Advertisement

Bengaluru: ಕಟ್ಟಡ ಕುಸಿತ: ಮೃತರ ಸಂಖ್ಯೆ 8ಕ್ಕೇರಿಕೆ

11:42 PM Oct 23, 2024 | Team Udayavani |

ಬೆಂಗಳೂರು: ಕಳಪೆ ಕಾಮಗಾರಿಯ ನಿರ್ಮಾಣ ಹಂತದ 7 ಅಂತಸ್ತಿನ ಕಟ್ಟಡ ಕುಸಿದು ಬಿದ್ದ ಪ್ರಕರಣದಲ್ಲಿ ಸಾವಿನ ಸಂಖ್ಯೆ 8ಕ್ಕೆ ಏರಿಕೆ ಆಗಿದ್ದು, ಕಟ್ಟಡಗಳ ಅವಶೇಷಗಳಡಿ ಸಿಲುಕಿರುವ ಇಬ್ಬರು ಕಾರ್ಮಿಕರಾಗಿ ಶೋಧ ಕಾರ್ಯ ಮುಂದುವರಿಸಲಾಗಿದೆ.

Advertisement

ಮತ್ತೊಂದೆಡೆ ಪ್ರಕರಣದಲ್ಲೇ ಕಟ್ಟಡ ಮಾಲಕ ಸೇರಿ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಈ ಮಧ್ಯೆ ಲೋಕಾಯುಕ್ತ ಬಿ.ಎಸ್‌. ಪಾಟೀಲ್‌ ಮತ್ತು ತಂಡ ಘಟನ ಸ್ಥಳಕ್ಕೆ ಭೇಟಿ ನೀಡಿ, ಬಿಬಿಎಂಪಿ ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ.

ಕಟ್ಟಡ ಮಾಲಕ ಮುನಿರಾಜು ರೆಡ್ಡಿ ಪುತ್ರ ಭುವನ್‌ ರೆಡ್ಡಿ ಮತ್ತು ಕಟ್ಟಡದ ಗುತ್ತಿಗೆದಾರ ಮನಿಯಪ್ಪನನ್ನು ಬಂಧಿಸಲಾಗಿದೆ. ತಲೆಮರೆಸಿಕೊಂಡಿರುವ ಮುನಿರಾಜು ಮತ್ತು ಆತನ ಮತ್ತೂಬ್ಬ ಪುತ್ರ ಮೋಹನ್‌ ರೆಡ್ಡಿಗಾಗಿ ಶೋಧ ನಡೆಯುತ್ತಿದೆ.

ಆಂಧ್ರಪ್ರದೇಶ ಮೂಲದ ಮುನಿರಾಜು ರೆಡ್ಡಿ ಬಿಬಿಎಂಪಿ ಅಧಿಕಾರಿಗಳಿಗೆ ಲಂಚ ನೀಡಿ ಅನಧಿಕೃತವಾಗಿ ಬಿ-ಖಾತಾ ನಿವೇಶನದಲ್ಲಿ 7 ಅಂತಸ್ತಿನ ಕಟ್ಟಡ ನಿರ್ಮಾಣ ಮಾಡುತ್ತಿದ್ದ. 4 ಅಂತಸ್ತಿನವರೆಗೆ ಕಟ್ಟಡ ನಿರ್ಮಾಣದ ಗುತ್ತಿಗೆ ಪಡೆದುಕೊಂಡಿದ್ದು, ಕಳಪೆ ಸಾಮಗ್ರಿಗಳನ್ನು ಬಳಸಲಾಗುತ್ತಿತ್ತು. ಕಾರ್ಮಿಕರಿಗಾಗಿ ಸುರಕ್ಷತ ಕ್ರಮಗಳನ್ನೂ ಅಳವಡಿಸಿಲ್ಲ ಎಂದು ಪೊಲೀಸರು ಮಾಹಿತಿ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next