Advertisement
ಚನ್ನಪಟ್ಟಣದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಿ.ಪಿ.ಯೋಗೇಶ್ವರ್ ಪರವಾಗಿ ಚುನಾವಣಾ ಪ್ರಚಾರ ನಡೆಸಿದ ಅವರು, ಮೊಮ್ಮಗನನ್ನು ಗೆಲ್ಲಿಸಲು ದೇವೇಗೌಡರು ಇಳಿವಯಸ್ಸಿನಲ್ಲೂ ಇಲ್ಲಿ ಬಂದು ಕಣ್ಣಿರು ಹಾಕುವ ಬದಲು, ತಮ್ಮ ಇನ್ನೊಬ್ಬ ಮೊಮ್ಮಗನಿಂದ ಹಾಸನದಲ್ಲಿ ನೂರಾರು ಹೆಣ್ಣುಮಕ್ಕಳು ಕಣ್ಣೀರು ಹಾಕುತ್ತಿದ್ದಾರಲ್ಲ, ಅಲ್ಲಿಗೆ ಹೋಗಿ ಕಣ್ಣಿರು ಹಾಕಲಿ ಎಂದು ಮಾಜಿ ಪ್ರಧಾನಿ ದೇವೇಗೌಡರ ವಿರುದ್ಧ ವಾಗ್ಧಾಳಿ ನಡೆಸಿದರು.
ಸಿದ್ದರಾಮಯ್ಯನಿಗೆ ಗರ್ವ ಮುರಿಯಬೇಕು ಎಂದು ದೇವೇಗೌಡರು ಹೇಳುತ್ತಾರೆ. ಅಧಿಕಾರ ಬಂದಾಗ ನಾನು ಗರ್ವ ಪಟ್ಟಿಲ್ಲ, ಅಧಿಕಾರ ಇಲ್ಲದಾಗ ಕಣ್ಣಿರು ಹಾಕಿಲ್ಲ. ದೇವೇಗೌಡರು ಈ ವಯಸ್ಸಿನಲ್ಲಿ ಸುಳ್ಳು ಹೇಳುತ್ತಾರೆ. ಗಾಂಧಿ ಕುಟುಂಬ ರಾಜಕಾರಣದ ಬಗ್ಗೆ ಮಾತನಾಡಿದ ದೇವೇಗೌಡರ ಇಡೀ ಕುಟುಂಬವೇ ಇಂದು ರಾಜಕಾರಣದಲ್ಲಿ ಇದೆ. ಅವರಿಗೆ ನಾಚಿಕೆ ಆಗುವುದಿಲ್ಲವೇ ಎಂದು ಪ್ರಶ್ನಿಸಿದರು.