ನವದೆಹಲಿ: ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ವಿವಿಧ ರಾಜ್ಯಗಳಿಗೆ ರಾಜ್ಯಪಾಲರನ್ನು ನೇಮಕ ಮಾಡಿ, ಶನಿವಾರ ಆದೇಶ ಹೊರಡಿಸಿದ್ದಾರೆ. ಅದರಂತೆ, ಮೈಸೂರು-ಕೊಡಗು ಲೋಕ ಸಭಾ ಕ್ಷೇತ್ರದ ಮಾಜಿ ಸಂಸದ ಸಿ.ಎಚ್. ವಿಜಯಶಂಕರ್ ಅವರನ್ನು ಮೇಘಾಲಯ ರಾಜ್ಯಪಾಲರನ್ನಾಗಿ ನೇಮಕ ಮಾಡಲಾಗಿದೆ.
ರಾಜಸ್ಥಾನಕ್ಕೆ ಹರಿಭಾವು ಕೃಷ್ಣರಾವ್ ಬಾಗ್ಡೆ, ತೆಲಂಗಾಣಕ್ಕೆ ಜಿಷ್ಣುದೇವ್ ವರ್ಮಾ, ಸಿಕ್ಕಿಮ್‌ಗೆ ಓಂ ಪ್ರಕಾಶ್ ಮಾಥೂರ್, ಜಾರ್ಖಂಡ್‌ಗೆ ಸಂತೋಷ್ ಕುಮಾರ್ ಗಂಗ್ವಾರ್, ಛತ್ತೀಸ್‌ಗಢಗೆ ರಮೇನ್ ದೇಖಾ ಅವರನ್ನು ರಾಜ್ಯಪಾಲರನ್ನಾಗಿ ರಾಷ್ಟ್ರಪತಿಗಳು ನೇಮಕ ಮಾಡಿದ್ದಾರೆ.
ಅದೇ ರೀತಿ, ತೆಲಂಗಾಣ ಹೆಚ್ಚುವರಿ ಜವಾಬ್ದಾರಿ ಯೊಂದಿಗೆ ಜಾರ್ಖಂಡ್‌ನ ರಾಜ್ಯಪಾಲರಾಗಿದ್ದ ಸಿ.ಪಿ.ರಾಧಾಕೃಷ್ಣನ್ ಅವರನ್ನು ಮಹಾರಾಷ್ಟ್ರದ ರಾಜ್ಯಪಾಲರನ್ನಾಗಿ ನೇಮಕ ಮಾಡಲಾಗಿದೆ.
ಅಸ್ಸಾಮ್‌ನ ರಾಜ್ಯಪಾಲರನ್ನು ಪಂಜಾಬ್ ಗೆ ವರ್ಗಾಯಿಸಲಾಗಿದ್ದು, ಹೆಚ್ಚುವರಿಯಾಗಿ ಚಂಡೀಗಢನ ಹೊಣೆ ನೀಡಲಾಗಿದೆ. ಇನ್ನು ಸಿಕ್ಕಿಂನ ರಾಜ್ಯಪಾಲರಾಗಿದ್ದ ಲಕ್ಷ್ಮಣ್ ಪ್ರಸಾದ್ ಆಚಾರ್ಯರನ್ನು ಅಸ್ಸಾಮ್‌ನ ರಾಜ್ಯಪಾಲರ ನ್ನಾಗಿ ನೇಮಕ ಮಾಡಲಾಗಿದೆ. ಜತೆಗೆ ಮಣಿಪುರ ರಾಜ್ಯಪಾಲರ ಹೆಚ್ಚುವರಿ ಜವಾಬ್ದಾರಿ ನೀಡಲಾಗಿದೆ.