ಜರುಗಿತು.
Advertisement
ದೀಪಾವಳಿ ಹಾಗೂ ಸಂಕ್ರಾಂತಿ ಹಬ್ಬದ ನಂತರ ಗ್ರಾಮೀಣ ಪ್ರದೇಶಗಳಲ್ಲಿ ಹೋರಿ ಬೆದರಿಸುವ ಹಬ್ಬ ಮಹತ್ವ ಪಡೆದಿದ್ದು, ಅಖಾಡದಲ್ಲಿ ಹೋರಿಗಳು ಓಡಿ ಹೋಗುವುದನ್ನು ನೋಡಲುತಾಲೂಕಿನ ವಿವಿಧ ಗ್ರಾಮಗಳು ಸೇರಿದಂತೆ ನೆರೆಯ ತಾಲೂಕು, ಜಿಲ್ಲೆಗಳಿಂದ ಭಾರೀ ಸಂಖ್ಯೆಯಲ್ಲಿ ಹೋರಿ ಪ್ರಿಯರು ಆಗಮಿಸಿದ್ದರು. ಅಖಾಡದಲ್ಲಿ ಪೈಲ್ವಾನರ ಕೈಗೆ ಸಿಗದಂತೆ ಹೋರಿಗಳು ಓಡಿ ಹೋಗುವ ದೃಶ್ಯ ನೋಡುಗರ ಮೈನವಿರೇಳಿಸಿತು.
ಡಾನ್, ಬಾರಂಗಿ ಓಂಕಾರ, ಶಿಕಾರಿಪುರ ಗಾಂಧಿನಗರದ ಸೂಪರ್, ಯಲವಳ್ಳಿ ಕಲ್ಲೇಶ, ಬೆಣ್ಣಿಗೇರಿಯ ಮಹಾತ್ಮ, ಗಿಣಿವಾಲದ ಉಗ್ರ ನರಸಿಂಹ, ಯಮ್ಮಿಗನೂರು ಕುರುಕ್ಷೇತ್ರ, ಕುಣೇತಪ್ಪದ ಅ ಪತಿ, ಮಾಸೂರಿನ ಎನ್‌ಟಿಸಿ ಸಾಹುಕಾರ್, ನರಸಾಪುರದ ಚಂದು, ಶಾಂತಗೇರಿ ಗೂಳಿ, ಕಪ್ಪನಹಳ್ಳಿ ಅರ್ಭಟ, ಹಾವೇರಿಯ ಹೊಯ್ಸಳ, ಹಿಂದೂ ಸಾಮ್ರಾಟ, ಸಮನವಳ್ಳಿ ಹುಲಿ, ಕಪ್ಪನಹಳ್ಳಿ ಅಂಬಿಗರ ಹುಲಿ, ಕದರಮಂಡಲಗಿ ಕೆಡಿಎಂ ಕಿಂಗ್, ಆನವಟ್ಟಿ ಮಲೆನಾಡು ದಂಗೆ, ರಾಗಿಕೊಪ್ಪ ಬುಲೆಟ್ ರಾಜ, ತಡಸನಹಳ್ಳಿ ತಾಂಡವ, ಪುನೀತ್ ರಾಜಕುಮಾರ ಸವಿನೆನಪಿಗಾಗಿ ಆನವಟ್ಟಿಯ ಪವರ್ ಸ್ಟಾರ್ ಸೇರಿದಂತೆ ವಿವಿಧ ಹೆಸರುಗಳ ಹೋರಿಗಳು ಅಖಾಡದಲ್ಲಿ ಓಡಿದವು. ಯುವಕರು ಹೋರಿಗಳನ್ನು ಹಿಡಿದು ಬಲ ಪ್ರದರ್ಶಿಸಿದರೆ, ಜನತೆ ಅದನ್ನು ನೋಡಿ ರೋಮಾಂಚನಗೊಂಡರು. ಅಖಾಡದಲ್ಲಿ ತೇರಿನಂತೆ ಕಾಣುವ ಪೀಪಿ ಹೋರಿಗಳು ಓಡಿ ಬರುತ್ತಿದ್ದಂತೆ ನೆರೆದವರಿಂದ ಕೇಕೆ, ಶಿಳ್ಳೆ, ಚಪ್ಪಾಳೆಗಳು ಜೋರಾಗಿಯೇ ಕೇಳಿಬಂದಿತು. ಇದನ್ನೂ ಓದಿ : ಬಾಲ್ಯವಿವಾಹ ತಡೆಯುವಲ್ಲಿ ಗ್ರಾ.ಪಂ ಪಾತ್ರ ಮುಖ್ಯ : ಚೈಲ್ಡ್‌ಲೈನ್ 1098 ಸದುಪಯೋಗಕ್ಕೆ ಕರೆ
Related Articles
ಹೋರಿಗಳನ್ನು ಓಡಿಸಿದರು. ಇದರಿಂದ ಯಾವುದೇ ಅಪಾಯ ಸಂಭವಿಸಲಿಲ್ಲ.
Advertisement
ಆಯೋಜಕರು ಉತ್ತಮ ರೀತಿಯಲ್ಲಿ ಸುರಕ್ಷತೆಗೆ ಗಮನ ನೀಡಿದ್ದರು. ಇದು ಸಾರ್ವಜನಿಕರ ಪ್ರಶಂಸೆಗೆ ಪಾತ್ರವಾಯಿತು. ಅಖಾಡದಲ್ಲಿ ಉತ್ತಮವಾಗಿ ಓಡಿದ ಹೋರಿಗಳು ಹಾಗೂ ಬಲ ಪ್ರದರ್ಶನ ತೋರಿದ ಯುವಕರನ್ನು ಗುರುತಿಸಲಾಯಿತು.