Advertisement

Shivamogga: ಬಂಧಿತರು ಬಾಂಗ್ಲಾ ವಲಸಿಗರೇ

12:38 AM Oct 19, 2024 | Shreeram Nayak |

ಶಿವಮೊಗ್ಗ: ಕಟ್ಟಡ ಕಾರ್ಮಿಕರಾಗಿ ಬಂದಿದ್ದವರು ಅಕ್ರಮವಾಗಿ ನುಸುಳಿ ಬಂದ ಬಾಂಗ್ಲಾ ನಿವಾಸಿಗಳು ಎಂದು ಖಚಿತ
ವಾಗಿದ್ದು, ಅವರನ್ನು ಬೆಂಗಳೂರಿನ ವಿದೇಶೀಯರ ಪ್ರಾದೇಶಿಕ ನೋಂದಣಿ ಕಚೇರಿ (ಎಫ್‌ಆರ್‌ಆರ್‌ಒ)ಗೆ ಒಪ್ಪಿಸಲಾಗಿದೆ.

Advertisement

ಅಕ್ರಮ ನಿವಾಸಿಗಳು ಮೊಮಿನ್‌, ಅಶ್ರಫ್‌, ಜೋರುಲ್‌, ನಸೀಮ್‌, ರಹಿಮಾನ್‌, ಅಮಿನುಲ್‌, ಮತಿನ್‌, ಜಾವಿನ್‌ ಎನ್ನಲಾಗಿದೆ. ಅವರು ಮೂಲತಃ ಬಾಂಗ್ಲಾದ ರಾಜ್‌ಶಾಹಿ ಜಿಲ್ಲೆಯವರು. ಇಬ್ಬರ ಬಳಿ ಪಶ್ಚಿಮ ಬಂಗಾಲದ ಗುರುತಿನ ಚೀಟಿಯಿದೆ. ಮೊದಲು ಬಾಂಗ್ಲಾದೇಶದಿಂದ ಪಶ್ಚಿಮ ಬಂಗಾಳಕ್ಕೆ ಬಂದು, ಅಲ್ಲಿಂದ ಚೆನ್ನೈ ಮೂಲಕ ಬೆಂಗಳೂರಿಗೆ ಬಂದಿದ್ದಾರೆ.

ಒಂದೆರಡು ತಿಂಗಳಿನಿಂದ ಇಲ್ಲಿ ಕಟ್ಟಡ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದರು. ಸ್ಥಳೀಯರು ನೀಡಿದ ದೂರಿನ ಮೇರೆಗೆ ಜಯನಗರ ಠಾಣೆಯ ಪೊಲೀಸರು ವಿಚಾರಣೆ ನಡೆಸಿದ್ದು, ಎಫ್‌ಆರ್‌ಆರ್‌ಒಗೆ ಒಪ್ಪಿಸಲಾಗಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next