Advertisement
ರಣಾಂಗಣವಾದ ಕೆ.ಆರ್.ಪೇಟೆಕೆ.ಆರ್.ಪೇಟೆ: ನಾಮಪತ್ರ ಸಲ್ಲಿಸಲು ಕೊನೆಯ ದಿನವಾದ ಸೋಮವಾರ ಕೆ.ಆರ್.ಪೇಟೆಯಲ್ಲಿ ರಣಾಂಗಣ ಸೃಷ್ಟಿಯಾಗಿ, ಬಿಜೆಪಿ ಅಭ್ಯರ್ಥಿ ಕೆ.ಸಿ.ನಾರಾಯಣಗೌಡ ಹಾಗೂ ಸಚಿವ ಜೆ.ಸಿ.ಮಾಧುಸ್ವಾಮಿ ಮೇಲೆ ಜೆಡಿಎಸ್ ಕಾರ್ಯಕರ್ತರಿಂದ ಹಲ್ಲೆಗೆ ಯತ್ನ ನಡೆಯಿತು. ನಾಮಪತ್ರ ಸಲ್ಲಿಕೆಗೆ ತೊಂದರೆ ಉಂಟಾಗದಂತೆ ತಾಲೂಕು ಆಡಳಿತ ಬೆಳಗ್ಗೆ 11 ರಿಂದ 12 ಗಂಟೆಯೊಳಗೆ ಜೆಡಿಎಸ್ ಅಭ್ಯರ್ಥಿಗೆ, ಮಧ್ಯಾಹ್ನ 12 ಗಂಟೆಯಿಂದ 1 ಗಂಟೆಯೊಳಗೆ ಬಿಜೆಪಿ ಅಭ್ಯರ್ಥಿ ಹಾಗೂ ಮಧ್ಯಾಹ್ನ 1ರಿಂದ 2 ಗಂಟೆಯೊಳಗೆ ಕಾಂಗ್ರೆಸ್ ಅಭ್ಯರ್ಥಿ ನಾಮಪತ್ರ ಸಲ್ಲಿಸಲು ಸಮಯ ನಿಗದಿಪಡಿಸಿತ್ತು.
Related Articles
Advertisement
ನಾರಾಯಣಗೌಡರು ಮೆರವಣಿಗೆಯಲ್ಲಿದ್ದ ಜೆಡಿಎಸ್ ಕಾರ್ಯಕರ್ತರ ಬಳಿಗೆ ತೆರಳಲು ಯತ್ನಿಸಿದರಾದರೂ, ಪೊಲೀಸರು ಅದಕ್ಕೆ ಅವಕಾಶ ನೀಡಲಿಲ್ಲ. ಬಳಿಕ, ನಾಮಪತ್ರ ಸಲ್ಲಿಸಲು ನಾರಾಯಣಗೌಡರು ತಾಲೂಕು ಕಚೇರಿಗೆ ಆಗಮಿಸಿದಾಗ ಜೆಡಿಎಸ್ ಕಾರ್ಯಕರ್ತರು, ಬ್ಯಾರಿಕೇಡ್ ಬೇಧಿಸಿಕೊಂಡು ತಾಲೂಕು ಕಚೇರಿಗೆ ನುಗ್ಗುವ ಯತ್ನ ನಡೆಸಿದರು. ಜೆಡಿಎಸ್ ಬಾವುಟಕ್ಕೆ ಅಳವಡಿಸಿದ್ದ ದೊಣ್ಣೆಯನ್ನು ಅವರತ್ತ ತೂರಿದರು. ಪರಿಸ್ಥಿತಿ ವಿಕೋಪಕ್ಕೆ ತಿರುಗುತ್ತಿರುವುದನ್ನು ಕಂಡು, ಪೊಲೀಸರು ನಾರಾಯಣಗೌಡ ಹಾಗೂ ಅವರ ಕುಟುಂಬವನ್ನು ಕಾರಿನಲ್ಲಿ ಕರೆದೊಯ್ದರು.
ನಾಮಪತ್ರ ಸಲ್ಲಿಸಲು ಬಂದು ನಾಮಪತ್ರ ಹುಡುಕಿದರು: ನಾಮಪತ್ರ ಸಲ್ಲಿಸಲು ಚುನಾವಣಾ ಕಚೇರಿಯೊಳಗೆ ಬಂದ ನಾರಾಯಣಗೌಡರು ನಾಮಪತ್ರಕ್ಕೆ ಹುಡುಕಾಡಿದರು. ಆಪ್ತ ಸಹಾಯಕ ನಾಮಪತ್ರ ತಂದುಕೊಟ್ಟರು. ಉಮೇದುವಾರಿಕೆ ಜೊತೆ ಬಿ-ಫಾರಂ ನೀಡದೆ ಕೇವಲ ಎ-ಫಾರಂನ್ನು ಮಾತ್ರ ನೀಡಿದರು. ಚುನಾವಣಾಧಿಕಾರಿ ಬಿ-ಫಾರಂ ಎಲ್ಲಿ ಎಂದು ಕೇಳಿದಾಗ, ಅದಕ್ಕೂ ಹುಡುಕಾಡಿದರು. ಐದು ನಿಮಿಷದ ಬಳಿಕ ಬಿ-ಫಾರಂನ್ನು ಚುನಾವಣಾಧಿಕಾರಿಗೆ ನಾರಾಯಣಗೌಡರು ನೀಡಿದರು. ನಾಮಪತ್ರ ಸಲ್ಲಿಸುವ ಸಮಯದಲ್ಲಿ ಪ್ರಮಾಣಪತ್ರ ಮತ್ತು ದೃಢೀಕರಣ ಪತ್ರ ಓದುವುದಕ್ಕೂ ನಾರಾಯಣಗೌಡರು ತಡವರಿಸಿದರು. ಪಕ್ಕದಲ್ಲೇ ಇದ್ದ ಪತ್ನಿ ದೇವಿಕಾ ಪತಿಗೆ ನೆರವಾದರು. ಚುನಾವಣಾ ಸಿಬ್ಬಂದಿ ಹಾಗೂ ಪತ್ನಿ ಹೇಳಿದ್ದನ್ನು ಕೇಳಿಕೊಂಡು ಓದಿ ಪೂರ್ಣಗೊಳಿಸಿದರು.
