Advertisement

T20 World Cup; ಅಫ್ಗಾನಿಸ್ತಾನ ತಂಡಕ್ಕೆ ರಶೀದ್ ಖಾನ್ ನಾಯಕ

01:08 AM May 02, 2024 | Team Udayavani |

ಕಾಬುಲ್‌: ಸ್ಟಾರ್‌ ಆಲ್‌ರೌಂಡರ್‌ ರಶೀದ್‌ ಖಾನ್‌ ಟಿ20 ವಿಶ್ವಕಪ್‌ ಪಂದ್ಯಾವಳಿಯಲ್ಲಿ ಅಫ್ಘಾನಿಸ್ಥಾನ ತಂಡವನ್ನು ಮುನ್ನಡೆಸಲಿದ್ದಾರೆ. ಐಪಿಎಲ್‌ನಲ್ಲಿ ಆಡುತ್ತಿರುವ 8 ಮಂದಿ ಆಟಗಾರರು ಈ ತಂಡದಲ್ಲಿದ್ದಾರೆ.

Advertisement

ತಂಡದಲ್ಲಿರುವುದು ನಾಲ್ವರು ಸ್ಪೆಷಲಿಸ್ಟ್‌ ಬ್ಯಾಟರ್ ಮಾತ್ರ. ಆದರೆ 8 ಮಂದಿ ಆಲ್‌ರೌಂಡರ್‌ ಗಳನ್ನು ಹೊಂದಿದೆ. ಮೂವರು ಮೀಸಲು ಆಟಗಾರ ರಿದ್ದಾರೆ. 2023ರ ಏಕದಿನ ವಿಶ್ವಕಪ್‌ನಲ್ಲಿ ಅಫ್ಘಾನ್‌ ತಂಡವನ್ನು ಮುನ್ನಡೆಸಿದ್ದ ಹಶ್ಮತುಲ್ಲ ಶಾಹಿದಿ ಅವರನ್ನು ಕೈಬಿಡಲಾಗಿದೆ.

ಐಪಿಎಲ್‌ನಲ್ಲಿ ಆಡುತ್ತಿರುವ ಅಫ್ಘಾನ್‌ ತಂಡದ ಆಟಗಾರರೆಂದರೆ ರಶೀದ್‌ ಖಾನ್‌, ಅಜ್ಮತುಲ್ಲ ಒಮರ್‌ಜಾಯ್‌, ನೂರ್‌ ಆಹ್ಮದ್‌, ಫ‌ಜಲ್‌ ಹಕ್‌ ಫಾರೂಖೀ, ನವೀನ್‌ ಉಲ್‌ ಹಕ್‌, ಮೊಹಮ್ಮದ್‌ ನಬಿ, ರೆಹಮಾನುಲ್ಲ ಗುರ್ಬಜ್‌ ಮತ್ತು ಗುಲ್ಬದಿನ್‌ ನೈಬ್‌. ಇವ ರೆಲ್ಲರೂ ಕೂಟದ ಕೊನೆಯ ಹಂತದಲ್ಲಿ ಗೈರಾಗಲಿದ್ದಾರೆ.

ಅಫ್ಘಾನಿಸ್ಥಾನ ತಂಡ
ರಶೀದ್‌ ಖಾನ್‌ (ನಾಯಕ), ರೆಹಮಾನುಲ್ಲ ಗುರ್ಬಜ್‌, ಇಬ್ರಾಹಿಂ ಜದ್ರಾನ್‌, ಅಜ್ಮತುಲ್ಲ ಒಮರ್‌ಜಾಯ್‌, ನಜೀಬುಲ್ಲ ಜದ್ರಾನ್‌, ಮೊಹಮ್ಮದ್‌ ಇಶಾಖ್‌, ಮೊಹಮ್ಮದ್‌ ನಬಿ, ಗುಲ್ಬದಿನ್‌ ನೈಬ್‌, ಕರೀಂ ಜನ್ನತ್‌, ನಂಗ್ಯಾಲ್‌ ಖರೋಟಿ, ಮುಜೀಬ್‌ ಉರ್‌ ರೆಹಮಾನ್‌, ನೂರ್‌ ಅಹ್ಮದ್‌, ನವೀನ್‌ ಉಲ್‌ ಹಕ್‌, ಫ‌ಜಲ್‌ ಹಕ್‌ ಫಾರೂಖೀ, ಫ‌ರೀದ್‌ ಅಹ್ಮದ್‌ ಮಲಿಕ್‌.

ಮೀಸಲು ಆಟಗಾರರು: ಸಾದಿಕ್‌ ಉಲ್ಲ ಅಟಲ್‌, ಹಜ್ರತುಲ್ಲ ಜಜಾಯ್‌, ಮೊಹಮ್ಮದ್‌ ಸಲೀಂ ಸಫಿ.

Advertisement
Advertisement

Udayavani is now on Telegram. Click here to join our channel and stay updated with the latest news.

Next