Advertisement

10.25 ಲಕ್ಷ ರೂ.ದಾಖಲೆ ಬೆಲೆಗೆ ಎತ್ತು ಮಾರಾಟ

05:17 PM May 30, 2023 | Team Udayavani |

ಶ್ರೀರಂಗಪಟ್ಟಣ(ಮಂಡ್ಯ ಜಿಲ್ಲೆ): ತಾಲೂ ಕಿನ ಪಾಲಹಳ್ಳಿ ಗ್ರಾಮದ ರೈತ ನೊಬ್ಬ ಸಾಕಿದ್ದ ಎತ್ತು ಬರೋ ಬ್ಬರಿ 10.25 ಲಕ್ಷ ರೂ.ಗಳಿಗೆ ಮಾರಾಟವಾಗಿದೆ!

Advertisement

ಪಾಲಹಳ್ಳಿ ಗ್ರಾಮದ ವಿನು ಅವರಿಂದ ಚಿಕ್ಕಮಗ ಳೂರಿನ ತೇಗೂರು ಮಂಜಣ್ಣ ಎಂಬುವರು ದುಬಾರಿ ಬೆಲೆಯ ಈ ಹಳ್ಳಿಕಾರ್‌ ತಳಿಯ ಎತ್ತನ್ನು ಖರೀದಿ ಮಾಡಿದ್ದಾರೆ. ರಾಜ್ಯದ ವಿವಿಧೆಡೆ ನಡೆದ ಎತ್ತಿನ ಗಾಡಿ ರೇಸ್‌ನಲ್ಲಿ ಭಾಗವಹಿಸಿದ್ದ “ಬ್ರಾಂಡ್‌ ಅಪ್ಪಣ್ಣ’ ಎಂಬ ಹೆಸರಿನ ಈ ಎತ್ತು ಸಾಕಷ್ಟು ಪ್ರಸಿದ್ಧಿ ಪಡೆದಿತ್ತು.

ಚಿತ್ರನಟ ದರ್ಶನ್‌ ಕೂಡ ಇದನ್ನು ಖರೀ ದಿಸುವ ಇಚ್ಛೆ ವ್ಯಕ್ತಪಡಿಸಿದ್ದರು. ಆದರೆ ಆ ಸಂದರ್ಭದಲ್ಲಿ ಸ್ಪರ್ಧೆಯಲ್ಲಿ ಭಾಗ ವಹಿಸಿದ್ದ ಹಿನ್ನೆಲೆಯಲ್ಲಿ ಅವರಿಗೆ ನೀಡ ಲಾಗಿರಲಿಲ್ಲ ಎಂದು ವಿನು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next