Advertisement

ಅರಾಜಕತೆ ಸೃಷ್ಟಿಸುವುದು ನಾಯಕತ್ವದ ಲಕ್ಷಣವಲ್ಲ: ಕೋಡಿಹಳ್ಳಿ ವಿರುದ್ಧ ಸಿ.ಟಿ.ರವಿ ವಾಗ್ದಾಳಿ

12:43 PM Apr 07, 2021 | Team Udayavani |

ಚಿಕ್ಕಮಗಳೂರು: ಎತ್ತಿಕಟ್ಟುವುದು, ಅರಜಾಕತೆ ಸೃಷ್ಟಿಸುವುದು ಸುಲಭ. ಅರಾಜಕತೆ ಸೃಷ್ಟಿಸುವುದೇ ನಾಯಕತ್ವದ ಲಕ್ಷಣವಲ್ಲ ಎಂದು ಕೋಡಿಹಳ್ಳಿ ಚಂದ್ರಶೇಖರ್ ವಿರುದ್ಧ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ವಾಗ್ದಾಳಿ ನಡೆಸಿದರು.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೋಡಿಹಳ್ಳಿ ಚಂದ್ರಶೇಖರ್ ಇಷ್ಟು ದಿನ ರೈತ ನಾಯಕ, ಈಗ ಕಾರ್ಮಿಕ ನಾಯಕ. ಸಂದರ್ಭ-ಪರಿಸ್ಥಿತಿ ಅರ್ಥೈಸಿಕೊಂಡು ಬೇಡಿಕೆ ಈಡೇರಿಕೆಗೆ ಮುಂದಾಗಬೇಕು. ನೌಕರರು ಅತೀ ಒತ್ತಡ ಹೇರಿದರೆ ಸಂಬಂಧ ಹರಿದು ಹೋಗುತ್ತದೆ. ಸಂಬಂಧ ಹರಿದರೆ ಸರ್ಕಾರಕ್ಕಿಂತ ದೊಡ್ಡವರು ಯಾರೂ ಇಲ್ಲ. ಬೆದರಿಕೆ ಮೂಲಕ ಸರ್ಕಾರವನ್ನು ಮಣಿಸುವುದು ಅಸಾಧ್ಯ ಎಂದರು.

ಸರ್ಕಾರ ರೈತರ ಪರ ತೆಗೆದುಕೊಂಡ ತೀರ್ಮಾನಗಳನ್ನು ರೈತ ವಿರೋಧಿ ಎನ್ನುತ್ತಿದ್ದರು. ಸರ್ಕಾರದ ಮೂರು ಮಸೂದೆಗಳು ರೈತ ಪರವಿರುವ ಮಸೂದೆಗಳು.  ಬೆಳೆಗಳನ್ನು ಎಲ್ಲಿ ಬೇಕಾದರೂ ಮಾರಲು ಅವಕಾಶ ಕೇಳಿದ್ದರು. ಮುಕ್ತ ಅವಕಾಶ ಸಿಕ್ಕ ಮೇಲೆ ರೈತ ವಿರೋಧಿ ಎಂದು ಹೇಳುತ್ತಾರೆ ಎಂದರು.

ಸಚಿವರು ನೌಕರರ ಜೊತೆ ಮಾತನಾಡಿ ಸಮಯ ಕೇಳಿದ್ದಾರೆ. ನೌಕರರು ಒಂದು ತಿಂಗಳು ಸಮಯ ಕೊಟ್ಟು ಕಾದು ನೋಡಬೇಕು ಎಂದು ಹೇಳಿದರು.

ಸಿಎಂ ಬಗ್ಗೆ ಯತ್ನಾಳ್ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಯತ್ನಾಳ್ ಸ್ವಭಾವದ ಬಗ್ಗೆ ಚರ್ಚೆಯಾದಾಗ ಸಿಎಂ ಅವರ ಪರ ಮಾತನಾಡಿದ್ದರು. 2018ರಲ್ಲಿ ಟಿಕೆಟ್ ಕೊಡುವಾಗ ಚರ್ಚೆಯಾಗಿತ್ತು. ಆಗ ಯತ್ನಾಳ್ ಪರ ವಹಿಸಿ ಬಿಎಸ್ ವೈ ಸಮರ್ಥನೆ ಮಾಡಿ ಮಾತನಾಡಿದ್ದರು. ಅವರ ವ್ಯಕ್ತಿಗತ ಸಂಬಂಧ ಚೆನ್ನಾಗಿದೆ ಅವರು ನಿಭಾಯಿಸುತ್ತಾರೆ ಎಂದು ಸಿ.ಟಿ.ರವಿ ಹೇಳಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next