Advertisement

ಬಸ್, ಟ್ರ್ಯಾಕ್ಟರ್ ಅಪಘಾತ; ಐವರು ಪ್ರಯಾಣಿಕರು ಸಾವು, 30 ಮಂದಿಗೆ ಗಾಯ

09:45 AM May 20, 2019 | Team Udayavani |

ಉನ್ನಾವೋ(ಉತ್ತರಪ್ರದೇಶ): ವೇಗವಾಗಿ ಬಂದ ಬಸ್ ಟ್ರ್ಯಾಕ್ಟರ್ ಗೆ ಡಿಕ್ಕಿ ಹೊಡೆದ ಪರಿಣಾಮ 5 ಮಂದಿ ಸಾವನ್ನಪ್ಪಿದ್ದು, 30 ಜನರು ಗಾಯಗೊಂಡಿರುವ ಘಟನೆ ಶನಿವಾರ ಲಕ್ನೋ-ಆಗ್ರಾ ಎಕ್ಸ್ ಪ್ರೆಸ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಭವಿಸಿದೆ.

Advertisement

ದೆಹಲಿಯಿಂದ ಬಿಹಾರಕ್ಕೆ ಜನರನ್ನು ಕರೆದೊಯ್ಯುತ್ತಿದ್ದ ಬಸ್ ಏಕಾಏಕಿ ಟ್ರ್ಯಾಕ್ಟರ್ ಬಂಡಿಗೆ ಡಿಕ್ಕಿ ಹೊಡೆದಿತ್ತು. ಈ ಘಟನೆ ದೇವ್ ಖಾರಿ ಗ್ರಾಮದ ಸಮೀಪ ಸಂಭವಿಸಿದ್ದು, ಇದು ಬಾಂಗಾರ್ ಮಾವೌ ಪೊಲೀಸ್ ಠಾಣಾ ವ್ಯಾಪ್ತಿಗೆ ಸೇರಿದೆ.

ಗಾಯಗೊಂಡಿದ್ದ ಜನರನ್ನು ಲಕ್ನೋ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next