Advertisement

ಬಿಡಬ್ಲ್ಯುಎಫ್ ವರ್ಲ್ಡ್ ಟೂರ್ ‌ಬ್ಯಾಡ್ಮಿಂಟನ್‌ : ಸಿಂಧು,ಶ್ರೀಕಾಂತ್‌ ಮೇಲೆ ಭಾರತದ ನಿರೀಕ್ಷೆ

11:40 PM Jan 26, 2021 | Team Udayavani |

ಬ್ಯಾಂಕಾಕ್‌: ಭಾರತದ ಬ್ಯಾಡ್ಮಿಂಟನ್‌ ತಾರೆಗಳಾದ ಕೆ. ಶ್ರೀಕಾಂತ್‌ ಮತ್ತು ಪಿವಿ ಸಿಂಧು ಕಳೆದ ಎರಡು ವಾರಗಳಲ್ಲಿ ಅನುಭವಿಸಿದ ನಿರಾಶೆಗಳನ್ನು ಮರೆಯುವ ತವಕದಲ್ಲಿದ್ದು ಬುಧವಾರ ಇಲ್ಲಿ ಆರಂಭವಾಗುವ ಬಿಡಬ್ಲ್ಯುಎಫ್ ವಿಶ್ವ ಟೂರ್‌ ಫೈನಲ್ಸ್‌ ಕೂಟದಲ್ಲಿ ಗೆಲುವಿನ ನಿರೀಕ್ಷೆಯೊಂದಿಗೆ  ಕಣಕ್ಕಿಳಿಯಲು ಸಜ್ಜಾಗಿದ್ದಾರೆ.

Advertisement

ಈ ಸ್ಪರ್ಧೆಯಲ್ಲಿ ಅಗ್ರ ಸ್ಥಾನದಲ್ಲಿರುವ 8 ಆಟ ಗಾರರು ಮಾತ್ರ ಪ್ರವೇಶ ಪಡೆಯುತ್ತಾರೆ. ಈ ಕೂಟ ಕಳೆದ ಡಿಸೆಂಬರ್‌ನಲ್ಲಿ ಚೀನದಲ್ಲಿ ನಡೆಯ ಬೇಕಿತ್ತು. ಆದರೆ ಕೊರೊನಾ ವೈರಸ್‌ ಹಾವಳಿಯಿಂದ 2021ರ ಜನವರಿಗೆ ಮುಂದೂಡಲ್ಪಟ್ಟಿತು. ಕೂಟದ ಆತಿಥ್ಯ ಕೂಡ ಬದಲಾಗಿ ಥಾಯ್ಲೆಂಡ್‌ ಪಾಲಾಯಿತು.

ಸಿಂಧುಗೆ ಒಲಿದ ಅದೃಷ್ಟ :

ವಿಶ್ವ ರ್‍ಯಾಂಕಿಂಗ್‌ನಲ್ಲಿ ಸಿಂಧು 7ನೇ ಸ್ಥಾನದಲ್ಲಿ ದ್ದರೂ ಕೂಟದ ರ್‍ಯಾಂಕಿಂಗ್‌ನಲ್ಲಿ 10ನೇ ಸ್ಥಾನದಲ್ಲಿದ್ದಾರೆ. ಈ ಸ್ಫರ್ದೆಯಲ್ಲಿ ಆಡುವ ಅವಕಾಶ ಸಿಗಬೇಕಾದರೆ ಅಗ್ರ 8ರಲ್ಲಿ ಸ್ಥಾನ ಪಡೆಯಬೇಕು. ಹಾಗೆಯೇ ಒಂದು ದೇಶದಿಂದ ಇಬ್ಬರಿಗಷ್ಟೇ ಪ್ರವೇಶ ಸಿಗುತ್ತದೆ.  ಅತಿಥೇಯ ನಾಡಿನ ಮೂವರಿದ್ದ ಕಾರಣ ಮತ್ತು ಜಪಾನಿನ ನವೋಮಿ ಒಕುಹಾರ ಕೂಟದಿಂದ ಹಿಂದೆ ಸರಿದ ಕಾರಣದಿಂದ ಈ ಸ್ಥಾನ ಸಿಂಧು ಪಾಲಾಯಿತು.

ಶ್ರೇಷ್ಠ ಪ್ರದರ್ಶನ ಅಗತ್ಯ :

Advertisement

ಟೋಕಿಯೊ ಒಲಿಂಪಿಕ್ಸ್‌ ಹಿನ್ನೆಲೆಯಲ್ಲಿ ಸಿಂಧು ಮತ್ತು ಶ್ರೀಕಾಂತ್‌ ಅವರಿಗೆ ಈ ಟೂರ್ನಿ ಮಹತ್ವದ್ದಾಗಿದೆ. ಕಳೆದ ವಾರವಷ್ಟೆ ಮುಕ್ತಾಯ ಗೊಂಡ ಎರಡು ಹಂತದ “ಥಾಯ್ಲೆಂಡ್‌ ಓಪನ್‌’ನಲ್ಲಿ ನೀರಸ ಪ್ರದರ್ಶನ ತೋರಿದ ಇವರಿಬ್ಬರೂ ಮತ್ತೂಂದು ಸುತ್ತಿನ ಅಗ್ನಿಪರೀಕ್ಷೆಗೆ ಒಳಗಾಗಿದ್ದಾರೆ. 2018ರಲ್ಲಿ ಈ ಕೂಟದ ಚಾಂಪಿಯನ್‌ ಆಗಿದ್ದ ಸಿಂಧು ಬಳಿಕ ಸೆಮಿಫೈನಲ್‌ ಕೂಡ ತಲುಪಿಲ್ಲ. ಅವರಿಂದ ಗ್ರೇಟ್‌ ಕಮ್‌ಬ್ಯಾಕ್‌ ಸಾಧ್ಯವೇ ಎಂಬುದೊಂದು ಪ್ರಶ್ನೆ.

 

Advertisement

Udayavani is now on Telegram. Click here to join our channel and stay updated with the latest news.

Next