Advertisement

Badminton Asia Championships: ಪಿ.ವಿ. ಸಿಂಧು ಶುಭಾರಂಭ

01:27 AM Apr 11, 2024 | Team Udayavani |

ನಿಂಗ್ಬೊ (ಚೀನ): ಏಷ್ಯಾ ಬ್ಯಾಡ್ಮಿಂಟನ್‌ ಚಾಂಪಿಯನ್‌ಶಿಪ್‌ನಲ್ಲಿ ಪಿ.ವಿ. ಸಿಂಧು ಶುಭಾರಂಭ ಮಾಡಿದ್ದಾರೆ.

Advertisement

ಬುಧವಾರ ನಡೆದ ಮೊದಲ ಸುತ್ತಿನ ಪಂದ್ಯದಲ್ಲಿ ಅವರು ಮಲೇಷ್ಯಾದ ಗೋ ಜಿನ್‌ ವೀ ವಿರುದ್ಧ 18 -21, 21-14 , 21-19 ಅಂತರದ ಗೆಲುವು ಸಾಧಿಸಿದರು.

ಪುರುಷರ ವಿಭಾಗದ ಸಿಂಗಲ್ಸ್‌ನಲ್ಲಿ ಲಕ್ಷ್ಯ ಸೇನ್‌, ಕೆ. ಶ್ರೀಕಾಂತ್‌, ಪ್ರಿಯಾಂಶು ರಾಜಾವತ್‌ ಮೊದಲ ಸುತ್ತಿನಲ್ಲೇ ಆಘಾತ ಅನುಭವಿಸಿದರು. ಲಕ್ಷ್ಯ ಸೇನ್‌ ಚೀನದ ಶಿ ಯು ಕ್ವಿ ವಿರುದ್ಧ 19-21, 15-21 ಅಂತರದ ಸೋಲನುಭವಿಸಿದರೆ, ಶ್ರೀಕಾಂತ್‌ ಅವರನ್ನು ಇಂಡೋನೇಷ್ಯಾದ ಆ್ಯಂಟನಿ ಗಿಂಟಿಂಗ್‌ 21-14, 21-13ರಿಂದ ಮಣಿಸಿದರು.

ಪ್ರಿಯಾಂಶು ರಾಜಾವತ್‌ ಅವರನ್ನು ಸೋಲಿಸಿದವರು ಮಲೇಷ್ಯಾದಝಿ ಜಿಯ. ಅಂತರ 21-9, 21-13. ಡಬಲ್ಸ್‌ನಲ್ಲಿ ಧ್ರುವ ಕಪಿಲ-ಎಂ.ಆರ್‌. ಅರ್ಜುನ್‌ ಪರಾಭವಗೊಂಡರು.

Advertisement

Udayavani is now on Telegram. Click here to join our channel and stay updated with the latest news.

Next