Advertisement
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಫೆಬ್ರವರಿ ಬಜೆಟ್ ಅಧಿವೇಶನ ನಂತರ ಯಾತ್ರೆ ಆರಂಭವಾಗಲಿದೆ. ಇದಕ್ಕೆ ಸಂಬಂಧಪಟ್ಟಂತೆ ಪಕ್ಷ ಹಾಗೂ ಸರಕಾರದ ಮಧ್ಯೆ ಸಿದ್ಧತೆ ಹಾಗೂ ಚರ್ಚೆ ಪ್ರಾರಂಭ ವಾಗಿದೆ.ಕಾಂಗ್ರೆಸ್ ಯಾತ್ರೆಗೆ ಲಭಿಸುವ ಪ್ರತಿಕ್ರಿಯೆ ಆಧರಿಸಿ ಸ್ವರೂಪ ನಿರ್ಧರಿಸಲಾಗುತ್ತದೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ. ಇದೇ ವೇಳೆ ಬಿಜೆಪಿಯ ಬೂತ್ ವಿಜಯ್ ಯಾತ್ರೆಗೆ ಸಕಾರಾತ್ಮಕ ಬೆಂಬಲ ವ್ಯಕ್ತವಾಗುತ್ತಿದ್ದು, ಜನವರಿ 12 ರ ಬದಲು ತಿಂಗಳಾಂತ್ಯದವರೆಗೂ ನಡೆಸಲು ತೀರ್ಮಾನಿಸಲಾಗಿದೆ.