Advertisement
ಚನ್ನಪಟ್ಟಣ ತಾಲೂಕಿನ ಮಳೂರು ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಲ್ಲಿ ಚುನಾವಣ ಪ್ರಚಾರ ನಡೆಸಿದ ಅವರು, ಸಿಎಂ ಹುದ್ದೆಯಂತಹ ಪರಮೋಚ್ಚ ಅಧಿಕಾರವಿದ್ದಾಗಲೇ ಕ್ಷೇತ್ರದ ಅಭಿವೃದ್ಧಿ ಮಾಡಲಾಗದ ಕುಮಾರಸ್ವಾಮಿ ಅವರು ಈಗ ಮಾಡಲು ಸಾಧ್ಯವೇ? ಅಧಿಕಾರ ಇದ್ದಾಗ ಅಭಿವೃದ್ಧಿ ಬಗ್ಗೆ ಚಿಂತಿಸದ ಅವರು, ಇದೀಗ ಮಗನನ್ನು ತಂದು ನಿಲ್ಲಿಸಿದ್ದಾರೆ. ಕುಮಾರಸ್ವಾಮಿ ಸ್ವಾರ್ಥ ರಾಜಕಾರಣ ಮಾಡುತ್ತಿದ್ದು, ಅಭಿವೃದ್ಧಿಗಾಗಿ ಶ್ರಮಿಸುವ ನನಗೆ ಮತ ನೀಡಿ ಆಶೀರ್ವದಿಸಿ ಎಂದರು.
ಕುಮಾರಸ್ವಾಮಿಗೆ ಸಾಕಷ್ಟು ಕ್ಷೇತ್ರವಿದೆ. ಅವರು ಮಂಡ್ಯ, ಹಾಸನ, ರಾಮನಗರ ಅಂತ ಎಲ್ಲ ಕಡೆ ಓಡಾಡುತ್ತಾರೆ. ಆದರೆ, ನನಗೆ ಇರುವುದು ಇದೊಂದೇ ಕ್ಷೇತ್ರ. ಚನ್ನಪಟ್ಟಣವೇ ನನ್ನ ಕರ್ಮಭೂಮಿ, ನಾನು ಇಲ್ಲೇ ಇರುತ್ತೇನೆ. ಚನ್ನಪಟ್ಟಣಕ್ಕೆ ಇದು ವಿಶೇಷವಾದ ಸಂದರ್ಭ. ಈ ಉಪಚುನಾವಣೆಯಲ್ಲಿ ನನ್ನನ್ನ ಗೆಲ್ಲಿಸಿಕೊಡಿ ಎಂದು ವಿನಂತಿಸಿದರು.