ಬೆಂಗಳೂರು: ಮಸ್ಕಿ ಹಾಗೂ ಬಸವಕಲ್ಯಾಣ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಗೆ ಸ್ಪರ್ಧಿ ಸಲು ಚಿಂತಿಸಿರುವ ಜೆಡಿಎಸ್ ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧಿಸುವ ಸಾಧ್ಯತೆ ಕಡಿಮೆ. ಬಸವಕಲ್ಯಾಣ ಕ್ಷೇತ್ರದ ಉಪಚುನಾವಣೆಗೆ ಅಲ್ಪಸಂಖ್ಯಾತರ ಸಮುದಾಯದವರಿಗೆ ಟಿಕೆಟ್ ನೀಡುವ ಬಗ್ಗೆ ಗಂಭೀರ ಚಿಂತನೆ ನಡೆಸಿರುವ ಜೆಡಿಎಸ್, ಮಸ್ಕಿ ಕ್ಷೇತ್ರದ ಉಪಚುನಾ ವಣೆಗೆ ಅಭ್ಯರ್ಥಿಯನ್ನು ಕಣ ಕ್ಕಳಿಸುವ ಬಗ್ಗೆ ಇನ್ನೂ ಅಂತಿಮ ತೀರ್ಮಾನ ಕೈಗೊಂಡಂತಿಲ್ಲ.
ಒಟ್ಟಾರೆ ಜೆಡಿಎಸ್ ಉಪಚುನಾವಣೆಯಲ್ಲಿ ನಾಮ್ ಕೇವಾಸ್ತೆಗೆ ಎಂಬಂತೆ ಸ್ಪರ್ಧಿ ಸುವ ಚಿಂತನೆ ಯಲ್ಲಿದ್ದು, 2023ರ ಸಾರ್ವತ್ರಿಕ ವಿಧಾನಸಭಾ ಚುನಾವಣೆಗೆ ಸಿದ್ಧತೆಗೆ ಹೆಚ್ಚಿನ ಆದ್ಯತೆ ನೀಡುವತ್ತ ಗಮನ ಹರಿಸಿದೆ. ಮಸ್ಕಿ ಹಾಗೂ ಬಸವಕಲ್ಯಾಣ ಕ್ಷೇತ್ರದ ಉಪಚುನಾ ವಣೆ ನಿರೀಕ್ಷಿತವಾಗಿದ್ದರೂ ಜೆಡಿಎಸ್‌ನಲ್ಲಿ ಈವರೆಗೆ ಹೆಚ್ಚಿನ ಪೂರ್ವ ಸಿದ್ಧತೆ ನಡೆಸಿಲ್ಲ. ಉಭಯ ಕ್ಷೇತ್ರಗಳಲ್ಲಿ ಪಕ್ಷದ ಕೇಡರ್ ವ್ಯವಸ್ಥೆಯಿಲ್ಲದ ಕಾರಣ ತಳಮಟ್ಟದಿಂದಲೇ ಪಕ್ಷ ಸಂಘಟಿಸಿ ಸ್ಪರ್ಧೆಯೊಡ್ಡಬೇಕಿದೆ. ಉಪಚುನಾವಣೆ ಘೋಷಣೆಯಾಗಿರುವ ಈ ಹೊತ್ತಿನಲ್ಲಿ ಪಕ್ಷ ಸಂಘಟಿಸಿ ಪ್ರಬಲ ಪೈಪೋಟಿ ನೀಡುವುದು ಕಷ್ಟಸಾಧ್ಯವಾಗಿ ರುವ ಹಿನ್ನೆಲೆಯಲ್ಲಿ ಸ್ಪರ್ಧೆ ಬಗ್ಗೆ ಹೆಚ್ಚಿನ ಒತ್ತು ನೀಡಿದಂತಿಲ್ಲ.
ಲೋಕಸಭಾ ಉಪಚುನಾವಣೆಗೆ ಸ್ಪರ್ಧೆ ಇಲ್ಲ!: ಬೆಳಗಾವಿ ಲೋಕಸಭಾ ಉಪಚುನಾ ವಣೆ ಘೋಷಣೆಯಾಗಿದ್ದರೂ ಜೆಡಿಎಸ್ ಸ್ಪರ್ಧೆ ಸಾಧ್ಯತೆ ಕ್ಷೀಣವೆನಿಸಿದೆ. ಈ ಬಗ್ಗೆ ಪಕ್ಷದ ಮಟ್ಟದಲ್ಲಿ ಉಪಚುನಾವಣೆ ಬಗ್ಗೆ ಯಾವುದೇ ರೀತಿ ಚರ್ಚೆ ನಡೆಯದ ಕಾರಣ ಉಪಚುನಾವಣೆಗೆ ಸಿದ್ಧತೆ ಪ್ರಕ್ರಿಯೆಗಳು ನಡೆದಿಲ್ಲ. ಅಲ್ಲದೆ ಬಿಜೆಪಿ, ಕಾಂಗ್ರೆಸ್ ನಡುವೆ ಸದ್ಯದ ಸಂದರ್ಭದಲ್ಲಿ ಸ್ಪರ್ಧೆಯೊಡ್ಡುವ ರೀತಿಯಲ್ಲಿ ಉಪಚುನಾವಣೆಗೆ ಸಿದ್ಧತೆ ನಡೆಯದ ಕಾರಣ ಸ್ಪರ್ಧೆಯಿಂದ ದೂರ ಉಳಿಯುವ ಸಾಧ್ಯತೆ ಹೆಚ್ಚು ಎನ್ನಲಾಗಿದೆ.
