ಭೇಟಿ ನೀಡಿ ಕುಟುಂಬದವರಿಗೆ ಸಾಂತ್ವನ ಹೇಳಿದರು. ಅವರೊಂದಿಗೆ ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಬೆಳ್ಳಿ ಪ್ರಕಾಶ್ ಮತ್ತಿತರ ಮುಖಂಡರು ಹಾಜರಿದ್ದರು.

Advertisement

ಸುದ್ದಿಗಾರರೊಂದಿ ಮಾತನಾಡಿದ ಅವರು, ಸರ್ಕಾರ ಕ್ರಮದ ಮೂಲಕ 24 ಗಂಟೆ ಒಳಗೆ ಕೊಲೆ ಆರೋಪಿಗಳನ್ನು ಬಂಧಿಸಲಾಗಿದೆ. ಈಗಾಗಲೇ ಹತ್ತು ಜನ ಆರೋಪಿಗಳನ್ನು ಬಂಧಿಸಲಾಗಿದೆ.ಆರೋಪಿಗಳಿಗೆ ಕುಮ್ಮಕ್ಕು ನೀಡಿದವರು ಯಾರು, ಯಾವ ಸಂಘಟನೆ ಈ ಘಟನೆ ಹಿಂದೆ ಇದೆ ಎಂದು ಮೂಲಕ್ಕೆ ಕೈಹಾಕಿ ಪೊಲೀಸರು ತನಿಖೆ ನಡೆಸುತಿದ್ದಾರೆ ಎಂದರು.

ಹರ್ಷ ಕೊಲೆ ಆರೋಪಿಗಳಿಗೆ ಕಠಿಣ ಶಿಕ್ಷೆಯಾದಾಗ ಮಾತ್ರ ನ್ಯಾಯ ಸಿಕ್ಕಂತಾಗುತ್ತದೆ.ಹರ್ಷ ಕೊಲೆ ಮಾತ್ರವಲ್ಲ, ರಾಜ್ಯದಲ್ಲಿ ಸಾಲು ಸಾಲು ಕೊಲೆಗಳು ನಡೆಯುತ್ತಿದೆ. ಯೋಜನಾಬದ್ಧವಾಗಿ ಹೇಗೆ ಲವ್ ಜಿಹಾದ್ ನಡೆಸುತ್ತಾರೆಯೋ ಹಾಗೆಯೇ ಯೋಜನಾ ಬದ್ಧವಾಗಿ ಹಿಂದು ಧರ್ಮದ ಕೆಲಸದಲ್ಲಿ ತೊಡಗಿದವರನ್ನು ಹತ್ಯೆ ಮಾಡಲಾಗುತ್ತಿದೆ.

ಕೇರಳದಲ್ಲಿ ಟಾರ್ಗೆಟ್ ಮಾಡಿ ಕೊಲೆ ಮಾಡುತ್ತಿರುವಂತೆ ಕರ್ನಾಟಕದಲ್ಲೂ ಹತ್ಯೆ ನಡೆಯುತ್ತಿದೆ. ನಮ್ಮಲ್ಲಿ ಪರೋಪಕಾರ ಮಾಡಿದರೆ ಸ್ವರ್ಗಕ್ಕೆ ಹೋಗುತ್ತಾರೆ ನಂಬಿಕೆ ಇದೆ.ಆದರೆ ಇಸ್ಲಾಂ ನಲ್ಲಿ ಖಾಫೀರ್ ರನ್ನು ಕೊಲೆ ಮಾಡಿದರೆ ಸ್ವರ್ಗ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆಯಿದೆ.ಇದರಿಂದ ಪ್ರಚೋದನೆ ಸಿಗುತ್ತದೆ. ಈ ಬಗ್ಗೆ ಯಾಕೆ ಚರ್ಚೆಯಾಗುತ್ತಿಲ್ಲ‌, ಇದನ್ನು ಪ್ರಶ್ನಿಸಿದರೆ ಕೊಲೆ ಮಾಡಲಾಗುತ್ತಿದೆ.ಭಯದ ಮೂಲಕವೇ ಇಡೀ ಪ್ರಪಂಚವನ್ನು ವಶಪಡಿಸಿಕೊಳ್ಳಲು ನೋಡುತ್ತಾರೆ.ಮತಾಂದತೆಯೇ ಹರ್ಷ ಕೊಲೆಗೆ ಪ್ರಮುಖ ಕಾರಣ ಎಂದರು.

