Advertisement
ಶೈಕ್ಷಣಿಕ ಕೇಂದ್ರದೀಪಿಕಾ ಪ್ರೌಢಶಾಲೆ, ಇನ್ಫೆಂಟ್ ಜೀಸಸ್ ಇಂಗ್ಲಿಷ್ ಮಾಧ್ಯಮ ಶಾಲೆ, ಕಾರ್ಮೆಲ್ ಕಾನ್ವೆಂಟ್ ಪ್ರೌಢಶಾಲೆ, ಕಾರ್ಮೆಲ್ ಪದವಿಪೂರ್ವ ಕಾಲೇಜು, ಕಾರ್ಮೆಲ್ ಕಾನ್ವೆಂಟ್ ಪದವಿ ಕಾಲೇಜು ಹೀಗೆ ಹಲವು ಶಾಲಾ-ಕಾಲೇಜಿರುವ ಇಲ್ಲಿನ ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ಬಸ್ ಗಾಗಿ ಕಾಯಲು ಸೂಕ್ತವಾದ ತಂಗುದಾಣವೇ ಇಲ್ಲ. ಬಿಸಿಲಲ್ಲಿ ಒಣಗಿ ಮಳೆಗಾಲದಲ್ಲಿ ಒದ್ದೆಯಾಗಿ ಬಸ್ಸನ್ನು ಕಾಯಬೇಕಾದ ಸ್ಥಿತಿ ಇದೆ. ಇಷ್ಟೊಂದು ಜನರು ಓಡಾಡುವ ಮೊಡಂಕಾಪಿನಲ್ಲಿ ಪುರಸಭೆಯು ಪ್ರಯಾಣಿಕರ ತಂಗುದಾಣವನ್ನು ನಿರ್ಮಾಣ ಮಾಡಿದರೆ ಜನರಿಗೆ ತುಂಬಾ ಅನುಕೂಲವಾಗುವುದು.
ಮೊಂಡಂಕಾಪಿನಿಂದ ಬಿ.ಸಿ. ರೋಡ್‌ಗೆ ಅಥವಾ ಬೇರೆ ಕಡೆ ಹೋಗಬೇಕಾದರೆ ಜನರಿಗೆ ರಾಜೀವಪಳಿಕೆ ಪರಿಸರದವರು ಮೊಡಂಕಾಪು ಹಾಸ್ಟೆಲ್ ಬಳಿ, ದುಗನಕೋಡಿ ಪರಿಸರದವರು ಪಕ್ಕದಲ್ಲಿರುವ ಹೊಟೇಲ್ ಬಳಿ, ಕಾರ್ಮೆಲ್ ಕಾಲೇಜು ಪದವಿ ವಿದ್ಯಾರ್ಥಿಗಳು ಹಾಗೂ ಚರ್ಚ್‌ಗೆ ಬರುವವರು ಪಕ್ಕದಲ್ಲಿರುವ ಎಂ.ಜೆ.ಎಂ. ಕಾಂಪ್ಲೆಕ್ಸ್‌ನ ಎದುರು, ಪಲ್ಲಮಜಲು ಪರಿಸರದವರು ಅಯ್ಯಪ್ಪ ಮಂದಿರದ ಬಳಿ, ಕಾರ್ಮೆಲ್ ಕಾನ್ವೆಂಟಿನ ಎದುರು ಅಲ್ಲಿನ ಮಕ್ಕಳು, ಕುಪ್ಪಿಲ -ಪರಾರಿ-ಮಿತ್ತಪರಾರಿ ಪರಿಸರದವರು ರೈಲ್ವೇ ಬ್ರಿಡ್ಜ್ ಬಳಿ ನಿಂತು ಬಸ್ ಹಿಡಿಯುತ್ತಾರೆ. ಬಸ್ ಬೇ ಅವಶ್ಯ
ಸಾರ್ವಜನಿಕರ ಅಪೇಕ್ಷೆಯನ್ನು ಗಮನಕ್ಕೆ ತೆಗೆದುಕೊಳ್ಳಲಾಗಿದೆ. ಶಾಲಾ ಮಕ್ಕಳ ಹಿತದೃಷ್ಟಿಯಿಂದ ನಿರ್ದಿಷ್ಟ ಸ್ಥಳದಲ್ಲಿ ಬಸ್ ನಿಲುಗಡೆ ಸೆಂಟರ್ ಈ ಪ್ರದೇಶದಲ್ಲಿ ಬೇಕಾಗಿದೆ. ಶಾಲಾ ವಿದ್ಯಾರ್ಥಿಗಳು ಆಯಾಯ ಕೇಂದ್ರ ಸನಿಹ ನಿಲ್ಲುವುದರಿಂದ ವಾಹನ ಚಾಲಕರೂ ಅಲ್ಲಿಂದ ಬಸ್ಸಿಗೆ ಹತ್ತಿಸಿ, ಇಳಿಸಿಕೊಂಡು ಹೋಗುವುದು ನಡೆದಿದೆ. ಮಳೆ ಮತ್ತು ಬಿಸಿಲಿನ ಹೊತ್ತಿಗೆ ಇಂತಹ ಪ್ರಯಾಣಿಕರ ನಿಲುಗಡೆಗೆ ಬಸ್ ಬೇ ಸೌಕರ್ಯ ಅವಶ್ಯವಾಗಿದ್ದು, ಆಡಳಿತವು ಪ್ರಸ್ತಾವವನ್ನು ಗಮನಿಸುವುದು.
– ಪಿ. ರಾಮಕೃಷ್ಣ ಆಳ್ವ, ಅಧ್ಯಕ್ಷರು, ಬಂಟ್ವಾಳ ಪುರಸಭೆ