ಬೆಂಗಳೂರು: ರಾಜ್ಯದಲ್ಲಿಇತ್ತೀಚೆಗೆ ನಡೆದಉಪಚುನಾವಣೆಗಳ ಫಲಿತಾಂಶದ ಕುರಿತು ಉಸ್ತುವಾರಿ ಕಾರ್ಯದರ್ಶಿಗಳು ರಾಜ್ಯಾಧ್ಯಕ್ಷರಿಗೆ ವರದಿ ಸಲ್ಲಿಸಿದ್ದಾರೆ.
ಶುಕ್ರವಾರ ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವಬಿಜೆಪಿ ರಾಜ್ಯ ಕಚೇರಿಯಲ್ಲಿ ನಡೆದ ರಾಜ್ಯಪದಾಧಿಕಾರಿಗಳ ಸಭೆಯಲ್ಲಿ ಮಸ್ಕಿ ವಿಧಾನಸಭೆ ಕ್ಷೇತ್ರದ ದವರದಿ ಸಲ್ಲಿಸಿದ ಚುನಾವಣಾ ಉಸ್ತುವಾರಿ ಆಗಿದ್ದರಾಜ್ಯ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ,ಬಸವ ಕಲ್ಯಾಣ ವಿಧಾನಸಭೆ ಕ್ಷೇತ್ರದ ವರದಿಸಲ್ಲಿಸಿದ ರಾಜ್ಯಪ್ರಧಾನ ಕಾರ್ಯದರ್ಶಿ ಅಶ್ವತ್ಥನಾರಾಯಣ ಬೆಳಗಾವಿ ಲೋಕಸಭಾ ಕ್ಷೇತ್ರದವರದಿ ಸಲ್ಲಿಸಿದ ರಾಜ್ಯ ಪ್ರಧಾನ ಕಾರ್ಯದರ್ಶಿಮಹೇಶ್ ಟೆಂಗಿನಕಾಯಿ. ಮಸ್ಕಿ ಕ್ಷೇತ್ರದಲ್ಲಿ ಗೆಲುವಿನಎಲ್ಲಾ ನಿರೀಕ್ಷೆಗಳು ಇತ್ತು, ಆದರೂ ಕೂಡಾಸೋಲಾಯಿತು.
ಕಾಂಗ್ರೆಸ್ ಕೂಡಾ ಗೆಲುವು 50-50ಅಂತಾನೇ ಅಂದುಕೊಂಡಿತ್ತು. ನಾವು ಎಲ್ಲರನ್ನೂ ವಿಶ್ವಾಸಕ್ಕೆತೆಗೆದುಕೊಂಡುಕೆಲಸ ಮಾಡಿದ್ದೆವು.ಆದರೆಈಫಲಿತಾಂಶಆಶ್ಚರ್ಯ ತಂದಿದೆ ಎಂದು ರಾಜ್ಯ ಉಪಾಧ್ಯಕ್ಷವಿಜಯೇಂದ್ರ ವಿವರಣೆ ನೀಡಿದ್ದಾರೆ ಎಂದು ತಿಳಿದುಬಂದಿದೆ. ಬಸವಕಲ್ಯಾಣ ಕ್ಷೇತ್ರದಲ್ಲಿ ಸಚಿವ ಸೋಮಣ್ಣ,ಬಸವರಾಜ ಬೊಮ್ಮಾಯಿ, ಲಕ್ಷ್ಮಣಸವದಿ ಎಲ್ಲರೂ ಸೇರಿ ಒಟ್ಟಾಗಿ ಕೆಲಸ ಮಾಡಿದ್ದು ಫಲ ನೀಡಿತು, ಬಸವಕಲ್ಯಾಣ ಕ್ಷೇತ್ರದಲ್ಲಿ ಸ್ಥಳೀಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸಮಾಡಲಾಯಿತು.
ಯಾವುದೇ ಹೊರಗಿನಕಾರ್ಯಕರ್ತರಿಗೆ ಅವಕಾಶ ಕೊಡಲಿಲ್ಲ ಎಂದು ಅಶ್ವತ್ಥನಾರಾಯಣ ವಿತರಿಸಿದ್ದಾರೆ ಎಂದು ತಿಳಿದು ಬಂದಿದೆ.