Advertisement

ಸಾಧನೆ, ಮೋದಿ ವರ್ಚಸ್ಸಿನಿಂದ ಬಹುಮತ: ಉನ್ನತ ಶಿಕ್ಷಣ ಸಚಿವ Ashwath Narayan ವಿಶ್ವಾಸ

12:38 AM Apr 11, 2023 | Team Udayavani |

ಬೆಂಗಳೂರು: ಬಿಜೆಪಿ ಸರಕಾರದ ಸಾಧನೆಗಳು ಹಾಗೂ ಪ್ರಧಾನಿ ನರೇಂದ್ರ ಮೋದಿ ಯವರ ವರ್ಚಸ್ಸಿನ ಬಲದಿಂದ ರಾಜ್ಯದಲ್ಲಿ ಸಂಪೂರ್ಣ ಬಹುಮತದೊಂದಿಗೆ ಬಿಜೆಪಿ ಮರಳಿ ಅಧಿಕಾರಕ್ಕೆ ಬರಲಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ| ಸಿ.ಎನ್‌. ಅಶ್ವತ್ಥನಾರಾಯಣ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Advertisement

“ಉದಯವಾಣಿ’ ಕಚೇರಿಯಲ್ಲಿ ನಡೆದ ಸಂವಾದ ದಲ್ಲಿ ಮಾತನಾಡಿದ ಅವರು, ರಾಜ್ಯ ದಲ್ಲಿ ಇದುವರೆಗೆ ಬಿಜೆಪಿಗೆ ಪೂರ್ಣ ಬಹು ಮತ ಬಂದಿರಲಿಲ್ಲ. ಆದರೆ ಈ ಬಾರಿ ದೇಶದ ರಾಜ ಕೀಯ ಚಿತ್ರಣವೇ ಬದಲಾಗಿದೆ. ಕರ್ನಾಟಕ ದಲ್ಲಿ ಆಡಳಿತ ವಿರೋಧಿ ಅಲೆ ಇಲ್ಲ. ಸರಕಾರದ ಪರವಾದ ಅಲೆ ಇದೆ. ನೆಚ್ಚಿನ ಪ್ರಧಾನಿ ನರೇಂದ್ರ ಮೋದಿಯವರ ನಾಯಕತ್ವದಲ್ಲಿ ಬೇರು ಮಟ್ಟದಲ್ಲೂ ಬಿಜೆಪಿ ಭದ್ರವಾಗಿ ಬೆಳೆದಿದೆ.