ಬಸವಕಲ್ಯಾಣಕ್ಕೆ ಅಲ್ಪಸಂಖ್ಯಾತ ಅಭ್ಯರ್ಥಿ?: ಕೆಲ ವರ್ಷಗಳಿಂದ ಅಲ್ಪಸಂಖ್ಯಾತ ಸಮು ದಾಯ ಪಕ್ಷ ದಿಂದ ದೂರವಾಗು ತ್ತಿರುವ ಸೂಖಕ್ಷ್ಮವನ್ನು ಗಮನಿಸಿರುವ ಪಕ್ಷದ ನಾಯಕರು ಅಲ್ಪಸಂಖ್ಯಾತ ಸಮುದಾಯವನ್ನು ವಿಶ್ವಾಸ ದಲ್ಲಿ ಟ್ಟುಕೊಳ್ಳುವ ಕಾರ್ಯಕ್ಕೆ ಒತ್ತು ನೀಡಿದ್ದಾರೆ. ಇದೇ ಪ್ರಯತ್ನದ ಭಾಗವಾಗಿ ಕಾಂಗ್ರೆಸ್‌ನ ವಿಧಾನ ಪರಿಷತ್ ಸದಸ್ಯ ಸಿ.ಎಂ. ಇಬ್ರಾಹಿಂ ಅವರನ್ನು ಪಕ್ಷಕ್ಕೆ ಕರೆತಂದು ಪ್ರಮುಖ ಜವಾಬ್ದಾರಿ ವಹಿಸಿ ಸಂಘಟನೆ ಕಾರ್ಯಕ್ಕೆ ನಿಯೋಜಿಸುವ ನಿಟ್ಟಿನಲ್ಲಿಯೂ ಪ್ರಯತ್ನ ನಡೆದಿದೆ. ಇದೀಗ ಬಸವಕಲ್ಯಾಣ ಕ್ಷೇತ್ರದ ಉಪ ಚುನಾವಣೆಗೆ ಅಲ್ಪಸಂಖ್ಯಾತ ಸಮು ದಾಯ ದವರನ್ನೇ ಅಭ್ಯರ್ಥಿ ಮಾಡುವ ಮೂಲಕ ಆ ಸಮುದಾಯದ ವಿಶ್ವಾಸವನ್ನು ಇನ್ನಷ್ಟು ಹೆಚ್ಚಿಸಿಕೊಳ್ಳುವ ಬಗ್ಗೆಯೂ ಪಕ್ಷದಲ್ಲಿ ಗಂಭೀರ ಚರ್ಚೆ ನಡೆದಿದೆ ಎಂದು ಮೂಲಗಳು ಹೇಳಿವೆ.
ಮಸ್ಕಿ ಕ್ಷೇತ್ರದಲ್ಲಿ ಪಕ್ಷಕ್ಕೆ ಉತ್ತಮ ನೆಲೆಯಿಲ್ಲದ ಕಾರಣ ಸ್ಪರ್ಧೆ ಸೂಕ್ತವೇ ಎಂಬ ಬಗ್ಗೆಯೂ ಚರ್ಚೆ ನಡೆದಿದೆ. 2023ರ ವಿಧಾ ನ ಸಭೆ ಚುನಾವಣೆಯಲ್ಲಿ ಪಕ್ಷ ಅಧಿಕಾರ ಹಿಡಿಯಲಿದೆ ಎಂದು ನಾಯಕರು ಹೇಳುತ್ತಿದ್ದರೂ ಉಪಚುನಾವಣೆಗೆ ಹೆಚ್ಚಿನ ಉತ್ಸಾಹ ತೋರದಿರುವುದು ಚರ್ಚೆಗೆ ಗ್ರಾಸವಾಗಿದೆ. ಅಂತಿಮವಾಗಿ ವರಿಷ್ಠರಾದ ಎಚ್.ಡಿ.ದೇವೇ ಗೌಡ, ಮಾಜಿ ಸಿಎಂ ಕುಮಾರಸ್ವಾಮಿಯವರ ನಿರ್ಧಾರದ ಮೇಲೆ ಎಲ್ಲವೂ ಅವಲಂಬಿ ತವಾಗಿದ್ದು, ಕಾದು ನೋಡಬೇಕಿದೆ.
– ಎಂ. ಕೀರ್ತಿಪ್ರಸಾದ್