ಇದನ್ನೂ ಓದಿ : ಕಣ್ಣೆತ್ತಿ ನೋಡಿದವರ ಕಣ್ಣುಗಳನ್ನು ಕೀಳುವ ಕೆಲಸ ಮಾಡಬೇಕಾಗಿದೆ : ರೂಪಾಲಿ ನಾಯ್ಕ

Advertisement

ಎಲ್ಲ ಧರ್ಮಗ್ರಂಥಗಳನ್ನು ಚರ್ಚೆಗೊಳಪಡಿಸಬೇಕಿದೆ. ಕೊಲ್ಲುವುದು ಧರ್ಮವೇ ಅಲ್ಲ, ಕಾಯುವುದು ಧರ್ಮ. ಕೊಲ್ಲುವುದು ಮತಾಂಧತೆ, ಮತಾಂಧತೆ ಧರ್ಮಕ್ಕಿರುವ ವ್ಯತ್ಯಾಸ ಗುರುತಿಸದಿರುವುದು ದುರಂತ.ಯಾವ ಧರ್ಮದಲ್ಲಿ ಒಳ್ಳೆಯದಿದೆಯೋ ಅದನ್ನು ನಾವೂ ಅನುಸರಿಸೋಣ. ಎಲ್ಲ ಧರ್ಮ ಗ್ರಂಥಗಳ ಬಗ್ಗೆ ಚರ್ಚೆ ಮಾಡೋಣ. ಯಾವುದರಲ್ಲಿ ಒಳ್ಳೆಯದಿದೆಯೋ ಅದನ್ನು ಅನುಸರಿಸೋಣ. ಯಾವುದರಲ್ಲಿ ಮನುಕುಲಕ್ಕೆ ಒಳ್ಳೆಯದಾಗದ ವಿಷಯಗಳಿವೆಯೋ ಅವುಗಳನ್ನು ಜಗತ್ತಿನಿಂದಲೇ ಹೊರಹಾಕೋಣ. ಭಾರತದ ಮೂಲ ನಿವಾಸಿಗಳು ಮುಂದೆ ಅಸಾಹಯಕರಾಗುವ ಸ್ಥಿತಿ ಬರಲಿದೆ ಎಂದರು.

ದಾರುಲ್ ಇಸ್ಲಾಂ, ದಾರುಲ್ ಅರಬ್ ಎಂದರೇನು? ನಿಮ್ಮಲ್ಲಿ ಸ್ವರ್ಗಕ್ಕೆ‌ ಹೋಗವ ದಾರಿ ಯಾವುದು.ಕಾಫಿರ್ ರನ್ನು ಕೊಂದರೆ ಸ್ವರ್ಗಪ್ರಾಪ್ತಿಯಂತೆ ನಿಮ್ಮ ಧರ್ಮದಲ್ಲಿ ನಿಜವೇ? ಈ ವಿಷಯಗಳ ಬಗ್ಗೆ ಸಾರ್ವಜನಿಕವಾಗಿ ಮಾತನಾಡಿ ನೋಡೋಣ ಎಂದು ಮುಸ್ಲಿಂ ವಿದ್ವಾಂಸರಿಗೆ ಸಿ.ಟಿ.ರವಿ ಪ್ರಶ್ನೆ ಮುಂದಿಟ್ಟರು.

Advertisement

Udayavani is now on Telegram. Click here to join our channel and stay updated with the latest news.

Next