Advertisement
ಮಾರ್ಕೆಟ್ ನಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಅಲ್ಲೊಂದು ದೊಡ್ಡ ಬೋರ್ಡ್. ಅದರ ಮೇಲೆ ದೊಡ್ಡದಾಗಿ 50 ಪರ್ಸೆಂಟ್ ಕಡಿತ ಎಂಬ ಬರಹ.
ತಗಲು ಹಾಕಿದ ಕಡೆ ನೋಡಿದರೆ ನಿಮಗೆ ಇಷ್ಟವಾಗುವ ಯಾವುದೂ ಇರೋದಿಲ್ಲ. ಹೇಗೂ ಗಾಡಿ ಪಾರ್ಕ್ ಮಾಡಿ ಆಗಿದೆ. ಅಂಗಡಿ ಒಳಗೆ ಕಾಲಿಟ್ಟಾಗಿದೆ ಅಂದ್ಕೊಂಡು, ಅಲ್ಲಿ ನಿಮಗೆ ಇಷ್ಟವಾಗದ್ದು ಏನೂ ಸಿಗದೇ ಇದ್ದಾಗ, ಆಫರ್ ಇಲ್ಲದ ನಿಮಗೆ ತುಂಬಾ ಇಷ್ಟವಾದ ಯಾವುದನ್ನಾದರೂ ಖರೀದಿಸುತ್ತೀರಿ.
ಬಹುತೇಕ ಮಾಲ್‌ಗಳಲ್ಲಿ ಇದೇ ಥರದ ಕಥೆಗಳಿರುತ್ತವೆ.
Related Articles
Advertisement
ಇದು ಆಫ್ಲೈ ನ್‌ನ ಕಥೆಯಾದರೆ, ಆನ್ ಲೈನ್ ಮಾರಾಟದ್ದು ಇನ್ನೊಂದು ವಿಧ. ಇಲ್ಲಿ ಈ ರೀತಿಯ 50 ಪರ್ಸೆಂಟ್ ರೀತಿಯ ಆಫರ್ ಜತೆಗೆ ಕೂಪನ್, ಕ್ಯಾಶ್ ಬ್ಯಾ ಕ್ ಇರುತ್ತದೆ. ಕೂಪನ್‌ಗ ಳಂತೂ ಮೋಸ ಮಾಡುವನಂಬರ್ ಒನ್ ಚೀಟಿಗಳು! ಒಂದು ಶರ್ಟ್ ಖರೀದಿಸಿದರೆ 500 ರೂ. ಮೌಲ್ಯದ ಕೂಪನ್ ಕೊಡುತ್ತೇವೆ ಎಂದು ಶರ್ಟ್ ಚಿತ್ರಕ್ಕಿಂತ ದೊಡ್ಡ ಗಾತ್ರದಲ್ಲಿ ಬರೆದಿರುತ್ತಾರೆ. ಆದರೆ ವಾಸ್ತವ ಅದರ ಹಿಂಬದಿಯಲ್ಲಿರುತ್ತದೆ. ಆ ಕೂಪನ್ ನಿಮ್ಮ ಮೇಲ್ ಗೆ ಬಂದಾಗ ಅಥವಾ ಆ ಕೂಪನ್ ಟಮ್ಸ್ ಆ್ಯಂಡ್ ಕಂಡೀಷನ್ ಓದಿದಾಗ ನಿಮ್ಮನ್ನು ದೊಡ್ಡದೊಂದು ಖೆಡ್ಡಾಗೆ ಕೆಡವಿರುವುದು ತಿಳಿಯುತ್ತದೆ. ಹೀಗಾಗಿ ಎಲ್ಲ ಆಫರ್ ಗಳೂ ನಿಜ ಅರ್ಥದಲ್ಲಿ ಆಫರ್‌ಗಳಾಗಿರುವುದಿಲ್ಲ. ಬದಲಿಗೆ ಬಹುತೇಕ ಸಮಯದಲ್ಲಿ ಅವು ನಿಮ್ಮನ್ನು ಸೆಳೆಯಲು ಮಾಡುವ ತಂತ್ರಗಳಾಗಿರುತ್ತವೆ. ಹೀಗಾ ಗಿ ಕಣ್ಕಿಟ್ಟು ಆಫ ರ್ ನಿಮ್ಮ ಜೇಬಿಗೆ
ಹೊರೆಯಾಗದಂತೆ ಎಚ್ಚರವಹಿಸಿ. ಕ್ಯಾಶ್‌ಬ್ಯಾಕ್‌ನಿಂದ ಜೇಬಿಗೆ ಕತ್ತರಿ
ಕ್ಯಾಶ್‌ಬ್ಯಾಕ್ ನಿಮ್ಮನ್ನು ಮತ್ತೆ ಮತ್ತೆ ಖರೀದಿಸುವಂತೆ ಪ್ರೇರೇಪಿಸುತ್ತದೆ. ಅಂದರೆ 1,000 ರೂ. ಮೊತ್ತದ ಐಟಂ ಖರೀದಿಸಿದರೆ 100 ರೂ. ಕ್ಯಾಶ್‌ಬ್ಯಾಕ್ ಕೊಡುವುದಾಗಿ ನಿಮಗೆ ಆಫರ್ ಮಾಡಿರುತ್ತಾರೆ. ಆದರೆ ಇದನ್ನು ನಿಮ್ಮ ಬ್ಯಾಂಕ್ ಖಾತೆಗೆ ಹಾಕುವುದಿಲ್ಲ. ಬದಲಿಗೆ ಇದು ನೀವು ಯಾವ ಆ್ಯಪ್‌ನಿಂದ ಖರೀದಿ ಮಾಡಿರುತ್ತೀರೋ ಆ ಅಪ್ಲಿಕೇಶನ್‌ನ ವಾಲೆಟ್‌ಗೆ ಬಂದು ಕುಳಿತಿರುತ್ತದೆ. ಆ 100 ರೂ. ಕ್ಯಾಶ್‌ಬ್ಯಾಕ್ ಬಳಸಬೇಕು ಎಂದಾದರೆ ನೀವು ಏನನ್ನಾದರೂ ಖರೀದಿಸಲೇಬೇಕು. ಬಹುತೇಕ ಸಮಯದಲ್ಲಿ ಆ ವಾಲೆಟ್ನಿಂದ ನಿಮ್ಮ ಬ್ಯಾಂಕ್‌ಗೆ ಹಣ ವರ್ಗಾವಣೆ ಮಾಡಿಕೊಳ್ಳುವ ಅವಕಾಶವೇ ಇರುವುದಿಲ್ಲ. ಕೃಷ್ಣ ಭಟ್