ಹೀಗಾಗಿ ನಾವು ಮರಳಿ ಅಧಿಕಾರಕ್ಕೆ ಬರುವು ದರಲ್ಲಿ ಯಾವುದೇ ಅನುಮಾನವಿಲ್ಲ ಎಂದರು.ರಾಜ್ಯ ಸರಕಾರ ಎಲ್ಲ ವರ್ಗದವರ ಪರವಾಗಿದೆ. ಮೀಸಲಾತಿ ವಿಚಾರದಲ್ಲಿ ಅತ್ಯಂತ ನ್ಯಾಯ ಸಮ್ಮತ ತೀರ್ಮಾನ ತೆಗೆದುಕೊಂಡಿದ್ದೇವೆ. ಎಲ್ಲ ಜಾತಿ-ಜನಾಂಗಕ್ಕೂ ಅಭಿವೃದ್ಧಿ ನಿಗಮ ಸ್ಥಾಪನೆ ಮಾಡಿದ್ದೇವೆ. ಶಿಕ್ಷಣ, ಉದ್ಯೋಗ, ಕೃಷಿ, ತಂತ್ರಜ್ಞಾನ, ಆವಿಷ್ಕಾರ, ಕೌಶಲಾಭಿವೃದ್ಧಿ, ಈಸ್‌ ಆಫ್ ಡೂಯಿಂಗ್‌ ಬ್ಯುಸಿನೆಸ್‌, ಬಾಹ್ಯಾಕಾಶ ಸೇರಿ ದಂತೆ ಎಲ್ಲ ರಂಗದಲ್ಲೂ ಕರ್ನಾಟಕ ಉಳಿ ದೆಲ್ಲ ರಾಜ್ಯಗಳಿಗಿಂತ ಹೆಚ್ಚು ಪ್ರಗತಿ ಸಾಧಿಸಿದೆ. ಡಿಜಿಟಲ್‌ ಅರ್ಥ ವ್ಯವಸ್ಥೆ ಮಾತ್ರವಲ್ಲ ಕರ್ನಾಟಕ ವನ್ನು ಆಧುನಿಕ ಅರ್ಥ ವ್ಯವಸ್ಥೆಯ ಮುಖ ಎಂದು ಬಣ್ಣಿಸಲಾಗುತ್ತಿದೆ. ಕೃಷಿ ನೀತಿಗಳು ಅತ್ಯುತ್ತಮ ವಾಗಿದೆ. ಇವೆಲ್ಲವೂ ನಮ್ಮ ಸರಕಾರದ ಸಾಧನೆಗಳು. ಯಾವ ರಾಜ್ಯಕ್ಕೆ ಬೇಕಾದರೂ ಹೋಲಿಸಿದರೂ ನಾವು ಈ ಎಲ್ಲ ಸಂಗತಿಗಳಲ್ಲಿ ಮುಂಚೂಣಿ ಯಲ್ಲಿದ್ದೇವೆ. ಈ ಅಭಿವೃದ್ಧಿ ವಿಚಾರ ಗಳನ್ನೇ ಮುಂದಿಟ್ಟುಕೊಂಡು ನಾವು ಚುನಾವಣೆ ಎದುರಿಸುತ್ತೇವೆ. ಮತ್ತೂಮ್ಮೆ ಬಿಜೆಪಿ ಅಧಿಕಾರಕ್ಕೆ ಬರುವುದರಲ್ಲಿ ಅನುಮಾನವಿಲ್ಲ. ವ್ಯಕ್ತಿಗತವಾಗಿ ಕೆಲವು ಕ್ಷೇತ್ರಗಳಲ್ಲಿ ವಿರೋಧವಿದ್ದರೂ ಒಟ್ಟಾರೆ ಯಾಗಿ ಪಕ್ಷದ ಪರವಾದ ಅಲೆ ಇದೆ. ನಮ್ಮ ಸ್ಥಳೀಯ ನಾಯಕತ್ವ ಗಟ್ಟಿಯಾಗಿದೆ ಎಂದರು.

