Advertisement
ಕಾಪು : ತುಳುನಾಡಿನಲ್ಲಿ ಯಾವುದೇ ದೇವಸ್ಥಾನ, ದೈವಸ್ಥಾನ ನಿರ್ಮಾಣವಾಗುವುದಿದ್ದರೂ ಅದರಲ್ಲಿ ಮುಂಬಯಿಯಲ್ಲಿ ನೆಲೆಸಿರುವ ತುಳುವರ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಅಂತಹ ಸಾಧನೆಯ ನಡುವೆ ಕರಾವಳಿಯಲ್ಲಿ ಹುಟ್ಟಿ, ಬೆಳೆದು ಮುಂಬಯಿಯಲ್ಲಿ ಸಾಧನೆಗೈದ ತಮ್ಮ ತಾಯಿಯ ಜೊತೆಗೆ, ಕುಟುಂಬದ ಹಿರಿಯರ ನೆನಪಿನಲ್ಲಿ ಮಂದಿರವೊಂದನ್ನು ನಿರ್ಮಿಸಿ, ಅದರಲ್ಲಿ ತಾಯಿಯ ಜೊತೆಗೆ, ಅಜ್ಜಿ ಮತ್ತು ಮುತ್ತಜ್ಜಿಯ ಶಿಲಾ ಮೂರ್ತಿಯನ್ನೂ ಪ್ರತಿಷ್ಟಾಪಿಸುವ ಮೂಲಕ ಮುಂಬಯಿಯಲ್ಲೇ ಮುಟ್ಟಿ ಬೆಳೆದ ಮಕ್ಕಳು ಕರಾವಳಿಯಲ್ಲೇ ಅಪರೂಪವೆಂಬತಂಹ ಸೇವಾ ಕಾರ್ಯವನ್ನು ನಡೆಸಿ, ಮಾದರಿಯಾಗಿದ್ದಾರೆ.
Related Articles
Advertisement
ಅಪ್ರತಿಮ ಸಮಾಜ ಸೇವಕಿ : ಮುಂಬೈ ಮಹಾನಗರದಲ್ಲಿ ಕಾಂಗ್ರೆಸ್ ಪಕ್ಷದ ಕಟ್ಟಾಳುವಾಗಿದ್ದ ಗೀತಾ ಯಾದವ್ ಪೂಜಾರಿ ಅವರು, ಮುಂಬಯಿ ಮಹಾನಗರ ಪಾಲಿಕೆಯ ಕಾರ್ಪೋರೇಟರ್ ಆಗಿ, ರಾಜಕೀಯದ ಜೊತೆಗೆ ವಿವಿಧ ಧಾರ್ಮಿಕ, ಶೈಕ್ಷಣಿಕ ಮತ್ತು ಸಮಾಜ ಸೇವಾ ಕಾರ್ಯಗಳಲ್ಲೂ ಮುಂಚೂಣಿಯಲ್ಲಿ ನಿಂತು ವಿವಿಧ ಸೇವಾ ಕಾರ್ಯಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು. ಮುಂಬೈ ಜೋಸೆಫ್ ಪಠೇಲ್ ಎಸ್ಟೇಟ್ ನವರಾತ್ರಿ ದುರ್ಗಾ ಪೂಜಾ ಮಂಡಲ್‌ನ ಸಂಸ್ಥಾಪಕರಾಗಿದ್ದ ಅವರು, ಮುಂಬೈ ತುಳುನಾಡ ಕನ್ನಡಿಗರ ಜೊತೆಗೂ ಉತ್ತಮ ಭಾಂದವ್ಯವನ್ನು ಹೊಂದಿದ್ದು ಕಾಪು ಪರಿಸರದಲ್ಲಿಯೂ ಸಮಾಜ ಸೇವಾ ಕಾರ್ಯಗಳಲ್ಲಿ ಪಾಲ್ಗೊಳ್ಳುತ್ತಿದ್ದರು. ಕೊರೊನಾ ಸಂದರ್ಭದಲ್ಲಿ ಜನತೆಯ ಪರವಾಗಿ ಅಪಾರ ಸೇವೆ ಸಲ್ಲಿಸಿದ್ದು, ಜನರಿಗೆ ಉಚಿತ ಆಂಬುಲೆನ್ಸ್, ಊಟ, ಮಾಸ್ಕ್, ಸ್ಯಾನಿಟೈಸರ್ ಸಹಿತವಾದ ವಿವಿಧ ಸೊತ್ತುಗಳನ್ನು ವಿತರಿಸಿದ್ದ ಅವರು ಕಳೆದ ವರ್ಷ ಸೆ. 3ರಂದು ಹೃದಯಾಘಾತದಿಂದಾಗಿ ನಿಧನ ಹೊಂದಿದ್ದರು.
27 ಲಕ್ಷ ರೂ. ವೆಚ್ಚ : ಗೀತಾ ಯಾದವ್, ಕಲ್ಯಾಣಿ ಪೂಜಾರ್ತಿ ಮತ್ತು ಮುತ್ತಕ್ಕ ಬೈದಿ ಪೂಜಾರ್ತಿ ಅವರ ನೆನಪಿನಲ್ಲಿ ನಿರ್ಮಿಸಲಾದ ಮಂದಿರವನ್ನು ಗೀತಾ ಯಾದವ್ ಅವರ ವರ್ಷಾಂತಿಕದ ದಿನವಾದ ಸೆ. ೩ರಂದು ಉದ್ಘಾಟಿಸಲಾಗಿದೆ. ಮಂದಿರ ನಿರ್ಮಾಣಕ್ಕೆ ಪಿಂಕ್ ಸ್ಟೋನ್ ವಿಯೆಟ್ನಾಂ ಮಾರ್ಬಲ್‌ನ್ನು ಬಳಸಲಾಗಿದ್ದು, ಪುತ್ಥಳಿ (ಮೂರ್ತಿ) ಕೆತ್ತನೆಗೆ ವೈಟ್ ಸ್ಟೋನ್ ವಿಯೆಟ್ನಾಂ ಮಾರ್ಬಲ್‌ನ್ನು ಬಳಸಲಾಗಿದೆ. ಗುಡಿ ನಿರ್ಮಾಣ, ಪುತ್ಥಳಿ ರಚನೆ, ಮಂದಿರದ ಅಽಷ್ಟಾನದೊಳಗೆ ಮೂರ್ತಿ ಪ್ರತಿಷ್ಟಾಪನೆ ಸಹಿತವಾದ ಜೋಡಣಾ ಕಾರ್ಯಗಳಿಗೆ 27 ಲಕ್ಷ ರೂ. ಖರ್ಚಾಗಿದೆ. ರಾಜಸ್ಥಾನದ ಜೈಪುರದ ಕಾರ್ಮಿಕರ ತಂಡವು ಗುಡಿ ನಿರ್ಮಾಣ ಮತ್ತು ಮೂರ್ತಿ ಕೆತ್ತನಾ ಕಾರ್ಯಗಳ ಕಾಮಗಾರಿಗಳ ಉಸ್ತುವಾರಿ ವಹಿಸಿದ್ದು, ಕಾಮಗಾರಿ ಪೂರ್ಣಗೊಳಿಸಲು 3 ತಿಂಗಳು 22 ದಿನಗಳ ಕಾಲ ಹಿಡಿದಿದೆ.