Advertisement

ಸಾಲಿಗೆ ಹೋಗಾಕ ಇನ್ನೂ ಬರವಲ್ದು ಬಸ್‌!

06:09 PM Sep 04, 2021 | Team Udayavani |

ರಾಯಚೂರು: “ಸಾಲಿ ಚಾಲುವಾಗಿ ತುಂಬಾ ದಿನ ಆದ್ವು ರೀ. ನಾವು ದಿನಾ ಸಾಲಿಗೆ ನಡಕೊಂಡೇ ಹೋಗಾಕತ್ತೀವಿ. ಇನ್ನೂ ನಮ್ಮೂರಿಗೆ ಬಸ್‌ ಬರವಲ್ದು. ಜಲ್ದಿ ಬಸ್‌ ಬಿಟ್ರೆ ಅನುಕೂಲ ಆಗ್ತಾದ…ಗ್ರಾಮೀಣ ಭಾಗದಿಂದ ದೂರದ ಊರುಗಳ ಶಾಲೆಗೆ ಹೋಗುತ್ತಿರುವ ವಿದ್ಯಾರ್ಥಿಗಳ ಗೋಳಿದು. ಸರ್ಕಾರ ಕೋವಿಡ್‌ ಮೂರನೇ ಅಲೆ ಆತಂಕದ ನಡುವೆಯೂ ಸರ್ಕಾರ ಶಾಲೆಗಳನ್ನು ಹಂತ ಹಂತವಾಗಿ ಆರಂಭಿಸುತ್ತಿದೆ. ಆದರೆ, ಗ್ರಾಮೀಣ ಭಾಗದ ಮಕ್ಕಳು ಒಂದು ಊರಿನಿಂದ ಮತ್ತೂಂದು ಊರಿಗೆ ಹೋಗಲು ಸಾರಿಗೆ ಸಮಸ್ಯೆ ಎದುರಾಗುತ್ತಿದೆ.

Advertisement

ಇದರಿಂದ ಮಕ್ಕಳು ಕಿಮೀಗಟ್ಟಲೇ ನಡೆದು ಹೋಗುವಂತಾಗಿದೆ. ಕೊರೊನಾ ಹಾವಳಿ ಶುರುವಾಗುತ್ತಿದ್ದಂತೆ ಸಾರಿಗೆ ಸೌಲಭ್ಯ ಸಂಪೂರ್ಣ ಸ್ಥಗಿತಗೊಳಿಸಲಾಗಿತ್ತು. ಗ್ರಾಮೀಣ ಭಾಗದಿಂದ ನಗರಗಳಿಗೆ ಬರುವ ಜನ ಖಾಸಗಿ ವಾಹನಗಳನ್ನೇ ಅವ ಲಂಬಿಸುವಂತಾಗಿತ್ತು. ಎರಡನೇ ಅಲೆ ಮುಗಿದ ಬಳಿಕ ಹಂತ ಹಂತವಾಗಿ ಸಾರಿಗೆ ಸೌಲಭ್ಯ ಆರಂಭಿಸಲಾಯಿತು. ಅಲ್ಲದೇ, ಆದಾಯ ಬರುವ ಮಾರ್ಗಗಳಲ್ಲಿ ಮಾತ್ರ ಬಸ್‌ ಓಡಿಸಲಾಯಿತು.

ಆದರೆ, ಈವರೆಗೆ ಶಾಲೆ-ಕಾಲೇಜುಗಳು ಆರಂಭವಾಗಿಲ್ಲದ ಕಾರಣ ವಿದ್ಯಾರ್ಥಿಗಳಿಗೂ ಈ ಸಮಸ್ಯೆ ಎದುರಾಗಿರಲಿಲ್ಲ. ಆದರೆ, ಸರ್ಕಾರ ಈಚೆಗೆ 9, 10ನೇ ತರಗತಿ ಜತೆಗೆ ಪಿಯು ಕಾಲೇಜು ಆರಂಭಿಸಿದೆ. ಶೀಘ್ರದಲ್ಲೇ 6ನೇ ತರಗತಿಯಿಂದ ಶಾಲೆಗಳು ಶುರುವಾಗಲಿದೆ. ಅಲ್ಲದೇ, ಆದಷ್ಟು ಬೇಗನೇ ಒಂದನೇ ತರಗತಿಯಿಂದಲೂ ಶಾಲೆಗಳು ಆರಂಭಿಸುವ ಮುನ್ಸೂಚನೆ ನೀಡಿದೆ.

