Advertisement

PCB: ಭಾರತದ ವಿಶ್ವಕಪ್ ಗೆಲುವಿನ ರೂವಾರಿ ಈಗ ಪಾಕಿಸ್ತಾನ ತಂಡದ ಹೊಸ ಕೋಚ್

02:39 PM Apr 28, 2024 | Team Udayavani |

ಲಾಹೋರ್: ಮಹತ್ವದ ಟಿ20 ವಿಶ್ವಕಪ್‌ ಗೆ ಒಂದೇ ತಿಂಗಳು ಬಾಕಿ ಇರುವಂತೆ ಪಾಕಿಸ್ತಾನವು ತಮ್ಮ ಹೊಸ ಕೋಚಿಂಗ್ ಸಿಬ್ಬಂದಿಯನ್ನು ಘೋಷಿಸಿದೆ.

Advertisement

ಸೀಮಿತ ಮಾದರಿ ಕ್ರಿಕೆಟ್ ತಂಡಕ್ಕೆ (ಏಕದಿನ ಮತ್ತು ಟಿ20) ದಕ್ಷಿಣ ಆಫ್ರಿಕಾದ ಮಾಜಿ ಆಟಗಾರ ಗ್ಯಾರಿ ಕರ್ಸ್ಟನ್ ಅವರನ್ನು ಕೋಚ್ ಆಗಿ ನೇಮಿಸಿದೆ. ಅಲ್ಲದೆ ಆಸ್ಟ್ರೇಲಿಯಾದ ಮಾಜಿ ವೇಗಿ ಜೇಸನ್ ಗಿಲ್ಲೆಸ್ಪಿ ಅವರನ್ನು ಟೆಸ್ಟ್ ತಂಡದ ತರಬೇತುದಾರರಾಗಿ ನೇಮಕ ಮಾಡಲಾಗಿದೆ.

2011 ರಲ್ಲಿ ಭಾರತಕ್ಕೆ ಏಕದಿನ ವಿಶ್ವಕಪ್ ಗೆಲ್ಲಲು ಮಾರ್ಗದರ್ಶನ ನೀಡಿದ ಗ್ಯಾರಿ ಕರ್ಸ್ಟನ್ ಅವರು ಮೇ 22 ರಂದು ಇಂಗ್ಲೆಂಡ್‌ ನಲ್ಲಿ ಪಾಕಿಸ್ತಾನ ತಂಡವನ್ನು ಸೇರಲಿದ್ದಾರೆ.

ಲಾಹೋರ್‌ ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಪಿಸಿಬಿ ಅಧ್ಯಕ್ಷ ಮೊಹ್ಸಿನ್ ನಖ್ವಿ ಅವರು ಈ ಘೋಷಣೆಗಳನ್ನು ಮಾಡಿದರು.

“ರಾಷ್ಟ್ರೀಯ ತಂಡಕ್ಕೆ ಉನ್ನತ ಶ್ರೇಣಿಯ ಸಂಪನ್ಮೂಲಗಳು ಮತ್ತು ಸೌಲಭ್ಯಗಳನ್ನು ಒದಗಿಸುವ ತನ್ನ ಬದ್ಧತೆಯಲ್ಲಿ ಪಿಸಿಬಿ ಅಚಲವಾಗಿದೆ. ಅವರ ಸಂಪೂರ್ಣ ಸಾಮರ್ಥ್ಯವನ್ನು ಹೊರತೆಗೆಯಲು ಮತ್ತು ಸತತ ಉತ್ತಮ ಪ್ರದರ್ಶನಗಳನ್ನು ನೀಡಲು ಅನುಕೂಲಕರ ವಾತಾವರಣವನ್ನು ಬೆಳೆಸುತ್ತದೆ” ಎಂದು ನಖ್ವಿ ಹೇಳಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next