Advertisement

ಎಳ್ಳಮಾವಾಸ್ಯೆ ಖರೀದಿ ಬಲು ಜೋರು

05:51 AM Jan 05, 2019 | Team Udayavani |

ಅಫಜಲಪುರ: ಬಗೆ ಬಗೆಯ ತರಕಾರಿ ತಂದು ಬಜ್ಜಿ, ಕಡುಬು ಮಾಡಿ ಜೋಳದ ಹೊಲಕ್ಕೆ ಹೋಗಿ ಭೂಮಿ ತಾಯಿಗೆ ಚರಗ ಚೆಲ್ಲುವ ಹಬ್ಬ ಎಳ್ಳಮವಾಸ್ಯೆ. ಎಳ್ಳಮವಾಸ್ಯೆ ಬಜ್ಜಿಗಾಗಿ ಗ್ರಾಹಕರು ಸಂತೆಯಲ್ಲಿ ತರಕಾರಿ ಖರೀದಿಸುವುದು ಬಲು ಜೋರಾಗಿತ್ತು.

Advertisement

ಕೈ ಸುಡುತ್ತಿದೆ ತರಕಾರಿ ಬೆಲೆ: ಕಳೆದ ವರ್ಷ ಮಳೆ ಬಾರದೆ ಭೀಕರ ಬರಗಾಲ ಆವರಿಸಿದೆ. ಬರದಿಂದ ಯಾವ ಬೆಳೆಯೂ ರೈತರ ಕೈಗೆಟುಕಿಲ್ಲ. ಅಲ್ಲದೇ ಎಲ್ಲಿಯೂ ಹನಿ ನೀರು ಸಿಗುತ್ತಿಲ್ಲ. ಹೀಗಾಗಿ ಯಾವ ರೈತರು ಹೆಚ್ಚು ತರಕಾರಿ ಬೆಳೆದಿಲ್ಲ. ಹೀಗಾಗಿ ಕೈಗೆಟುಕುವ ದರದಲ್ಲಿ ತರಕಾರಿ ಸಿಗುತ್ತಿಲ್ಲ. ಆದರೂ ಎಳ್ಳಮವಾಸ್ಯೆಗಾಗಿ ಬಜ್ಜಿ ಮಾಡಲು ತರಕಾರಿ ಬೇಕೆ ಬೇಕು. ಹೀಗಾಗಿ ದೂರದ ಊರುಗಳಿಂದ ದುಬಾರಿ ದರದಲ್ಲಿ ತಂದ ತರಕಾರಿಯನ್ನು ಜನಸಾಮಾನ್ಯರು ಹೆಚ್ಚು ಹಣ ಕೊಟ್ಟು ಖರೀದಿ ಮಾಡುತ್ತಿದ್ದರು.

ಬರದ ಮಧ್ಯೆ ಹಬ್ಬದ ಕಳೆ ಜೋರು: ಬರಗಾಲವಿರಲಿ, ಸುಖದ ಕಾಲ ಇರಲಿ ಸಂಪ್ರದಾಯ, ಹಬ್ಬ ಆಚರಣೆಗಳನ್ನು ಜನ ಬಿಡುವುದಿಲ್ಲ. ಇದಕ್ಕೆ ತಾಜಾ ಉದಾಹರಣೆ ಎಂದರೆ ಎಳ್ಳಮವಾಸ್ಯೆ. ಭೀಕರ ಬರ ಆವರಿಸಿ ಎಲ್ಲೆಡೆ ಹನಿ ನೀರು ಸಿಗುತ್ತಿಲ್ಲ. ತರಕಾರಿಗಳ ಬೆಲೆ ಗಗನಕ್ಕೇರಿದೆ. ಆದರೂ ದುಬಾರಿ ದರ ನೀಡಿ ತರಕಾರಿ ಖರೀದಿಸಿ ಹಬ್ಬ ಆಚರಿಸುತ್ತಿದ್ದಾರೆ.

ತರಕಾರಿ ತಂದು ಬಜ್ಜಿ ಕಡುಬು, ರೊಟ್ಟಿ, ಹೋಳಿಗೆ ಮಾಡಿ ಬಂಧು ಬಳಗದವರನ್ನು ಕರೆದು ಹೊಲಕ್ಕೆ ಹೋಗಿ ಜೋಳದಲ್ಲಿ ಚರಗ ಚೆಲ್ಲಿ ಎಲ್ಲರೂ ಒಂದಾಗಿ ಕುಳಿತು ಊಟ ಮಾಡುತ್ತಾರೆ. ಇಂತಹ ವಿಶಿಷ್ಟ ಹಬ್ಬವನ್ನು ಎಲ್ಲ ಜಾತಿ ಜನಾಂಗದವರು ಸೇರಿ ಭಾವೈಕ್ಯತೆಯಿಂದ ಆಚರಣೆ ಮಾಡುವುದು ವಿಶೇಷವಾಗಿ¨ 

Advertisement

Udayavani is now on Telegram. Click here to join our channel and stay updated with the latest news.

Next