Advertisement

ವದೇಸಮುದ್ರದಲ್ಲಿ ಸಾಮೂಹಿಕ ಅಂತ್ಯಸಂಸ್ಕಾರ

06:00 AM Nov 26, 2018 | |

ಪಾಂಡವಪುರ: ತಾಲೂಕಿನ ಕನಗನಮರಡಿ ಗ್ರಾಮದ ಬಳಿ ವಿಶ್ವೇಶ್ವರಯ್ಯ ನಾಲೆಗೆ ಖಾಸಗಿ ಬಸ್‌ ಉರುಳಿ ಮೃತಪಟ್ಟಿದ್ದ ವದೇಸಮುದ್ರ ಗ್ರಾಮದ ಎಂಟು ಮಂದಿಯ ಸಾಮೂಹಿಕ ಅಂತ್ಯಸಂಸ್ಕಾರ ಭಾನುವಾರ ನೆರವೇರಿತು.

Advertisement

ದುರಂತದಲ್ಲಿ ಸಾವನ್ನಪ್ಪಿದ ರವಿಕುಮಾರ್‌, ಕಮಲಮ್ಮ, ರತ್ನಮ್ಮ, ಶಶಿಕಲಾ, ಚಿಕ್ಕಯ್ಯ, ಪ್ರಶಾಂತ್‌, ಕರಿಯಪ್ಪ ಹಾಗೂ ಪವಿತ್ರಾ ಅವರ ಅಂತ್ಯಕ್ರಿಯೆಯನ್ನು ಊರಿನ ಸಾರ್ವಜನಿಕ ರುದ್ರಭೂಮಿಯಲ್ಲಿ ಮಾಡಲಾಯಿತು. ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡಿದ್ದ ಕುಟುಂಬದವರು, ಸಂಬಂಧಿಕರ ದು:ಖದ ಕಟ್ಟೆಯೊಡೆದಿತ್ತು. ಇಡೀ ಗ್ರಾಮದಲ್ಲಿ ಸೂತಕದ ಛಾಯೆ ಆವರಿಸಿದ್ದು ಎಲ್ಲರನ್ನೂ ಶೋಕ ಸಾಗರದಲ್ಲಿ ಮುಳುಗಿಸಿದೆ.

ಎರಡು ಬಾರಿ ಪಾರು: ಅಪಘಾತಕ್ಕೀಡಾದ ರಾಜ್‌ಕುಮಾರ್‌ ಖಾಸಗಿ ಬಸ್ಸು ಈ ಹಿಂದೆ ಎರಡು ಬಾರಿ ಅಪಘಾತಕ್ಕೀಡಾಗಬೇಕಿತ್ತು. ಒಮ್ಮೆ ವಿದ್ಯುತ್‌ ಕಂಬಕ್ಕೆ ಡಿಕ್ಕಿ ಹೊಡೆಯುವುದರಲ್ಲಿತ್ತು, ಇನ್ನೊಮ್ಮೆ ಮರಕ್ಕೆ ಡಿಕ್ಕಿ ಹೊಡೆಯುವುದರಿಂದ ಸ್ವಲ್ಪದರಲ್ಲಿ ತಪ್ಪಿಸಿಕೊಂಡಿತ್ತು. ಖಾಸಗಿ ಬಸ್‌ ಚಾಲಕನ ಅಜಾಗರೂಕತೆಯನ್ನು ಕಂಡು ಗ್ರಾಮಸ್ಥರು ಎರಡು ಬಾರಿಯೂ ಥಳಿಸಿದ್ದರು. ನಂತರದಲ್ಲಿ ಸಾರಿಗೆ ಬಸ್‌ಗಳನ್ನು ಸಂಚಾರಕ್ಕೆ ಬಿಡುವಂತೆ ಆಗ್ರಹಿಸಿ ಸಂಬಂಧಪಟ್ಟ ಜನಪ್ರತಿನಿಧಿಗಳು ಹಾಗೂ ಸಾರಿಗೆ ಇಲಾಖೆ ಅಧಿಕಾರಿಗಳಿಗೆ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಲಿಲ್ಲ ಎಂದು ಗ್ರಾಮಸ್ಥರು ನೋವು ತೋಡಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next