ಏಳೆಂಟು ಕಿಮೀ ನಡೆಯುವ ಮಕ್ಕಳು: ತಾಲೂಕಿನ ಜೇಗರಕಲ್‌ ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲೆಗೆ ಸುತ್ತಲಿನ ಎರಡೂ¾ರು ಊರುಗಳಿಂದ ಮಕ್ಕಳು ಆಗಮಿಸುತ್ತಾರೆ. ಹೆಂಬೆರಾಳ, ತಿಮ್ಮಾಪುರ, ಹನುಮಪುರದಿಂದ ನಿತ್ಯ ಏನಿಲ್ಲವೆಂದರೂ 50-60 ಮಕ್ಕಳು ಆಗಮಿಸುತ್ತಿದ್ದು, ಸಾರಿಗೆ ಬಸ್‌ಗಳಿಲ್ಲದ ಕಾರಣ ನಡೆದುಕೊಂಡೇ ಬರಬೇಕಿದೆ. ಟಂಟಂ ಆಟೋಗಳು ಓಡಾಡುತ್ತಿದ್ದರೂ ಟೈಮಿಗೆ ಸರಿಯಾಗಿ ಬಿಡುವುದಿಲ್ಲ. ಇದರಿಂದ ಮಕ್ಕಳು 7-8 ಕಿಮೀ
ಕಾಲ್ನಡಿಗೆ ಮಾಡುವುದು ಅನಿವಾರ್ಯ ಎನ್ನುವಂತಾಗಿದೆ.

ಉನ್ನತ ವ್ಯಾಸಂಗಕ್ಕೆ ಅಡಚಣೆ
ಬಹುತೇಕ ಗ್ರಾಮಗಳಲ್ಲಿ 1ರಿಂದ 7ನೇ ತರಗತಿ ಶಾಲೆಗಳಿದ್ದರೆ, ಕೆಲವೊಂದು ಹಳ್ಳಿಗಳಲ್ಲಿ 1-5ರವರೆಗೆ ಮಾತ್ರಇದೆ. ಹೀಗಾಗಿ ಮುಂದಿನವ್ಯಾಸಂಗಕ್ಕೆಅಕ್ಕಪಕದ ‌ಊರುಗಳಿಗೆ ಹೋಗಲೇಬೇಕು. ಬಹುತೇಕ ಕುಗ್ರಾಮಗಳಿಗೆ ಈ ಸಮಸ್ಯೆ ಇದೆ. ಸರ್ಕಾರ ಎರಡ್ಮೂರು ಹಳ್ಳಿಗಳಿಗೆ ಒಂದರಂತೆ ಪ್ರೌಢಶಾಲೆ ಆರಂಭಿಸಿದೆ. ಇದರಿಂದ ಮಕ್ಕಳು ಉನ್ನತ ವ್ಯಾಸಂಗ ಮಾಡಲು ಅನಿವಾರ್ಯವಾಗಿ ಪಕ್ಕದ ಊರುಗಳಿಗೆ ಹೋಗಲೇಬೇಕಿದೆ. ಸಮರ್ಪಕ ಸಾರಿಗೆ ಸೌಲಭ್ಯ ಇಲ್ಲದ ಕಾರಣ ಪಾಲಕರು ಮುಖ್ಯವಾಗಿ ವಿದ್ಯಾರ್ಥಿನಿಯರನ್ನು ವ್ಯಾಸಂಗದಿಂದ ಮೊಟಕುಗೊಳಿಸುವ ಸಾಧ್ಯತೆ ಇದೆ. ಈನಿಟ್ಟಿನಲ್ಲಿ ಕೂಡಲೇ ಸಾರಿಗೆ ಸೌಲಭ್ಯ ಪುನಾರಂಭಿಸುವ ಅನಿವಾರ್ಯತೆಯಂತೂ ಇದೆ.

Advertisement

ಬಸ್‌ ಪಾಸ್‌ಗೆ ಅರ್ಜಿ
ರಾಯಚೂರು: 2021-22ನೇ ಸಾಲಿನ ವಿದ್ಯಾರ್ಥಿ ಬಸ್‌ ಪಾಸ್‌ಗಾಗಿ ಶಾಲಾ-ಕಾಲೇಜಿನ ಅರ್ಹ ವಿದ್ಯಾರ್ಥಿಗಳು ಸೇವಾ ಸಿಂಧು ಪೋರ್ಟಲ್‌ ಮೂಲಕ ಬಸ್‌ ಪಾಸ್‌ ಪಡೆಯಲು ಅರ್ಜಿ ಆಹ್ವಾನಿಸಲಾಗಿದೆ. ಪಾಸ್‌ ವಿತರಣೆ ತಂತ್ರಾಂಶ ಸಂಪೂರ್ಣ ಆನ್‌ಲೈನ್‌ ಮಾಡಿದ್ದು, 2020-21ನೇ ಸಾಲಿನಲ್ಲಿ ಪಡೆದಿರುವ ವಿದ್ಯಾರ್ಥಿ ಬಸ್‌ ಪಾಸ್‌ ಬಳಸಿ ಪ್ರಯಾಣಿಸಲು ಹಾಗೂ ಕಳೆದ ಸಾಲಿನಲ್ಲಿ ವಿದ್ಯಾರ್ಥಿ ಬಸ್‌ಪಾಸ್‌ ಪಡೆಯದಿರುವ ವಿದ್ಯಾರ್ಥಿಗಳು ಹೊಸದಾಗಿ ಶಾಲೆ ಅಥವಾ ಕಾಲೇಜುಗಳಲ್ಲಿ ಪಾವತಿಸಿರುವ ರಶೀದಿ ಹಾಗೂ ವಿದ್ಯಾಸಂಸ್ಥೆಯ ಗುರುತಿನ ಚೀಟಿಯೊಂದಿಗೆ ಸೆ.15ರೊಳಗೆ ಅರ್ಜಿ ಸಲ್ಲಿಸಬಹುದು.

