Advertisement

ಹೆಮ್ಮಾಡಿ ಪೇಟೆಯಲ್ಲಿ ಬಸ್‌ ಬೇ ನಿರ್ಮಾಣ ಅನುಮಾನ?

09:58 PM May 03, 2020 | Sriram |

ಕುಂದಾಪುರ: ಬೈಂದೂರು – ಕುಂದಾಪುರ ರಾ.ಹೆ. 66 ರ ಹೆಮ್ಮಾಡಿ ಪೇಟೆಯಲ್ಲಿ ಬಸ್‌ ಬೇ ನಿರ್ಮಾಣಕ್ಕಾಗಿ ಫೆಬ್ರವರಿಯಲ್ಲಿ ಕಾಮಗಾರಿ ಆರಂಭಿಸಲಾಗಿತ್ತು. ಆದರೆ ಈಗ ಆ ಹೊಂಡವನ್ನು ಐಆರ್‌ಬಿಯವರು ಸಮತಟ್ಟುಗೊಳಿಸಿದ್ದು ಇಲ್ಲಿ ಬಸ್‌ ಬೇ ನಿರ್ಮಾಣಗೊಳ್ಳುವುದು ಅನುಮಾನವೆನಿಸಿದೆ.

Advertisement

ಫೆಬ್ರವರಿಯಲ್ಲಿ ಹೆಮ್ಮಾಡಿಯಲ್ಲಿ ಬಸ್‌ ನಿರ್ಮಾಣ ಕಾಮಗಾರಿ ಆರಂಭಗೊಂಡಿತ್ತು. ಆದರೆ ಆಗ ಜಾಲಾಡಿ ಹಾಗೂ ಸಂತೋಷ್‌ನಗರ ಮಧ್ಯೆ ಡಿವೈಡರ್‌ ಕ್ರಾಸಿಂಗ್‌ ನೀಡಬೇಕು ಎನ್ನುವುದಾಗಿ ಗ್ರಾಮಸ್ಥರು ಒತ್ತಾಯಿಸಿದ್ದರು. ಕ್ರಾಸಿಂಗ್‌ಗೆ ಅವಕಾಶ ನೀಡದೇ, ಬಸ್‌ ನಿರ್ಮಾಣ ಕಾಮಗಾರಿ ಆರಂಭಿಸುವುದು ಬೇಡ ಎಂದು ಜನ ಪಟ್ಟು ಹಿಡಿದಿದ್ದರು. ಇದರಿಂದ ಆಗ ಕಾಮಗಾರಿಯನ್ನು ಅರ್ಧಕ್ಕೆ ಸ್ಥಗಿತಗೊಳಿಸಲಾಗಿತ್ತು.

ಈಗ ಮತ್ತೆ ಲಾಕ್‌ಡೌನ್‌ ಮಧ್ಯೆ ಅಭಿವೃದ್ಧಿ ಕಾಮಗಾರಿಗೆ ವಿನಾಯಿತಿ ನೀಡಲಾಗಿದ್ದು, ಹೆದ್ದಾರಿ ಪಕ್ಕದಲ್ಲಿ ತೆಗೆದಿದ್ದ ಹೊಂಡವನ್ನು ಮುಚ್ಚಲಾಗಿದೆ. ಇದರಿಂದ ವಾಹನ ಸವಾರರಿಗೆ ಸ್ವಲ್ಪ ಮಟ್ಟಿಗೆ ಅನುಕೂಲವಾದರೂ ಮುಂದೆ ಬಸ್‌ ಬೇ ನಿರ್ಮಾಣವಾಗಲಿದೆಯೇ? ಎಂಬ ಸಂಶಯ ಸ್ಥಳೀಯರದ್ದಾಗಿದೆ.

 

Advertisement

Udayavani is now on Telegram. Click here to join our channel and stay updated with the latest news.

Next