ಮುಂಬಯಿ: ಬಂಟರ ಸಂಘ ಮುಂಬಯಿ ಜೋಗೇಶ್ವರಿ ದಹಿಸರ್ ಪ್ರಾದೇಶಿಕ ಸಮಿತಿಯ ಮಹಿಳಾ ವಿಭಾಗದ ಮಹಿಳೆಯರು ನ.23ರಿಂದ ನ.28ರವರೆಗೆ 5 ರಾತ್ರಿ ಹಾಗೂ 6 ದಿನಗಳ ಥೈಲ್ಯಾಂಡ್ ರಾಷ್ಟ್ರದ ವಿದೇಶ ಪ್ರವಾಸವನ್ನು ಯಶಸ್ವಿಯಾಗಿ ಪೂರೈಸಿ ಹಿಂದಿರುಗಿದರು. ನ.23ರಂದು ಮಹಿಳಾ ವಿಭಾಗದ ಸುಮಾರು 34 ಮಂದಿ ಸದಸ್ಯೆಯರು ಮುಂಬಯಿಯ ಛತ್ರಪತಿ ಶಿವಾಜಿ ಮಹಾರಾಜ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ರಾತ್ರಿ 1.30ರ ಏರ್ ಇಂಡಿಯಾ ವಿಮಾನದಲ್ಲಿ ಪ್ರಯಾಣಿಸಿ ಥೈಲ್ಯಾಂಡ್ ಕಾಲಮಾನದ ಪ್ರಕಾರ ಅಂದು ಬೆಳಗ್ಗೆ 6ಕ್ಕೆ ಸರಿಯಾಗಿ ಬ್ಯಾಂಕಾಂಕ್‌ನ ಸುವರ್ಣಭೂಮಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂದಿಳಿದರು. ತಂಡದಲ್ಲಿ ಸುಮಾರು 8ರಿಂದ 10 ಜನ ವರಿಷ್ಟ ನಾಗರಿಕ ಮಹಿಳೆಯರೂ ಒಳಗೊಂಡಿದ್ದರು.
ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷೆಯಾದ ವಿನೋದಾ ಅಶೋಕ್ ಶೆಟ್ಟಿ ಹಾಗೂ ಅವರ ಪದಾಧಿಕಾರಿಗಳ ತಂಡವು ಪ್ರವಾಸದ ಸಂಪೂರ್ಣ ಜವಾಬ್ದಾರಿಯನ್ನು ವಹಿಸಿಕೊಂಡಿ ದ್ದರು. ಪ್ರವಾಸದ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ನಿರ್ವಹಿಸಲು ನಗರದ ಸುಪ್ರಸಿದ್ಧ ಪ್ರವಾಸೋ ದ್ಯಮ ಸಂಸ್ಥೆಯಾದ ವೀಣಾ ವರ್ಲ್ಡ್ಗೆ ವಹಿಸಿ ಕೊಡಲಾಗಿತ್ತು.
ಪ್ರವಾಸಿಗರಿಗೆ ಯಾವುದೇ ರೀತಿಯ ತೊಂದರೆಗಳಾಗದಂತೆ ಪ್ರವಾಸದ ಸಂಪೂರ್ಣ ಉಸ್ತುವಾರಿಯನ್ನು ನೋಡಿಕೊಳ್ಳಲು ವೀಣಾ ವಲ್ಡ್ ì ಕಡೆಯಿಂದ ಪ್ರವಾಸ ಮಾರ್ಗದರ್ಶಕ ಗುರುದೀಪ್ ಕೇರ್ ಎಂಬವರನ್ನು ನಿಯೋಜಿಸಲಾಗಿತ್ತು. 5 ದಿನಗಳಲ್ಲಿ ಪಟ್ಟಾಯ ಟವರ್, ಕೋರಲ್ ಐಲ್ಯಾಂಡ್, ಬ್ಯಾಂಕಾಕ್‌ನ ಜೆಮ್ಸ್ ಗ್ಯಾಲರಿ ಸಹಿತ ಸೇರಿದಂತೆ ಥಾಲ್ಯಾಂಡ್‌ನ ವಿವಿಧ ವಿಶ್ವ ಪ್ರಸಿದ್ಧ ಪ್ರವಾಸಿ ತಾಣಗಳಿಗೆ ಭೇಟಿ ನೀಡಲಾಯಿತು.
ಅಲ್ಲದೆ, ಅಲ್ಲಿನ ವಿವಿಧ ಸಾಂಸ್ಕೃತಿಕ ಕಾರ್ಯ ಕ್ರಮಗಳನ್ನು ವೀಕ್ಷಿಸಲಾಯಿತು. ಸಫಾರಿ ವರ್ಲ್ಡ್ ಪ್ರಾಣಿ ಸಂಗ್ರಾಹಾಲಯಕ್ಕೂ ಭೇಟಿಯಿತ್ತು ಮರೀನ್ ಪಾರ್ಕ್ ಎಂಬ ಜಲಚರ ಪ್ರಾಣಿ ಸಂಗ್ರಹಾಲಯವನ್ನು ವೀಕ್ಷಿಸಲಾಯಿತು.
ಬ್ಯಾಂಕಾಕ್‌ನ ಬೀದಿಗಳಲ್ಲಿ ಸಂಚರಿಸಿ ಇಂದಿರಾ ಸ್ಕ್ವೇರ್ ಎಂಬ ಬೃಹತ್ ಮಾರುಕಟ್ಟೆಯಲ್ಲಿ ಪ್ರವಾಸಿಗರು ತಮಗಿಷ್ಟವಾದ ವಸ್ತುಗಳನ್ನು ಖರೀದಿಸಿದರು.
ಪ್ರವಾಸದ ಕೊನೆಯ ದಿನ ನ. 28ರಂದು ಸಂಜೆ ವಿಮಾನ ನಿಲ್ದಾಣ ತಲುಪುವವರೆಗೂ ವಿವಿಧ ಬೌದ್ಧ ದೇವಾಲಯಗಳಿಗೆ ಭೇಟಿ ನೀಡಲಾಯಿತು. ಪ್ರವಾಸದ ಎಲ್ಲ ದಿನಗಳಲ್ಲಿಯೂ ಥೈಲ್ಯಾಂಡ್‌ನ ಎಳ ನೀರಿನ ಆನಂದವನ್ನು ಸವಿದರು. ಕೊನೆಗೆ ಬ್ಯಾಂಕಾಕ್‌ನ ಸುವರ್ಣ ಭೂಮಿ ವಿಮಾನ ನಿಲ್ದಾಣದಿಂದ ಏರ್ ಇಂಡಿಯಾ ವಿಮಾನ ನಿಲ್ದಾಣದ ಮೂಲಕ ಮುಂಬಯಿಗೆ ಮರಳುವುದರೊಂದಿಗೆ ಪ್ರವಾಸವು ಕೊನೆಗೊಂಡಿತು.