ಸುಮ್ಮನಿರಲು ಸಾಧ್ಯವೇ?
ಅಶ್ವತ್ಥನಾರಾಯಣ್‌ ವಿವಾದಾತ್ಮಕ ಹೇಳಿಕೆಗಳ ಸುಳಿಯಲ್ಲಿ ಸಿಲುಕುವುದೇಕೆ? ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಕೆಲವೊಂದು ಸಂದರ್ಭ ದಲ್ಲಿ ಎಲ್ಲವನ್ನು ನೋಡಿಕೊಂಡು ಸುಮ್ಮನೆ ಕುಳಿತುಕೊಳ್ಳುವುದಕ್ಕೆ ಸಾಧ್ಯವೇ? ಟಿಪ್ಪು ಜಯಂತಿ ನಡೆಸಬೇಡಿ ಎಂದು ಇಡೀ ರಾಜ್ಯದ ಜನರು ಮನವಿ ಮಾಡಿದರೂ ಸಿದ್ದರಾಮಯ್ಯ ಕೇಳಲಿಲ್ಲ. ಅಂಥ ಸಂದರ್ಭದಲ್ಲಿ ನಾವು ಮೌನವಾಗಿ ರುವುದು ಉಚಿತವೇ? ಅದೇ ರೀತಿ ರಾಮನಗರ ಜಿಲ್ಲೆಗೆ ಮೊದಲ ಬಾರಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭೇಟಿ ಕೊಟ್ಟಾಗ ಅವರು ಯಾವ ರೀತಿ ನಡೆದುಕೊಂಡರು? ಜಿಲ್ಲೆಗೆ ಬಂದಾಗ ಪ್ರತಿಯೊಬ್ಬರೂ ಕೆಲವಷ್ಟು ಕರ್ತವ್ಯ ನಿರ್ವಹಿಸಬೇಕಾಗುತ್ತದೆ. ಆಗ ನಡೆದ ಅನುಚಿತ ಘಟನೆಗಳನ್ನು ಕಂಡು ಮೂಕ ಪ್ರೇಕ್ಷಕರಾಗಿರಬೇಕೆ? ನನಗೆ ಸಂಬಂಧಪಡದ ವಿಚಾರ ಗಳ ಬಗ್ಗೆ ಎಳೆದು ತಂದಾಗ ಸುಮ್ಮನಿರ ಬೇಕೆ? ಕೆಲವರು ದೊಡ್ಡ ಧ್ವನಿಯನ್ನೇ ದೊಡ್ಡ ಶಕ್ತಿ ಎಂದು ಭಾವಿಸಿಕೊಂಡಿರುತ್ತಾರೆ ಎಂದು ಟೀಕಿಸಿದರು.

ಉನ್ನತ ಶಿಕ್ಷಣ ರಂಗದಲ್ಲಿ ನಮ್ಮ ಅವಧಿ ಯಲ್ಲಿ ಅನೇಕ ಬದಲಾವಣೆಗಳಾಗಿವೆ. ಕರ್ನಾಟಕ ಎಲ್‌ಎಂಎಸ್‌ ನಮ್ಮ ಶೈಕ್ಷಣಿಕ ಗುಣಮಟ್ಟವನ್ನು ಹತ್ತುಪಟ್ಟು ಹೆಚ್ಚಳ ಮಾಡಿದೆ. ಯುನಿಫೈಡ್‌ ಡೇಟಾ ವಿಚಾರದಲ್ಲಿ ನಾವು ವಿಶ್ವದಲ್ಲೇ ಮುಂದಿದ್ದೇವೆ. ಪಾಲಿಟೆಕ್ನಿಕ್‌ ಪಠ್ಯಕ್ರಮ ಬದಲಾವಣೆ ಯಶಸ್ವಿಯಾಗಿದೆ. 25 ವಿಶ್ವ ವಿದ್ಯಾಲಯಗಳ ನಿರ್ಮಾಣವಾಗಿದೆ ರೀತಿ ಅತ್ಯುತ್ತಮ ಪರಿಕಲ್ಪನೆಯಾಗಿದೆ. ಅದೇ ರೀತಿ ಎನ್‌ಇಪಿಯನ್ನು ಅತ್ಯಂತ ಯಶಸ್ವಿಯಾಗಿ ಅನುಷ್ಠಾನಗೊಳಿಸಿದ ರಾಜ್ಯ ಎಂಬ ಕೀರ್ತಿ ಕರ್ನಾಟಕಕ್ಕೆ ಲಭಿಸಿದೆ. ಸ್ವಾತಂತ್ರ್ಯ ಬಂದು ಇಷ್ಟು ವರ್ಷದಲ್ಲಿ ಇಡೀ ದೇಶದ ಬದಲಾವಣೆಯ ಆಯಾಮವನ್ನೇ ಬದಲಿಸಿದ ಯಾವುದಾದರೂ ಯೋಜನೆ ಎಂದರೆ ಅದು ಎನ್‌ಇಪಿ. ಯಾರು ಎನ್‌ಇಪಿಯನ್ನು ಪರಿಣಾಮಕಾರಿಯಾಗಿ ಜಾರಿ ಗೊಳಿಸುತ್ತಾರೋ ಅವರು ಭವಿಷ್ಯದಲ್ಲಿ ದೇಶ ಆಳುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

