Advertisement
ತಾಲೂಕಿನ ಕೋಡಂಬಹಳ್ಳಿಯಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಸಭೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಮೂರು ತಿಂಗಳಲ್ಲಿ 20 ದಿನ ಬಂದಿದ್ದೇನೆ ಅಂತಾ ಹೇಳ್ತಿದ್ದೀರಲ್ಲ ಏನು ಮಾಡಿದ್ರಿ ಬಂದು? ಪಟ್ಟಿ ಕೊಡಿ?, ಒಬ್ಬ 300 ಕೋಟಿ, ಇನ್ನೊಬ್ಬ 500 ಕೋಟಿ ಇನ್ವೆಸ್ಟ್ ಮಾಡಿದ್ದೇವೆ ಅಂತಾನೆ. ಸೇತುವೆಗಳ ನಿರ್ಮಾಣಕ್ಕೆ ನಾನು ಅನುಮತಿ ಕೊಡಿಸಿದ್ದೆ. ಅದಕ್ಕೆ ಚೆಕ್ ಡ್ಯಾಂ ಅಂತ ಪಕ್ಕದಲ್ಲಿ ಬೋರ್ಡ್ ಹಾಕೊಂಡು ಓಡಾಡ್ತಿದ್ದಾರೆ ಎಂದು ದೂರಿದರು.
“ಚನ್ನಪಟ್ಟಣದ ಸೀಟು ಖಾಲಿ ಇರೋದಕ್ಕೆ ಬಂದಿದ್ದೇನೆ’ ಎಂಬ ಡಿ.ಕೆ.ಶಿವಕುಮಾರ್ ಹೇಳಿಕೆಗೆ ಗರಂ ಆದ ಎಚ್.ಡಿ.ಕುಮಾರಸ್ವಾಮಿ, ಚನ್ನಪಟ್ಟಣದ ಚೇರ್ ಖಾಲಿ ಇರೋದಕ್ಕೆ ಬಂದಿದ್ದೀರಾ? ಖಾಲಿ ಇಲ್ಲಾಂದಿದ್ರೆ ಬರ್ತಿರಲಿಲ್ಲವಾ? ಹಾಗಾದರೆ, ನೀವು ಪದೇ ಪದೆ ಇಲ್ಲಿಗೆ ಬರ್ತಿರೋದು ಕುರ್ಚಿಗಾಗಿ ತಾನೇ? ಇಲ್ಲವಾದ್ರೆ ಚನ್ನಪಟ್ಟಣದ ಕಡೆ ನೀವು ತಲೆ ಹಾಕ್ತಿದ್ರಾ, ತಿರುಗಿ ನೋಡ್ತಿರಲಿಲ್ಲ. ಚುನಾವಣೆ, ಕುರ್ಚಿ ಮೇಲೆ ಕಣ್ಣಿಟ್ಟು ಅಭಿವೃದ್ಧಿ ಅಂತಾ ನಾಟಕ ಮಾಡ್ತೀರಾ, ಚನ್ನಪಟ್ಟಣ ಜನರ ಬಗ್ಗೆ ನಿಜವಾಗಿ ಕಾಳಜಿ ಇದ್ದಿದ್ರೆ ಹೀಗೆ ಹೇಳ್ತಿದ್ರಾ, ಚುನಾವಣೆ ಮುಗಿದ ಮೇಲೆ ನೀವು ಮತ್ತೆ ಚನ್ನಪಟ್ಟಣ ಕಡೆ ಬರೋದಿಲ್ಲ. ಟಾಟಾ ಮಾಡ್ಕೊಂಡು ಹೋಗ್ತೀವೆ ಅನ್ನೋದೇ ಇವರ ಮಾತಿನ ಅರ್ಥ ಎಂದು ವಾಗ್ಧಾಳಿ ನಡೆಸಿದರು. ಅಭ್ಯರ್ಥಿಯ ಪಕ್ಷಗಳ ಹೈಕಮಾಂಡ್ ನಿರ್ಧರಿಸುತ್ತೆ
ಎನ್‌ಡಿಎ ಅಭ್ಯರ್ಥಿ ಯಾರೇ ಆದ್ರೂ ಅವರನ್ನು ಗೆಲ್ಲಿಸಿ, ಹಾಗಾಂತ ನೀವು ನನಗೆ ಮಾತು ಕೊಡಿ, ನನಗೆ 3 ಬಾರಿ ಆಪರೇಷನ್ ಆಗಿದೆ. ನಿಮ್ಮ ಸೇವೆ ಮಾಡಲು ನಾನು ರಾಜಕೀಯದಲ್ಲಿ ಉಳಿದಿದ್ದೇನೆ. ದರೋಡೆ ಮಾಡುವವರ ಮಾತು ಕೇಳಬೇಡಿ. ಎನ್‌ಡಿಎ ಅಭ್ಯರ್ಥಿಯಾಗಿ ನಿಖಿಲ್ ಕುಮಾರಸ್ವಾಮಿ ಸ್ಪರ್ಧೆ ವಿಚಾರಕ್ಕೆ ಪ್ರತಿಕ್ರಿಯಿಸಿ, ನಿಖಿಲ್ ಇರ್ತಾರೋ, ಬೇರೆಯವರು ಇರ್ತಾರೋ ಅನ್ನೋದನ್ನ ಎರಡು ಪಕ್ಷಗಳ ಹೈಕಮಾಂಡ್ ನಿರ್ಧರಿಸುತ್ತೆ ಎಂದು ಹೇಳಿದರು.
ನಾಗಮಂಗಲದ ಪ್ರಕರಣದಲ್ಲಿ ಬಂಧಿತರಲ್ಲಿ ಮುಸಲ್ಮಾನರೇ ಹೆಚ್ಚಿದ್ರು. ಆದರೂ ನಾನು ನಮ್ಮ ಲೀಡರ್‌ಗಳಿಗೆ ಹೇಳಿ ಎಲ್ಲರನ್ನೂ ಬಿಡಿಸಿದ್ದೇನೆ. ಆ ಮಹಾನುಭಾವರು ಅವರನ್ನು ಬಿಡಿಸವ್ರಾ ಎಂದು ಎಚ್‌ಡಿಕೆ ವ್ಯಂಗ್ಯವಾಡಿದರು.