Advertisement

ಬಸ್‌ ನಿಲ್ದಾಣಗಳಿಗೆ ಬೇಕು ಕಾಯಿನ್‌ ವಾಟರ್‌ ವ್ಯವಸ್ಥೆ 

03:38 PM May 20, 2018 | Team Udayavani |

ಈಗಾಗಲೇ ಕೆಲವು ಬೃಹತ್‌ ನಗರಗಳ ಬಸ್‌ ನಿಲ್ದಾಣಗಳಲ್ಲಿ ಕಾಯಿನ್‌ ವಾಟರ್‌ ಯಂತ್ರವನ್ನು ಅಳವಡಿಸಲಾಗಿದೆ. ಎಟಿಎಂನಂತಿರುವ ಈ ಯಂತ್ರದೊಳಗೆ ಒಂದು ರೂ. ನಾಣ್ಯವನ್ನು ಹಾಕಿ ಒಂದು ಲೋಟ ನೀರು ಪಡೆಯುವಂತ ವ್ಯವಸ್ಥೆ ಇದು. ಬಹುಶಃ ಬಸ್‌ ನಿಲ್ದಾಣಗಳಲ್ಲಿ ತಂಪಾದ ಕುಡಿಯುವ ನೀರಿನ ವ್ಯವಸ್ಥೆ ಇರಿಸಲಾಗಿದೆ. ಆದರೆ ಅದರ ಪರಿಶುದ್ಧತೆಯ ಬಗ್ಗೆ ಗೊತ್ತಿಲ್ಲ. ಆದರೆ ಕಾಯಿನ್‌ ವಾಟರ್‌ ಮೆಶಿನ್‌ ಬೃಹತ್‌ ಯಂತ್ರವಾಗಿರುವುದರಿಂದ ವಿವಿಧ ಘಟಕಗಳಲ್ಲಿ ನೀರು ಶುದ್ಧೀಕರಣಗೊಂಡೇ ಕುಡಿಯುವ ನೀರಾಗಿ ಪರಿವರ್ತಿತಗೊಳ್ಳುತ್ತದೆ. ಇದರಿಂದಾಗಿ ಇದರ ಪರಿಶುದ್ಧತೆಯ ಬಗ್ಗೆ ಯಾವುದೇ ಸಂದೇಹ ಪಡುವ ಅವಶ್ಯಕತೆಯೂ ಬರುವುದಿಲ್ಲ.

Advertisement

ಇತರ ನಗರಗಳಂತೆ ಮಂಗಳೂರಿನ ಕೆಎಸ್‌ಆರ್‌ ಟಿರ್ಟಿಸಿ ಬಸ್‌ ನಿಲ್ದಾಣದಲ್ಲಿಯೂ ಕಾಯಿನ್‌ ವಾಟರ್‌ ಯಂತ್ರ ಅಳವಡಿಸುವ ಸಂಬಂಧ ಈ ಹಿಂದೆ ಒಮ್ಮೆ ಚಿಂತನೆ ನಡೆದಿತ್ತಾದರೂ, ಬಳಿಕ ಅದು ಕಾರ್ಯರೂಪಕ್ಕೆ ಬಂದಿಲ್ಲ. ಮಂಗಳೂರಿನ ಬಸ್‌ ನಿಲ್ದಾಣದಲ್ಲಿ ಇದನ್ನು ಅಳವಡಿಸಿದರೆ ಪ್ರಯಾಣಿಕರ ದೃಷ್ಟಿಯಿಂದ ಹೆಚ್ಚು ಉಪಯುಕ್ತವಾಗಬಹುದು. ಕೆಲವು ಬಸ್‌ ನಿಲ್ದಾಣಗಳಲ್ಲಿ ನೀರಿನ ವ್ಯವಸ್ಥೆ ಇಲ್ಲದಿದ್ದರೆ, ಅಥವಾ ಇದ್ದರೂ ಅದರಲ್ಲಿ ನೀರಿಲ್ಲದಿದ್ದರೆ ಅಂಗಡಿಗಳಿಂದ ನೀರು ಕೊಳ್ಳಲು ಅನಗತ್ಯ ಖರ್ಚು ಮಾಡುವುದನ್ನೂ ಇದರಿಂದ ತಪ್ಪಿಸಬಹುದು. ಒಂದು ಲೋಟ ನೀರಿಗಾಗಿ ಹತ್ತಾರು ರೂಪಾಯಿ ವ್ಯಯಿಸುವುದು ತಪ್ಪುತ್ತದೆ.

 ಧನ್ಯಾ ಬಾಳೆಕಜೆ 

Advertisement

Udayavani is now on Telegram. Click here to join our channel and stay updated with the latest news.

Next