Advertisement

ನಮ್ಮ ಪಕ್ಷ ಯಾವುದೇ ಜಾತಿ, ಜನಾಂಗ, ಧರ್ಮಕ್ಕೆ ಸೀಮಿತವಾಗಿಲ್ಲ. ಎಲ್ಲ ವರ್ಗದವರೂ ನಮ್ಮನ್ನು ಬೆಂಬಲಿಸುತ್ತಿದ್ದಾರೆ. ಪಕ್ಷದಲ್ಲಿ ಒಕ್ಕಲಿಗ ನಾಯಕರು ಅನೇಕ ಮಂದಿ ಇದ್ದಾರೆ. ಪಕ್ಷದಲ್ಲಿ ನಾಯಕತ್ವಕ್ಕೆ ಕೊರತೆ ಇಲ್ಲ. ಈ ಸಲ ರಾಮನಗರ ಜಿಲ್ಲೆ ಸಹಿತ ಹಳೆ ಮೈಸೂರು ಭಾಗದಲ್ಲಿ ಪಕ್ಷಕ್ಕೆ ಉತ್ತಮ ಫ‌ಲಿತಾಂಶ ಸಿಗುವ ನಿರೀಕ್ಷೆ ಇದೆ ಎಂದು ಅಶ್ವತ್ಥನಾರಾಯಣ ಹೇಳಿದರು.

ಹೊಂದಾಣಿಕೆ ಇಲ್ಲ
ವ್ಯಕ್ತಿಗತವಾಗಿ ಅನೇಕ ನಾಯಕರ ಜತೆಗೆ ನಾವೆಲ್ಲರೂ ಅನ್ಯೋನ್ಯವಾಗಿರಬಹುದು. ಆದರೆ ರಾಜಕಾರಣದ ವಿಚಾರಕ್ಕೆ ಬಂದಾಗ ನಮ್ಮ ಪಕ್ಷ ಯಾರ ಜತೆಗೂ ಹೊಂದಾಣಿಕೆ ಮಾಡಿ ಕೊಳ್ಳುವ ಪ್ರಶ್ನೆಯೇ ಇಲ್ಲ. ನಾನಂತೂ ವೈಯಕ್ತಿಕ ವಾಗಿ ಕಾಂಪ್ರಮೈಸಿಂಗ್‌ ಪಾಲಿಟಿಕ್ಸ್‌ಗೆ ವಿರುದ್ಧ ವಾಗಿದ್ದೇನೆ. ಕಾಂಗ್ರೆಸ್‌ನವರು ಮಾಡು ತ್ತಿರುವ ರಾಜಕಾರಣದ ಬಗ್ಗೆ ನಾವು ಸರಿ ಯಾಗಿ ವಿವರಣೆ ನೀಡಿದರೆ ಜನ ಅವರನ್ನು ಹತ್ತಿರಕ್ಕೂ ಬಿಟ್ಟು ಕೊಳ್ಳುವುದಿಲ್ಲ. ರಾಜ್ಯದ ಪಿಎಸ್‌ಐ ಹಗರಣ ಸಹಿತ ಹಲವಾರು ಭ್ರಷ್ಟಾಚಾರ ಪ್ರಕರಣ ಗಳಿಗೆ ಕಾಂಗ್ರೆಸಿಗರೇ ಮೂಲ ಅಪ್ಪಂದಿರು. ನಾವು ಅಧಿಕಾರಕ್ಕೆ ಬಂದ ನಂತರವೇ ಈ ಹಗರಣವನ್ನು ಪತ್ತೆ ಹಚ್ಚಿ ತಪ್ಪಿತಸ್ಥರನ್ನು ಬಂಧಿಸಿದ್ದೇವೆ ಎಂದು ಹೇಳಿದರು.

 

Advertisement

Udayavani is now on Telegram. Click here to join our channel and stay updated with the latest news.

Next