Advertisement
ಮೊದಲ ಬಾರಿಗೆ ಕಾಮನ್ವೆಲ್ತ್ ಗೇಮ್ಸ್ ಚಾಂಪಿಯನ್ ಎನಿಸಿಕೊಂಡ ಸಿಂಧು ಪಾದದ ನೋವಿನಿಂದಾಗಿ ಈ ಕೂಟವನ್ನು ತಪ್ಪಿಸಿಕೊಳ್ಳುತ್ತಿದ್ದಾರೆ. ಕಳೆದೊಂದು ದಶಕದಲ್ಲಿ ಸಿಂಧು “ಬಿಡ ಬ್ಲ್ಯುಎಫ್ ವಿಶ್ವ ಚಾಂಪಿಯನ್‌ಶಿಪ್’ ಕೂಟವನ್ನು ತಪ್ಪಿಸಿಕೊಳ್ಳುತ್ತಿರುವುದು ಇದೇ ಮೊದಲು.
2011ರಿಂದೀಚೆ ಭಾರತದ ಶಟ್ಲರ್ “ಬಿಡಬ್ಲ್ಯುಎಫ್ ವಿಶ್ವ ಚಾಂಪಿಯನ್‌ಶಿಪ್’ನಿಂದ ಬರಿಗೈಯಲ್ಲಿ ಮರಳಿದ್ದಿಲ್ಲ. ಹೀಗಾಗಿ ಲಕ್ಷ್ಯ ಸೇನ್, ಎಚ್.ಎಸ್. ಪ್ರಣಯ್, ಕೆ. ಶ್ರೀಕಾಂತ್ ಮೇಲೆ ಪದಕದ ಭರವಸೆ ಇಡಲಾಗಿದೆ. 2021ರ ಕೂಟದಲ್ಲಿ ಶ್ರೀಕಾಂತ್ ಮತ್ತು ಲಕ್ಷ ಸೇನ್ ಕ್ರಮವಾಗಿ ಬೆಳ್ಳಿ ಹಾಗೂ ಕಂಚು ಜಯಿಸಿದ್ದರು. ಆದರೆ ಈ ಬಾರಿ ಸವಾಲು ಹೆಚ್ಚು ಕಠಿನವಾಗಿದೆ. 2021ರ ಪಂದ್ಯಾವಳಿಯಲ್ಲಿ ಬಲಿಷ್ಠ ಆಟ ಗಾರರಾದ ಜಪಾನ್‌ನ ಕೆಂಟೊ ಮೊಮೊಟ, ಇಂಡೋನೇಷ್ಯಾದ ಜೊನಾಥನ್ ಕ್ರಿಸ್ಟಿ, ಆ್ಯಂಟನಿ ಗಿಂಟಿಂಗ್ ಕಾಣಿಸಿಕೊಂಡಿರಲಿಲ್ಲ. ಈ ಬಾರಿ ಇವರೆಲ್ಲರೂ ಇದ್ದಾರೆ. ಆದರೂ ಕಳೆದ ಕೆಲವು ಸಮಯದಿಂದ ಅಮೋಘ ಪ್ರದರ್ಶನ ಕಾಯ್ದುಕೊಂಡು ಬಂದಿರುವ ಭಾರತದ ಪುರುಷರ ವಿಭಾಗದ ಮೇಲೆ ಭರವಸೆ ಹೆಚ್ಚೇ ಇದೆ.
Related Articles
Advertisement
ಡಬಲ್ಸ್ ಮುಖಾಮುಖಿಡಬಲ್ಸ್ನಲ್ಲಿ ಭಾರತಕ್ಕೆ ಮೊದಲ ಗೇಮ್ಸ್ ಚಿನ್ನ ತಂದಿತ್ತ ಚಿರಾಗ್ ಶೆಟ್ಟಿ-ಸಾತ್ವಿಕ್ ಸಾಯಿರಾಜ್ ರಾಂಕಿರೆಡ್ಡಿ ಮೇಲೂ ಭಾರೀ ನಿರೀಕ್ಷೆ ಇದೆ. ವನಿತಾ ಡಬಲ್ಸ್‌ನಲ್ಲಿ ಅಶ್ವಿನಿ ಪೊನ್ನಪ್ಪ-ಎನ್. ಸಿಕ್ಕಿ ರೆಡ್ಡಿ, ಗಾಯತ್ರಿ ಗೋಪಿಚಂದ್-ಟ್ರೀಸಾ ಜಾಲಿ ಕೂಡ ಕಣದಲ್ಲಿದ್ದಾರೆ.