ನವದೆಹಲಿ: ಟೋಲ್ ಬೂತ್ ಮಾರ್ಗದಲ್ಲಿ ಬುಲ್ಡೋಜರ್ ಅನ್ನು ಚಲಾಯಿಸಿಕೊಂಡು ಬಂದ ಚಾಲಕನ ಬಳಿ ಶುಲ್ಕ ಪಾವತಿಸುವಂತೆ ಟೋಲ್ ಸಿಬಂದಿ ಕೇಳಿದ್ದಕ್ಕೆ, ಇದರಿಂದ ರೊಚ್ಚಿಗೆದ್ದು ಟೋಲ್ ಬೂತ್ ಅನ್ನೇ ಧ್ವಂಸಗೊಳಿಸಿದ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ.
ಇದನ್ನೂ ಓದಿ:Chitradurga: 1 ವರ್ಷದ ಹಿಂದೆ ಮದುವೆಯಾಗಿದ್ದ ರೇಣುಕಾಸ್ವಾಮಿ… ಪತ್ನಿ 5 ತಿಂಗಳ ಗರ್ಭಿಣಿ
ಟೋಲ್ ಬೂತ್ ನ ಕಬ್ಬಿಣದ ಗೇಟ್ ಅನ್ನು ಬುಲ್ಡೋಜರ್ ನಿಂದ ಕಿತ್ತೆಸೆಯುತ್ತಿರುವ ದೃಶ್ಯವನ್ನು ಟೋಲ್ ಸಿಬಂದಿಗಳು ವಿಡಿಯೋ ಮೂಲಕ ಸೆರೆ ಹಿಡಿದಿದ್ದಾರೆ. ದೆಹಲಿ-ಲಕ್ನೋ ನ್ಯಾಷನಲ್ ಹೈವೇಯ ಹಾಪುರ್ ಟೋಲ್ ಬೂತ್ ನಲ್ಲಿ ಮಂಗಳವಾರ ಬೆಳಗ್ಗೆ ಈ ಘಟನೆ ನಡೆದಿದೆ.
ಟೋಲ್ ಶುಲ್ಕ ಪಾವತಿಸುವಂತೆ ಟೋಲ್ ಬೂತ್ ಸಿಬಂದಿ ಕೇಳುತ್ತಿರುವುದು ವಿಡಿಯೋದಲ್ಲಿ ದಾಖಲಾಗಿದೆ. ನಂತರ ಚಾಲಕ ಬುಲ್ಡೋಜರ್ ನಿಂದ ಟೋಲ್ ಬೂತ್ ಅನ್ನು ಧ್ವಂಸಗೊಳಿಸಿದ್ದಾನೆ ಎಂದು ವರದಿ ವಿವರಿಸಿದೆ.
ಘಟನೆ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದು, ಬುಲ್ಡೋಜರ್ ಚಾಲಕನಿಗಾಗಿ ಶೋಧ ಕಾರ್ಯ ನಡೆಯುತ್ತಿದೆ ಎಂದು ವರದಿ ತಿಳಿಸಿದೆ. ಕಳೆದ ವಾರ ಹಾಪುರ್ ಟೋಲ್ ಬೂತ್ ನಲ್ಲಿ ಕಾರು ಚಾಲಕನೊಬ್ಬ ಶುಲ್ಕ ಪಾವತಿಯನ್ನು ತಪ್ಪಿಸಲು ಮಿತಿಮೀರಿದ ವೇಗದಿಂದ ಬಂದು ಟೋಲ್ ಸಿಬಂದಿಗೆ ಡಿಕ್ಕಿ ಹೊಡೆದು, ಟೋಲ್ ಗೇಟ್ ಅನ್ನು ಮುರಿದುಕೊಂಡು ತೆರಳಿದ್ದ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿತ್ತು.