ಚೆನ್ನಮ್ಮರಿಂದ “ಬಿ’ಫಾರಂ ಪಡೆದ ಜೆಡಿಎಸ್ ಅಭ್ಯರ್ಥಿ: ಜೆಡಿಎಸ್ ಅಭ್ಯರ್ಥಿ ದೇವರಾಜು ಅವರು ಸೋಮವಾರ ಬೆಳಗ್ಗೆ ಬೆಂಗಳೂರಿನ ಪದ್ಮನಾಭನಗರದಲ್ಲಿರುವ ದೇವೇಗೌಡರ ಮನೆಗೆ ಬಂದು, ದೇವೇಗೌಡರ ಪತ್ನಿ ಚೆನ್ನಮ್ಮ ಅವರಿಂದ ಬಿ-ಫಾರಂ ಪಡೆದುಕೊಂಡರು. ಬಿ-ಫಾರಂನ್ನು ದೇವರ ಮುಂದಿಟ್ಟು ಪೂಜೆ ಸಲ್ಲಿಸಿ, ಚೆನ್ನಮ್ಮರ ಆಶೀರ್ವದಿಸಿ ಪಡೆದರು. ಬಳಿಕ, ಕೆ.ಆರ್.ಪೇಟೆಗೆ ಆಗಮಿಸಿ, ಮನೆ ದೇವರಿಗೆ ಪೂಜೆ ಸಲ್ಲಿಸಿ, ಸಾಸಲು ಗ್ರಾಮದಲ್ಲಿರುವ ಶ್ರೀ ಸೋಮೇಶ್ವರ ಹಾಗೂ ಶ್ರೀ ಶಂಭುಲಿಂಗೇಶ್ವರ ದೇವಾಲಯಗಳಲ್ಲಿ ಪೂಜೆ ಸಲ್ಲಿಸಿ, ನಾಮಪತ್ರ ಸಲ್ಲಿಸಲು ಮೆರವಣಿಗೆಯಲ್ಲಿ ಹೊರಟರು.
ನನ್ನ ರಾಜಕೀಯ ಜೀವನದಲ್ಲಿ ಇಂಥಾ ಗೂಂಡಾಗಿರಿಯನ್ನು ಸಾಕಷ್ಟು ನೋಡಿದ್ದೇನೆ. ಇದಕ್ಕೆಲ್ಲಾ ಹೆದರುವವನು ನಾನಲ್ಲ.-ಜೆ.ಸಿ.ಮಾಧುಸ್ವಾಮಿ, ಸಚಿವ ತಾಲೂಕಿನಲ್ಲಿ ನಡೆಯುತ್ತಿರುವ ಗೂಂಡಾಗಿರಿ ಮಟ್ಟಹಾಕಲೆಂದೇ ನಾನು ಇಲ್ಲಿಗೆ ಬಂದಿದ್ದೇನೆ. ನಾನು ಇದಕ್ಕೆಲ್ಲಾ ಹೆದರುವುದಿಲ್ಲ. ಕಾರ್ಯ ಕರ್ತರು ಧೃತಿಗೆಡಬೇಕಾದ ಅಗತ್ಯವಿಲ್ಲ. ಇಂತಹ ಗೂಂಡಾಗಿರಿ ಮಾಡುವ ವರನ್ನು ಜನರು ಬೆಂಬಲಿಸುವುದಿಲ್ಲ.
-ಕೆ.ಸಿ.ನಾರಾಯಣಗೌಡ, ಬಿಜೆಪಿ ಅಭ್ಯರ್ಥಿ ಬಿಜೆಪಿ ಮೆರವಣಿಗೆ ಮೇಲೆ ಚಪ್ಪಲಿ ತೂರಿದ್ದು ಹಾಗೂ ಸಚಿವರ ಮೇಲೆ ಹಲ್ಲೆಗೆ ಯತ್ನ ನಡೆಸಿದವರು ಜೆಡಿಎಸ್‌ನವರಲ್ಲ. ಜೆಡಿಎಸ್‌ಗೆ ಕೆಟ್ಟ ಹೆಸರು ತರಬೇಕೆಂದು ಯಾರೋ ಈ ರೀತಿ ಮಾಡಿದ್ದಾರೆ.
-ಎಚ್.ಡಿ.ರೇವಣ್ಣ, ಮಾಜಿ ಸಚಿವ