Advertisement

ನಿಡ್ಪಳ್ಳಿ  ಶಾಲೆಗೆ ರಸ್ತೆ ನಿರ್ಮಿಸಿಕೊಡಿ: ಆಗ್ರಹ

02:50 PM May 06, 2018 | Team Udayavani |

ನಿಡ್ಪಳ್ಳಿ: ಗ್ರಾಮದ ದ.ಕ.ಜಿ.ಪಂ. ಹಿ.ಪ್ರಾ. ಶಾಲೆಯ ವರೆಗೆ ಡಾಮರು ರಸ್ತೆ ನಿರ್ಮಿಸಿಕೊಡುವಂತೆ ವಿದ್ಯಾರ್ಥಿಗಳು ಹಾಗೂ ಪೋಷಕರು ಆಗ್ರಹಿಸಿದ್ದಾರೆ.

Advertisement

ಗುಡ್ಡಗಾಡು ಪ್ರದೇಶವಾದ ನಿಡ್ಪಳ್ಳಿ ಗ್ರಾಮದ ಹೃದಯಭಾಗವಾದ ಶ್ರೀ ಉಳ್ಳಾಕುಲು ದೇವಸ್ಥಾನ, ಶ್ರೀ ಶಾಂತದುರ್ಗಾ ದೇವಸ್ಥಾನ, ನಿಡ್ಪಳ್ಳಿ ಗುತ್ತು ಚಾವಡಿ ಹಾಗೂ ಶಾಲೆಯನ್ನು ಸಂಪರ್ಕಿಸುವ ರಸ್ತೆ ಡಾಮರು ಕಾಣದೆ ಮಳೆಗಾಲದಲ್ಲಿ ಸಂಚರಿಸಲು ಕಷ್ಟಪಡಬೇಕಾಗಿದೆ.

ಕುಕ್ಕುಪುಣಿಯಿಂದ ಶ್ರೀ ಶಾಂತಾದುರ್ಗಾ ದೇವಾಲಯದ ವರೆಗೆ 4-5 ವರ್ಷಗಳ ಹಿಂದೆ ಲೋಕೋಪಯೋಗಿ ಇಲಾಖೆಯ ವತಿಯಿಂದ ಸರ್ವಋತು ರಸ್ತೆ ಆಗಿದೆ. ಈಗ ದೇವಾಲಯದ ಬಳಿಯಿಂದ ಗುತ್ತು ಚಾವಡಿಯ ಮೂಲಕ ದ.ಕ.ಜಿ.ಪಂ. ಹಿರಿಯ ಪ್ರಾಥಮಿಕ ಶಾಲೆಯ ವರೆಗಿನ ಅರ್ಧ ಕಿ.ಮೀ. ರಸ್ತೆ ಮಾತ್ರ ಡಾಮರು ಕಾಣಲು ಬಾಕಿ ಉಳಿದಿದೆ. ಈ ರಸ್ತೆಯ ಎರಡೂ ಕಡೆ ಗದ್ದೆ ಗಳು ಇದ್ದು, ಮಳೆಗಾಲದಲ್ಲಿ ಗದ್ದೆಯ ನೀರು ರಸ್ತೆಯಲ್ಲಿ ಹರಿದು ವಾಹನ ಸವಾರರಿಗೂ, ಪಾದಾಚಾರಿಗಳಿಗೂ, ಶಾಲಾ ಮಕ್ಕಳಿಗೂ ತೊಂದರೆಯಾಗುತ್ತಿದೆ. ನೀರು ಹರಿಯಲು ಇಲ್ಲಿ ಸರಿಯಾದ ಚರಂಡಿ ವ್ಯವಸ್ಥೆ ಇಲ್ಲ. ಶಿಕ್ಷಣ ಇಲಾಖೆ ಅಧಿಕಾರಿಗಳು ಈ ಬಗ್ಗೆ ಗಮನ ಹರಿಸಿ, ರಸ್ತೆ ನಿರ್ಮಾಣಕ್ಕೆ ಒತ್ತಡ ಹೇರಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಜೂನ್‌ ಒಳಗೆ ಮಾಡಿಸಿ
ನಾನು ಈ ಶಾಲೆಯಲ್ಲಿ ಕರ್ತವ್ಯಕ್ಕೆ ಬಂದು 16 ವರ್ಷಗಳು ಕಳೆದಿವೆ. ರಸ್ತೆ ದುರಸ್ತಿಗಾಗಿ ಸಂಬಂಧಿಸಿದ ಇಲಾಖೆಗೆ ಮನವಿ ಮಾಡಿದ್ದರೂ ಈವರೆಗೆ ಸ್ಪಂದನೆ ಸಿಕ್ಕಿಲ್ಲ. ಮಳೆಗಾಲದಲ್ಲಿ ನೀರು ಸಂಚಾರಕ್ಕೆ ಅಡಚಣೆ ಮಾಡುತ್ತಿದೆ. ಕ್ಲಸ್ಟರ್‌ ಮಟ್ಟದಲ್ಲಿ ಅತಿ ಹೆಚ್ಚು ಮಕ್ಕಳು ಇರುವ ಶಾಲೆ ಇದು. ಜೂನ್‌ ಒಳಗಾದರೂ ರಸ್ತೆ ಡಾಮರು ಕಾಮಗಾರಿ ಮುಗಿಯಲಿ ಎಂದು ಶಾಲೆಯ ಮುಖ್ಯಗರು ಕೆ. ತೋಪಯ್ಯ ಆಗ್ರಹಿಸಿದ್ದಾರೆ.ಥಮಿಕ ಶಾಲೆ ವರೆಗಿನ ರಸ್ತೆ ಡಾಮರು ಕಾಮಗಾರಿಗಾಗಿ ಗ್ರಾ.ಪಂ.ನಿಂದ ಹಿಡಿದು ಜಿ.ಪಂ.ವರೆಗೂ ಹಲವು ಬಾರಿ ಮನವಿ ನೀಡಿದರೂ ಸ್ಪಂದನೆ ಸಿಕ್ಕಿಲ್ಲ. ಮಕ್ಕಳ ಹಿತದೃಷ್ಟಿಯಿಂದ ಇಲ್ಲಿ ಡಾಮರು ಅಥವಾ ಕಾಂಕ್ರೀಟ್‌ ಕಾಮಗಾರಿ ಆರಬೇಕು ಎಂದು ಎಸ್‌ಡಿಎಂಸಿ ಮಾಜಿ ಅಧ್ಯಕ್ಷ ಚಂದ್ರಶೇಖರ ಪ್ರಭು ಒತ್ತಾಯಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next