Advertisement
ಸೋಮವಾರ 20 ಸಿಟಿ ಬಸ್ಸುಗಳು ಸಹಿತ ದ.ಕ.ಜಿಲ್ಲಾ ವ್ಯಾಪ್ತಿಯ ಎಕ್ಸ್‌ಪ್ರೆಸ್, ಸರ್ವಿಸ್ ಬಸ್ಸುಗಳು ಸೇರಿ 60 ಬಸ್ಸುಗಳು ವಿವಿಧ ಮಾರ್ಗಗಳಲ್ಲಿ ಓಡಾಟ ನಡೆಸಿದವು. ಬಸ್ಸುಗಳಲ್ಲಿ ಸ್ಯಾನಿಟೈಸರ್ ವ್ಯವಸ್ಥೆ ಕಲ್ಪಿಸಲಾಗಿತ್ತು. ಒಂದು ಟ್ರಿಪ್ ಆದ ಬಳಿಕ ಬಸ್ಸುಗಳನ್ನು ಸ್ಯಾನಿಟೈಸ್ ಮಾಡಲಾಗುತ್ತಿತ್ತು. ಚಾಲಕರು ಸಹಿತ ನಿರ್ವಾಹಕರು ಮಾಸ್ಕ್ ಧರಿಸಿ ಕರ್ತವ್ಯ ನಿರ್ವಹಿಸಿದರು. ಬೆಳಗ್ಗಿನ ಹೊತ್ತು ಜನಸಂದಣಿಯಿತ್ತು. ಬಸ್ಸುಗಳಲ್ಲಿ ನಿರ್ದಿಷ್ಟ ಪ್ರಮಾಣದಲ್ಲಿ ಜನಸೇರಿದ ಬಳಿಕ ಬಸ್ಸುಗಳು ಓಡಾಟ ನಡೆಸುತ್ತಿದ್ದವು.
ಬಸ್ಸುಗಳೂ ಸೇರಿದಂತೆ ಸಾರ್ವಜನಿಕ ಸ್ಥಳ ಗಳಲ್ಲಿ ಸಾಮಾಜಿಕ ಅಂತರಕ್ಕೆ ಒತ್ತು ನೀಡಬೇಕು ಎಂದು ಹಲವೆಡೆ ಜಾಗೃತಿ ಫಲಕಗಳನ್ನು ಹಾಕಿದ್ದರೂ ಕೂಡ ಅದು ಕಟ್ಟುನಿಟ್ಟಾಗಿ ಪಾಲನೆಯಾಗುತ್ತಿಲ್ಲ. ಸೋಮವಾರ ಬಸ್ಸುಗಳಲ್ಲಿ ಪ್ರಯಾಣಿಕರು ಅಕ್ಕಪಕ್ಕದಲ್ಲಿ ಕುಳಿತುಕೊಂಡು ಸಂಚರಿಸಿದರು. ಎರಡು ತಿಂಗಳುಗಳಿಂದ ಜನರಿಲ್ಲದೆ ಬಿಕೋ ಎನ್ನುತ್ತಿದ್ದ ಬಸ್ಸು ತಂಗುದಾಣಗಳಲ್ಲಿ ಜನರ ಓಡಾಟವಿತ್ತು. ಕೋವಿಡ್-19ದಿಂದ ಜಾಗೃತಿ
ಈ ಹಿಂದೆ ಬಸ್ಸುಗಳಲ್ಲಿ ನಿಗದಿತ ಪ್ರಮಾಣಕ್ಕಿಂತ ಅಧಿಕ ಪ್ರಯಾಣಿಕರನ್ನು ತುಂಬಿಸಲಾಗುತ್ತಿತ್ತು. ಬಸ್ಸುಗಳು ತುಂಬಿ ತುಳುಕುತ್ತಿದ್ದರೂ ಪ್ರಯಾಣಿಕರನ್ನು ಹತ್ತಿಸಲಾಗುತ್ತಿತ್ತು. ಇದೀಗ ಕೋವಿಡ್-19 ಪ್ರಕರಣ ಕಾಣಿಸಿಕೊಂಡ ಕಾರಣ ಬಸ್ಸುಗಳಲ್ಲಿಯೂ ಕಟ್ಟುನಿಟ್ಟಿನ ಆದೇಶ ಪಾಲನೆ ಮಾಡುವಂತೆ ಸರಕಾರ ತಿಳಿಸಿದೆ. ಜನರೂ ಜಾಗೃತರಾಗಿದ್ದರಿಂದ ಈಗ ಅಂತಹ ಸ್ಥಿತಿ ಇಲ್ಲ.
Related Articles
ಸೋಮವಾರದಿಂದ ಶೇ.25ರಷ್ಟು ಬಸ್ಸುಗಳು ಕಾರ್ಯಾರಂಭ ಮಾಡಿವೆ. ಜನ ಸಂಚಾರ ನೋಡಿಕೊಂಡು ಮುಂದಿನ ದಿನಗಳಲ್ಲಿ ಬಸ್ಸು ಗಳನ್ನು ಈ ಹಿಂದಿನಂತೆ ನಿಗದಿತ ಕಾಲಮಿತಿಯಲ್ಲಿ ಓಡಿಸ ಲಾಗುವುದು.
– ರಾಜವರ್ಮ ಬಲ್ಲಾಳ್ ಮತ್ತು ಕೆ. ಸುರೇಶ ನಾಯಕ್, ಅಧ್ಯಕ್ಷರು, ಕೆನರಾ ಬಸ್ಸು ಮಾಲಕರ ಸಂಘ ಮತ್ತು ಉಡುಪಿ ಸಿಟಿ ಬಸ್ಸು ಮಾಲಕರ ಸಂಘ.
Advertisement
ದರ ಹೆಚ್ಚಳದ ಹೊರೆಬಸ್ಸು ಸಂಚಾರ ಇಲ್ಲದ ಕಾರಣ ಎರಡು ತಿಂಗಳಿಂದ ತೊಂದರೆ ಉಂಟಾಗಿತ್ತು. ಈಗ ಬಸ್ಸು ಸಂಚಾರ ಆರಂಭಗೊಂಡಿದ್ದು, ದಿನನಿತ್ಯದ ಕೆಲಸಗಳಿಗೆ ಹೋಗು ವವರಿಗೆ ಅನುಕೂಲವಾಗಿದೆ.ಬಸ್ಸು ದರ ಹೆಚ್ಚಳವಾಗಿರುವುದು ತುಸು ಹೊರೆ ಅನಿಸುತ್ತಿದೆ.
-ಜಯಂತ್, ಪ್ರಯಾಣಿಕ.