ಸಂಬಂಧಪಟ್ಟ ಮಾರ್ಗದಲ್ಲಿ ಅಥವಾಹೊಸ ವಿಳಾಸದಲ್ಲಿರುವ ಶಾಲಾ-ಕಾಲೇಜುಗಳ ವಿಳಾಸ ಆನ್‌ಲೈನ್‌ ಮೂಲಕ ನಮೂದಿಸಿ ನಿಗಮದ ನಗರ, ಹೊರವಲಯ, ಸಾಮಾನ್ಯ ಹಾಗೂ ವೇಗದೂತ ಬಸ್‌ಗಳಲ್ಲಿ ಪ್ರಯಾಣಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ಸಾರಿಗೆ ನಿಗಮ ವಿಭಾಗೀಯ ನಿಯಂತ್ರಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಈಗಾಗಲೇ ಗ್ರಾಮೀಣಭಾಗದಲ್ಲಿ ಬಹುತೇಕಕಡೆ ಸಾರಿಗೆ ಸೌಲಭ್ಯ ಪುನಾರಂಭಿಸಲಾಗಿದೆ. ಕೆಲವೊಂದು ಹಳ್ಳಿಗಳಿಗೆಮಾತ್ರಆದಾಯಇಲ್ಲ ಎನ್ನುವ ಕಾರಣಕ್ಕೆ ಬಸ್‌ಬಿಟ್ಟಿಲ್ಲ.ವಿದ್ಯಾರ್ಥಿಗಳಿಗೆ ಅನಾನುಕೂಲವಾಗುತ್ತಿದ್ದರೆ ಕೂಡಲೇ ಆರಂಭಿಸಲಾಗುವುದು. ತಿಮ್ಮಾಪುರ,ಜೇಗರಕಲ್‌, ಹನುಮಪುರ ಮಾರ್ಗ ಪುನಾರಂಭಿಸಲು ಸೂಚಿಸಲಾಗುವುದು.
ವೆಂಕಟೇಶ, ಸಾರಿಗೆವಿಭಾಗೀಯ
ನಿಯಂತ್ರಣಾಧಿಕಾರಿ, ರಾಯಚೂರು

ಹೆಂಬೆರಾಳ, ತಿಮ್ಮಾಪುರ, ಹನುಮಪುರದಿಂದ ಸಾಕಷ್ಟು ವಿದ್ಯಾರ್ಥಿಗಳು ಜೇಗರಕಲ್‌ ಮಲ್ಲಾಪುರ ಪ್ರೌಢಶಾಲೆಗೆ ಹೋಗಬೇಕಿದೆ. ಈ ಮುಂಚೆಬಸ್‌ ಬರುತ್ತಿತ್ತು.ಲಾಕ್‌ಡೌನ್‌ ಬಳಿಕಬಸ್‌ ನಿಂತು ಹೋಗಿದೆ. ಈಗಮಲ್ಲಾಪುರ ರಸ್ತೆಹಾಳಾಗಿರುವಕಾರಣ ಬಸ್‌ ಬಿಡುವುದಿಲ್ಲ ಎನ್ನುತ್ತಿದ್ದಾರೆ. ಹೀಗಾಗಿ ನಾವು ನಡೆದುಕೊಂಡೇ ಹೋಗಬೇಕಿದೆ.ಈಗ 9, 10ನೇ ತರಗತಿ ಮಕ್ಕಳುಮಾತ್ರಹೋಗುತ್ತಿದ್ದೇವೆ. ಶೀಘ್ರದಲ್ಲೇ 8ನೇ ತರಗತಿಮಕ್ಕಳುಬರುತ್ತಾರೆ.
ಮಹಾಂತೇಶ, ವಿದ್ಯಾರ್ಥಿ,ಹೆಂಬೆರಾಳ

*ಸಿದ್ದಯ್ಯಸ್ವಾಮಿ ಕುಕುನೂರು

Advertisement

Udayavani is now on Telegram. Click here to join our channel and stay updated with the latest news.

Next