Advertisement

ಬಂಟರ ಸಂಘ ಮಹಿಳಾ ವಿಭಾಗ: ದೀಪಾವಳಿ

05:33 PM Nov 11, 2018 | |

ಮುಂಬಯಿ: ಬಂಟರ ಸಂಘ ಮುಂಬಯಿ ಇದರ ಮಹಿಳಾ ವಿಭಾಗದ ವತಿಯಿಂದ ದಾಂಡಿಯಾ ಮತ್ತು ದೀಪಾವಳಿ ಆಚರಣೆಯು ನ. 3 ರಂದು ಕುರ್ಲಾ ಪೂರ್ವದ ಬಂಟರ ಭವನದ ಸ್ವಾಮಿ ಮುಕ್ತಾನಂದ ಸಭಾ ಗೃಹದಲ್ಲಿ ನಡೆಯಿತು.

Advertisement

ಬಂಟರ ಸಂಘದ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ರಂಜನಿ ಸುಧಾಕರ ಹೆಗ್ಡೆ, ಉಪ ಕಾರ್ಯಾಧ್ಯಕ್ಷೆ ಉಮಾ ಕೆ. ಶೆಟ್ಟಿ, ಕಾರ್ಯದರ್ಶಿ ಚಿತ್ರಾ ಆರ್‌. ಶೆಟ್ಟಿ, ಉಪ ಕಾರ್ಯದರ್ಶಿ ಮನೋರಮಾ ಎನ್‌. ಬಿ. ಶೆಟ್ಟಿ, ಕೋಶಾಧಿಕಾರಿ ಆಶಾ ವಿ. ರೈ, ಜತೆ ಕೋಶಾಧಿಕಾರಿ ರತ್ನಾ ಪಿ. ಶೆಟ್ಟಿ ಅವರ ಸಾರಥ್ಯದಲ್ಲಿ ಕಾರ್ಯಕ್ರಮ ಜರಗಿತು.

ಮಹಿಳಾ ವಿಭಾಗದ ಮಾಜಿ ಕಾರ್ಯಾಧ್ಯಕ್ಷೆಯರಾದ ಸುಜಯಾ ಆರ್‌. ಶೆಟ್ಟಿ, ಲತಾ ಪಿ. ಶೆಟ್ಟಿ, ಲತಾ ಪಿ. ಭಂಡಾರಿ, ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷೆ ಯರು ಹಾಗೂ ಸದಸ್ಯೆಯರು, ಹಿರಿಯ ಸದಸ್ಯೆ ಡಾ| ಸುನೀತಾ ಎಂ. ಶೆಟ್ಟಿ ಉಪಸ್ಥಿತರಿದ್ದರು. ದೀಪ ಬೆಳಗಿಸುವುದರೊಂದಿಗೆ ಕಾರ್ಯ ಕ್ರಮವು ಪ್ರಾರಂಭಗೊಂಡಿತು.

ತುಳುನಾಡಿನ ಸಂಸ್ಕೃತಿ ಬಿಂಬಿಸುವ ಉದ್ದೇಶದಿಂದ ಬಲೀಂದ್ರ
ನನ್ನು ಕೂಗುವ ಪದ್ಧತಿ ಯನ್ನು ಆಚರಿಸಲಾಯಿತು. ಡಾ| ಸುನೀತಾ ಎಂ. ಶೆಟ್ಟಿ ಅವರು ತುಡಾರ್‌ ಬೆಳಗಿಸುವುದರೊಂದಿಗೆ ಹಾಗೂ ಡಾ| ಪಲ್ಲವಿ ಶೆಟ್ಟಿ ಅವರು ಬಲೀಂದ್ರನನ್ನು ಕರೆಯುವ ಮೂಲಕ  ದೀಪಾ ವಳಿಯನ್ನು ಆಚರಿಸಲಾಯಿತು.
 ದಾಂಡಿಯಾ ನೃತ್ಯ ಸ್ಪರ್ಧೆ ಮತ್ತು ಉತ್ತಮ ಉಡುಗೆ ಸ್ಪರ್ಧೆ ಆಯೋಜಿಸಲಾಗಿತ್ತು. ನೃತ್ಯ ಸ್ಪರ್ಧೆಯಲ್ಲಿ ಕವಿತಾ ಶೆಟ್ಟಿ ಪ್ರಥಮ, ಜಯಾ ಅಶೋಕ್‌ ಶೆಟ್ಟಿ ದ್ವಿತೀಯ, ಡಾ| ಪಲ್ಲವಿ ಶೆಟ್ಟಿ ತೃತೀಯ ಬಹುಮಾನ ಪಡೆದರು. ಉತ್ತಮ ಉಡುಗೆ ವಿಭಾಗದಲ್ಲಿ ಸುಚಿತಾ ಕೆ. ಶೆಟ್ಟಿ ಪ್ರಥಮ, ಶಶಿಕಲಾ ಎಸ್‌. ಪೂಂಜಾ ದ್ವಿತೀಯ, ಪ್ರಶಾಂತಿ ಡಿ. ಶೆಟ್ಟಿ ತೃತೀಯ ಬಹುಮಾನ ಗಳಿಸಿದರು.

ಸಮಾಧಾನಕರ ಬಹುಮಾನವನ್ನು ಮಕ್ಕಳ ವಿಭಾಗದಲ್ಲಿ ಹಾಸ್ಯಾ ಜಿ. ಶೆಟ್ಟಿ, ಯುವ ವಿಭಾಗದಲ್ಲಿ ಪ್ರಸಾದಿನಿ ಶೆಟ್ಟಿ, ಹಿರಿಯರ ವಿಭಾಗದಲ್ಲಿ ಡಾ| ಸುನೀತಾ ಎಂ. ಶೆಟ್ಟಿ, ಲತಾ ಪಿ. ಶೆಟ್ಟಿ ಅವರಿಗೆ ಪ್ರದಾನಿಸಲಾಯಿತು. ದೀಪಾವಳಿಯ ಪ್ರಯುಕ್ತ ಬಂಟರ ಸಂಘದ ಗೀತಾ ಎಸ್‌.ಎಂ. ಶೆಟ್ಟಿ ಮಹಿಳಾ ವಸತಿಗೃಹದ ಹಿರಿಯ ಸದಸ್ಯೆಯರಿಗೆ ದೀಪಾವಳಿಯ ಉಡುಗೊರೆ ನೀಡಲಾಯಿತು.

Advertisement

ಬಂಟರ ಸಂಘ ಮಹಿಳಾ ವಿಭಾಗದ ಎಲ್ಲ ಸದಸ್ಯೆಯರು, ಪ್ರಬಂಧಕ ಪ್ರವೀಣ್‌ ಶೆಟ್ಟಿ, ಸುಕುಮಾರ್‌ ಶೆಟ್ಟಿ ಹಾಗೂ ಎಲ್ಲ ಸಿಬಂದಿ ವರ್ಗದವರು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು. ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next