ಸಿವಿಲ್ ಎಂಜಿನಿಯರಿಂಗ್ ಕ್ಷೇತ್ರದಲ್ಲಿ ಅವಕಾಶಗಳು ಕಡಿಮೆ ಎಂಬುವುದಾಗಿ ಈ ಹಿಂದೆ ಭ್ರಮೆ ಹುಟ್ಟಿಸಲಾಗಿತ್ತು. ಸದ್ಯ ಕಾಲ ಬದಲಾಗಿದ್ದು, ಹೆಚ್ಚಿನ ಅವಕಾಶಗಳಿವೆ. ದೇಶದಲ್ಲಿ ಅನೇಕ ರಸ್ತೆ, ಕಟ್ಟಡ ನಿರ್ಮಾಣಗಳು ನಡೆಯುತ್ತಿದೆ. ಸರ್ವೆ, ಡ್ರಾಯಿಂಗ್, ಕ್ಯಾಡ್, ಪಬ್ಲಿಕ್ ಹೆಲ್ತ್ ಎಂಜಿನಿಯರಿಂಗ್ ಸಹಿತ ಇನ್ನಿತರ ಕ್ಷೇತ್ರಗಳಲ್ಲಿ ಹಲವಾರು ಅವಕಾಶಗಳು ತೆರೆದುಕೊಳ್ಳುತ್ತಿವೆ.
Advertisement
.ಮಕ್ಕಳು ಡಾಕ್ಟರ್, ಎಂಜಿನಿಯರೇ ಆಗಿರಬೇಕು ಎಂದು ಬಯಸುವ ಹೆತ್ತವರಿಗೆ ನಿಮ್ಮ ಕಿವಿ ಮಾತು ಏನು?ತಮ್ಮ ಮಕ್ಕಳು ಎಂಜಿನಿಯರ್ ಅಥವಾ ಡಾಕ್ಟರ್ ಆಗಬೇಕೆಂಬ ಕ್ರೇಜ್ ಹೆತ್ತವರಲ್ಲಿ ಇತ್ತೀಚೆಗೆ ಪ್ರಾರಂಭವಾಗಿದೆ. ಕಳೆದ ಕೆಲವು ವರ್ಷಗಳ ಹಿಂದೆ ಡಾಕ್ಟರ್, ಎಂಜಿನಿಯರ್ ಕಲಿತ ವಿದ್ಯಾರ್ಥಿಗಳಿಗೆ ಉದ್ಯೋಗದಲ್ಲಿ ಹೆಚ್ಚಿನ ಅವಕಾಶವಿತ್ತು. ಆದರೆ ಈಗ ಕಾಲ ಬದಲಾಗಿದ್ದು, ಈ ಕ್ಷೇತ್ರ ಬಿಟ್ಟು ಉಳಿದ ಕ್ಷೇತ್ರಗಳಲ್ಲೂ ಸಾಕಷ್ಟು ಉದ್ಯೋಗವಕಾಶಗಳಿವೆ. ಅಷ್ಟೇ ಅಲ್ಲದೆ, ಇತ್ತೀಚಿನ ದಿನಗಳಲ್ಲಿ ಶಿಕ್ಷಣದ ಗುಣಮಟ್ಟ ಕುಸಿದಿದ್ದು, ವಿದ್ಯಾರ್ಥಿಗಳಿಗೆ ಪ್ರಾಥಮಿಕ ಜ್ಞಾನ ಕಡಿಮೆಯಾಗುತ್ತಿದೆ.
ಈ ಬಗ್ಗೆ ಸರಕಾರವೇ ಕಾನೂನು ತರಬೇಕಿದೆ. ಪ್ರತಿಯೊಬ್ಬ ವಿದ್ಯಾರ್ಥಿಗಳಲ್ಲಿ ತಾನು ಗ್ರಾಮೀಣ ಪ್ರದೇಶದಲ್ಲಿ ಸೇವೆ ಸಲ್ಲಿಸಬೇಕು ಎಂಬ ಆಸಕ್ತಿ ಹುಟ್ಟಿಸಬೇಕು. ಆದರೆ ಸದ್ಯ ಶಿಕ್ಷಣ ಕಲಿಯಲು ಖರ್ಚಾದ ಎರಡರಷ್ಟು ಹಣ ಸಂಪಾದನೆ ಮಾಡಬೇಕೆಂಬ ಆಸೆ ಹೆಚ್ಚಾಗಿದೆ. .ಸಿವಿಲ್ ಎಂಜಿನಿಯರ್‌ಗಳೆಂದರೆ ನಮಗೆ ಬದುಕಲು ಬೇಕಾದುದ್ದನ್ನು ತಯಾರಿಸುವುದು, ಅದನ್ನು ಉತ್ತಮಗೊಳಿಸುವುದು ಮತ್ತು ಪರಿಸರವನ್ನು ರಕ್ಷಿಸುವವರು ಎನ್ನಲಾಗುತ್ತದೆ. ಆದರೆ ಇದು ನಿಜವಾಗಿಯೂ ಪಾಲನೆಯಾಗುತ್ತಿದೆಯೇ?
ಇಲ್ಲ. ಸಿವಿಲ್ ಎಂಜಿನಿಯರಿಂಗ್ ವಿದ್ಯಾರ್ಥಿ ಯಾವುದೇ ಕಟ್ಟಡ ಕಟ್ಟಿದರೂ ಅದು ಪರಿಸರ ಸ್ನೇಹಿಯಾಗಬೇಕು. ಆದರೆ ಇತ್ತೀಚಿನ ದಿನಗಳಲ್ಲಿ ಕಟ್ಟಡದ ಬಾಳಿಕೆ, ಗುಣಮಟ್ಟ ಕಡಿಮೆಯಾಗುತ್ತಿದೆ. ಈ ಬಗ್ಗೆ ವಿದ್ಯಾರ್ಥಿಗಳು ಗಮನಹರಿಸಬೇಕಾಗಿದೆ.
Related Articles
ಸಿವಿಲ್ ಎಂಜಿನಿಯರಿಂಗ್ ಉಳಿದ ಎಂಜಿನಿಯರಿಂಗ್ ಶಿಕ್ಷಣಕ್ಕೆ ಬೇಸಿಕ್ ಆಗಿದೆ. ಸಿವಿಲ್ ಎಂಜಿನಿಯರಿಂಗ್ ಕ್ಷೇತ್ರದಲ್ಲಿ ದಿನದಿಂದ ದಿನಕ್ಕೆ ಹೊಸ ಹೊಸ ತಂತ್ರಜ್ಞಾನಗಳು ಮಾರುಕಟ್ಟೆಗೆ ಬರುತ್ತಿದೆ. ವಿದ್ಯಾರ್ಥಿಗಳಿಗೆ ಇದರ ಬಗ್ಗೆ ಜ್ಞಾನ ಅಗತ್ಯ. ಅಲ್ಲದೆ, ಉದ್ಯೋಗಾವಕಾಶ ಪಡೆದುಕೊಳ್ಳಲು ತಯಾರಿ ಮಾಡುಕೊಳ್ಳುವುದು ಕೂಡ ಸವಾಲಾಗಿದೆ.
Advertisement
ನವೀನ್ ಭಟ್ ಇಳಂತಿಲ