ತಿನ್ನಲು ತೊಂದರೆಯಿಲ್ಲ. ಬಾಳೆಹಣ್ಣಿನಿಂದ ತಯಾರಿಸಬಹುದಾದ ಖಾದ್ಯಗಳ ರೆಸಿಪಿ ಇಲ್ಲಿದೆ ನೋಡಿ…
Advertisement
ಬೋಂಡಾ ಬೇಕಾಗುವ ಸಾಮಗ್ರಿ:ಬಾಳೆಹಣ್ಣು- 4, ಗೋಧಿ ಹಿಟ್ಟು- 1 ಕಪ್, ಬೆಲ್ಲ- ಕಾಲು ಕಪ್, ಅಕ್ಕಿ ಹಿಟ್ಟು- 2 ಚಮಚ, ಚಿಟಿಕೆ ಸೋಡಾ, ರುಚಿಗೆ ತಕ್ಕಷ್ಟು ಉಪ್ಪು,
ಕರಿಯಲು ಎಣ್ಣೆ.
ಮಾಡುವ ವಿಧಾನ: ಬಾಳೆಹಣ್ಣನ್ನು ಚೆನ್ನಾಗಿ ಕಿವುಚಿ, ಗೋಧಿ ಹಿಟ್ಟು, ಅಕ್ಕಿ ಹಿಟ್ಟು, ಬೆಲ್ಲ (ಬೆಲ್ಲಕ್ಕೆ ಸ್ವಲ್ಪ ನೀರು ಬೆರೆಸಿ, ಬಿಸಿ
ಮಾಡಿ ಕರಗಿಸಿಕೊಳ್ಳಿ) ಅಡುಗೆ ಸೋಡಾ, ಏಲಕ್ಕಿ ಪುಡಿ, ಉಪ್ಪು, ಸ್ವಲ್ಪ ನೀರು ಸೇರಿಸಿ ಚೆನ್ನಾಗಿ ಕಲಸಿ. ಅದನ್ನು ಸಣ್ಣ
ಉಂಡೆಗಳಾಗಿ ಮಾಡಿಕೊಂಡು ಕಾದ ಎಣ್ಣೆಯಲ್ಲಿ ಕರಿಯಿರಿ.
ಬೇಕಾಗುವ ಸಾಮಗ್ರಿ: ಗೋಧಿ/ ಮೈದಾ ಹಿಟ್ಟು- 3 ಕಪ್, ಸಕ್ಕರೆ- ಎಷ್ಟು ಸಿಹಿ ಬೇಕೋ ಅಷ್ಟು, ಮೊಸರು- ಅರ್ಧ ಕಪ್, ಅಡುಗೆ
ಸೋಡಾ- 1 ಚಿಟಿಕೆ, ಬಾಳೆಹಣ್ಣು- 4, ಕರಿಯಲು ಎಣ್ಣೆ, ರುಚಿಗೆ ಉಪ್ಪು.
ಮಾಡುವ ವಿಧಾನ: ಬಾಳೆಹಣ್ಣನ್ನು ಮೊಸರಿನೊಂದಿಗೆ ಬೆರೆಸಿ ರುಬ್ಬಿಕೊಳ್ಳಿ. ಆ ಮಿಶ್ರಣಕ್ಕೆ ಸಕ್ಕರೆ, ಜೀರಿಗೆ, ಸೋಡಾ, ಉಪ್ಪು ಬೆರೆಸಿ, ಸ್ವಲ್ಪ ಸ್ವಲ್ಪವೇ ಮೈದಾ/ ಗೋಧಿ ಹಿಟ್ಟು ಹಾಕಿ ಚಪಾತಿ ಹಿಟ್ಟಿನ ಹದಕ್ಕೆ ಕಲಸಿ ಹಿಟ್ಟು ತಯಾರಿಸಿ. ಅರ್ಧ ಗಂಟೆಯ ನಂತರ ಹಿಟ್ಟನ್ನು ಪೂರಿಯಂತೆ ಲಟ್ಟಿಸಿ, ಕಾದ ಎಣ್ಣೆಯಲ್ಲಿ ಕರಿಯಿರಿ. ಕಾಯಿ ಚಟ್ನಿಯೊಂದಿಗೆ ಸವಿಯಲು ಇದು ಬಲು ರುಚಿ. ಕೇಕ್
ಬೇಕಾಗುವ ಸಾಮಗ್ರಿ: ಅರ್ಧ ಕಪ್ ಬೆಣ್ಣೆ, ಒಂದು ಕಪ್ ಸಕ್ಕರೆ, ಒಂದು ಮೊಟ್ಟೆ, ಮೂರು ಬಾಳೆಹಣ್ಣು, ಒಂದೂ ಕಾಲು ಕಪ್ ಮೈದಾ, ಚಿಟಿಕೆ ಬೇಕಿಂಗ್ ಸೋಡಾ, ಉಪ್ಪು, ಡ್ರೈ ಫ್ರೂಟ್ಸ್
ಮಾಡುವ ವಿಧಾನ: ಒಂದು ಬಟ್ಟಲಿಗೆ ಬೆಣ್ಣೆ ಮತ್ತು ಸಕ್ಕರೆಯನ್ನು ಹಾಕಿ ಚೆನ್ನಾಗಿ ಕಲಸಿ.ಮಿಶ್ರಣವು ಕ್ರೀಮ್‌ನಂತೆ ಆದಾಗ, ಮೊಟ್ಟೆಯ ದ್ರಾವಣವನ್ನು ಸೇರಿಸಿ ಮತ್ತಷ್ಟು ಕಲಸಿ. ನಂತರ ಕಿವುಚಿದ (ರುಬ್ಬಿದರೂ ಆಗುತ್ತದೆ) ಬಾಳೆಹಣ್ಣನ್ನು ಸೇರಿಸಿ ಬೆರೆಸಿ. ಮೈದಾ ಹಿಟ್ಟು, ಬೇಕಿಂಗ್ ಸೋಡಾ, ರುಚಿಗೆ ಉಪ್ಪು ಸೇರಿಸಿ ಚೆನ್ನಾಗಿ ಮಿಕÕ… ಮಾಡಿ, ಗೋಡಂಬಿ, ಒಣದ್ರಾಕ್ಷಿ, ಬಾದಾಮಿ
ತುಣುಕು ಸೇರಿಸಿ. ಈ ಮಿಶ್ರಣವನ್ನು ತುಪ್ಪ ಸವರಿದ ಪಾತ್ರೆಗೆ ಸುರಿದು, ಕುಕ್ಕರ್ ಒಳಗೆ ಇಟ್ಟು (ನೀರು ಹಾಕಬಾ ರದು) 20 ನಿಮಿಷ ಕಾಲ ಬೇಯಿಸಿದರೆ ಬನಾನ ಕೇಕು ಸಿದ್ಧ.